ETV Bharat / bharat

ಅಬ್ಬಾ 3.2 ಕಿ.ಮೀ ಉದ್ದದ ಶೇಷನಾಗ.. ನಾಗ್ಪುರಕ್ಕೆ ಬರೋಬ್ಬರಿ 16 ಸಾವಿರ ಟನ್​ ಕಲ್ಲಿದ್ದಲು ಸಾಗಣೆ! ಯಾರಿವರು ಶೇಷನಾಗ? - ಕಲ್ಲಿದ್ದಲು ಬಿಕ್ಕಟ್ಟನ್ನು ನೀಗಿಸಲು ರೈಲ್ವೆಯು ಕೊರಬಾದಿಂದ ನಾಗ್ಪುರಕ್ಕೆ ಒಂದೇ ಬಾರಿಗೆ 16000 ಟನ್ ಕಲ್ಲಿದ್ದಲು ರವಾನೆ

ನಾಲ್ಕು ಬ್ರೇಕ್ ವಾಹನಗಳು ಸೇರಿದಂತೆ ಒಟ್ಟು 12 ಸಿಬ್ಬಂದಿಯೊಂದಿಗೆ ಕೊರಬಾದಿಂದ ನಾಗ್ಪುರಕ್ಕೆ ವಿಶೇಷ ರೈಲನ್ನು ರವಾನಿಸಲಾಗಿದೆ. ಗೂಡ್ಸ್ ರೈಲುಗಳ ನಾಲ್ಕು ರೇಕ್‌ಗಳಲ್ಲಿ ಒಟ್ಟು 232 ವ್ಯಾಗನ್‌ಗಳನ್ನು ಕಳುಹಿಸಿಕೊಡಲಾಗಿದೆ.

super-sheshnag-train-from-korba-to-solve-coal-crisis-in-maharashtra
ಅಬ್ಬಾ 3.2 ಕಿ.ಮೀ ಉದ್ದದ ಶೇಷನಾಗ.. ನಾಗ್ಪುರಕ್ಕೆ ಬರೋಬ್ಬರಿ 16 ಸಾವಿರ ಟನ್​ ಕಲ್ಲಿದ್ದಲು ಸಾಗಣೆ! ಯಾರಿವರು ಶೇಷನಾಗ?
author img

By

Published : May 17, 2022, 8:10 PM IST

Updated : May 17, 2022, 8:40 PM IST

ಕೊರಬಾ(ಛತ್ತೀಸ್​ಗಢ): ಕಲ್ಲಿದ್ದಲು ಬಿಕ್ಕಟ್ಟನ್ನು ನೀಗಿಸಲು ರೈಲ್ವೆಯು ಕೊರಬಾದಿಂದ ನಾಗ್ಪುರಕ್ಕೆ ಒಂದೇ ಬಾರಿಗೆ 16000 ಟನ್ ಕಲ್ಲಿದ್ದಲನ್ನು ರವಾನಿಸಿದೆ. ಇದಕ್ಕಾಗಿ ನಾಲ್ಕು ಗೂಡ್ಸ್ ರೈಲುಗಳನ್ನು ಜೋಡಿಸಿ ಸೂಪರ್ ಶೇಷನಾಗ್ ರೈಲು ನಿರ್ಮಿಸಲಾಗಿದೆ. ಈ ರೈಲಿನಲ್ಲಿ ನಾಲ್ಕು ಇಂಜಿನ್​ಗಳು ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ.

ರೈಲ್ವೆಯ ಹೊಸ ದಾಖಲೆ: ನಾಲ್ಕು ಬ್ರೇಕ್ ವಾಹನಗಳು ಸೇರಿದಂತೆ ಒಟ್ಟು 12 ಸಿಬ್ಬಂದಿಯೊಂದಿಗೆ ಕೊರಬಾದಿಂದ ನಾಗ್ಪುರಕ್ಕೆ ವಿಶೇಷ ರೈಲನ್ನು ರವಾನಿಸಲಾಗಿದೆ. ಗೂಡ್ಸ್ ರೈಲುಗಳ ನಾಲ್ಕು ರೇಕ್‌ಗಳಲ್ಲಿ ಒಟ್ಟು 232 ವ್ಯಾಗನ್‌ಗಳನ್ನು ಕಳುಹಿಸಿಕೊಡಲಾಗಿದೆ. ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಕಲ್ಲಿದ್ದಲನ್ನು ರವಾನಿಸುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ.

3 ಕಿಲೋಮೀಟರ್‌ಗಿಂತ ಹೆಚ್ಚು ಉದ್ದವಾಗಿದೆ ಈ ಸೂಪರ್ ಶೇಷನಾಗ ರೈಲು: ನಾಲ್ಕು ಸರಕು ರೈಲುಗಳನ್ನು ಜೋಡಿಸುವ ಮೂಲಕ ಸೂಪರ್ ಶೇಷನಾಗ ರೈಲು ತಯಾರಿಸಲಾಗಿದೆ. ಇದರ ಉದ್ದ 3.2 ಕಿಲೋಮೀಟರ್. ಮಹಾರಾಷ್ಟ್ರದ ನಾಸಿಕ್ ಬಳಿ ಕಾರ್ಯನಿರ್ವಹಿಸುತ್ತಿರುವ ಸರ್ ರತನ್ ವಿದ್ಯುತ್ ಸ್ಥಾವರಕ್ಕೆ ಸೋಮವಾರ ಮಧ್ಯಾಹ್ನ 12:00 ರ ಸುಮಾರಿಗೆ ಕೊರಬಾದಿಂದ ಈ ರೈಲನ್ನು ಕಳುಹಿಸಲಾಗಿದೆ. ಇದರಲ್ಲಿ 16000 ಟನ್ ಕಲ್ಲಿದ್ದಲನ್ನು ತುಂಬಲಾಗಿದ್ದು, ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಕಲ್ಲಿದ್ದಲು ರವಾನೆಯಾಗಿರುವುದು ಹೊಸ ದಾಖಲೆಯಾಗಿದೆ.

