ETV Bharat / bharat

ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾದ ಸೂಪರ್​ ಸ್ಟಾರ್ ರಜಿನಿಕಾಂತ್​ - latest updates from raginikant

rajinikant
ರಜಿನಿಕಾಂತ್​
author img

By

Published : Dec 27, 2020, 3:24 PM IST

Updated : Dec 27, 2020, 3:58 PM IST

15:22 December 27

ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾದ ಸೂಪರ್​ ಸ್ಟಾರ್ ರಜಿನಿಕಾಂತ್​

ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ
ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ

ಹೈದರಾಬಾದ್: ಎರಡು ದಿನಗಳಿಂದ ರಕ್ತದೊತ್ತಡದ ಏರುಪೇರು ವಿಚಾರಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದ ಸೂಪರ್​ಸ್ಟಾರ್ ರಜಿನಿಕಾಂತ್ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  

ಒಂದು ವಾರದವರೆಗೆ ವಿಶ್ರಾಂತಿ ಪಡೆಯಬೇಕೆಂದು ಹಾಗೂ ಒತ್ತಡಕ್ಕೆ ಒಳಗಾಗದೇ ಸ್ವಲ್ಪ ವ್ಯಾಯಾಮ ಮಾಡುವಂತೆ ಅಪೋಲೋ ಆಸ್ಪತ್ರೆಯ ವೈದ್ಯರು ತಾವು ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.  

ಇದನ್ನೂ ಓದಿ: ಕೇರಳದ ಕಿರಿಯ ಮೇಯರ್​ಗೆ ಕರೆ ಮಾಡಿ ಶುಭ ಕೋರಿದ ನಟ ಮೋಹನ್​ ಲಾಲ್

ಸದ್ಯಕ್ಕೆ ಚೆನ್ನೈಗೆ ತೆರಳಲು ರಜಿನಿಕಾಂತ್ ಸಿದ್ಧತೆ ನಡೆಸುತ್ತಿದ್ದು,  ಕೆಲವೇ ಗಂಟೆಗಳಲ್ಲಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.  ಕಳೆದ 10 ದಿನಗಳಿಂದ ಹೈದರಾಬಾದ್​ನಲ್ಲಿದ್ದ ರಜಿನಿಕಾಂತ್  'ಅಣ್ಣಾತೆ' ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು.  

ಡಿಸೆಂಬರ್ 25 ರಂದು ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿದ್ದು ಕೂಡಲೇ ಚಿತ್ರತಂಡ ರಜಿನಿ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಈಗ ಚಿಕಿತ್ಸೆ ಪೂರ್ಣಗೊಂಡಿದ್ದು, ರಜಿನಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Last Updated : Dec 27, 2020, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.