ಶೇಷನಾಗ ಪಯಣ: ಈ ಮೊದಲು ಕೂಡ ಶೇಷನಾಗ ರೈಲು ಓಡಿಸಲಾಗಿತ್ತು. ಕಳೆದ ವರ್ಷ ಎರಡು ಗೂಡ್ಸ್ ರೈಲುಗಳನ್ನು ಸಂಪರ್ಕಿಸುವ ಮೂಲಕ ಶೇಷನಾಗ್ ರೈಲನ್ನು ಓಡಿಸಲಾಗಿತ್ತು. ಆದರೆ, ಈ ಬಾರಿ ನಾಲ್ಕು ಸರಕು ರೈಲುಗಳನ್ನು ಸಂಪರ್ಕಿಸುವ ಮೂಲಕ ಕೊರಬಾದಿಂದ ಸೂಪರ್ ಶೇಷನಾಗ ರೈಲಿಗೆ ಫ್ಲ್ಯಾಗ್ ಆಫ್ ಮಾಡಿದ್ದು ಇದೇ ಮೊದಲು.

ಅಬ್ಬಾ 3.2 ಕಿ.ಮೀ ಉದ್ದದ ಶೇಷನಾಗ

ಛತ್ತೀಸ್‌ಗಢ ಎಕ್ಸ್‌ಪ್ರೆಸ್ ವಿಳಂಬ: ಶೇಷನಾಗ ಸುಮಾರು 3.2 ಕಿ ಮೀ ಉದ್ದ ಇರುವ ಕಾರಣ, ಸಿಂಗಲ್ ಟ್ರ್ಯಾಕ್‌ನಲ್ಲಿ ರೈಲುಗಳು ಹಾದುಹೋಗಲು ಸಮಸ್ಯೆಯಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಛತ್ತೀಸ್‌ಗಢ ಎಕ್ಸ್‌ಪ್ರೆಸ್‌ ರೈಲು ಕೆಲಕಾಲ ಸಂಚಾರವನ್ನ ಸ್ಥಗಿತಗೊಳಿಸಿತ್ತು.

ಪ್ರಯಾಣಿಕರಿಗೆ ತೊಂದರೆ: ಶೇಷನಾಗ ಸರಕು ಸಾಗಣೆ ರೈಲು ಸಂಚಾರದ ಹಿನ್ನೆಲೆ ಛತ್ತೀಸ್‌ಗಢ ಎಕ್ಸ್‌ಪ್ರೆಸ್ ರೈಲು ಅರ್ಧ ಗಂಟೆ ತಡವಾಗಿ ಬಿಲಾಸ್‌ಪುರ ತಲುಪಿತು. ಇದರಿಂದ ಪ್ರಯಾಣಿಕರು ಗಲಾಟೆ ಕೂಡಾ ಮಾಡಿದರು. ಆದರೆ, ರೈಲ್ವೇ ಈ ಆರೋಪವನ್ನು ತಳ್ಳಿ ಹಾಕಿದೆ. ಹೆಚ್ಚಿನ ಸಮಸ್ಯೆ ಏನೂ ಆಗಿರಲಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದೆ.

ಮಳೆಗಾಲಕ್ಕೂ ಮುನ್ನ ಕಲ್ಲಿದ್ದಲು ವಿತರಣೆಗೆ ಆದ್ಯತೆ: ಏಪ್ರಿಲ್‌ನಲ್ಲಿ ರೈಲ್ವೆ ಇಲಾಖೆಯ ಸುತ್ತೋಲೆ ಹೊರಡಿಸಿದ್ದು, ಮುಂಗಾರು ಪೂರ್ವದಲ್ಲಿ ವಿದ್ಯುತ್‌ ವಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕಲ್ಲಿದ್ದಲು ತಲುಪಿಸುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಸಾಕಷ್ಟು ಕಲ್ಲಿದ್ದಲು ಸಂಗ್ರಹಣೆ ಇದ್ದು, ಇದನ್ನು ಅವಶ್ಯಕ ಜಾಗಕ್ಕೆ ತಲುಪಿಸುವುದು ರೈಲ್ವೆಯ ಆದ್ಯತೆಯಾಗಿದೆ ಎಂದು ರೈಲ್ವೆ ಹೇಳಿಕೊಂಡಿದೆ.

ಇದನ್ನು ಓದಿ;118 ಲೀಟರ್ ಎದೆಹಾಲು ಮಾರಾಟ ಮಾಡಿದ ಅಮೆರಿಕದ​ ಮಹಿಳೆ..!

Last Updated : May 17, 2022, 8:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.