ಗುವಾಹಟಿ( ಅಸ್ಸೋಂ): ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಬಿಹಾರದ ಸುಪಾರಿ ಕಿಲ್ಲರ್ ಮೃತಪಟ್ಟಿರುವ ಘಟನೆ ಅಸ್ಸೋಂನ ರೈಲ್ ಸಿಟಿ ಲುಮ್‌ಡಿಂಗ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಲುಮ್‌ಡಿಂಗ್‌ನಲ್ಲಿ ನಡೆದಿದ್ದ ಭಾರತೀಯ ರೈಲ್ವೆ ಉದ್ಯೋಗಿ ತರುಣ್ ಚಕ್ರವರ್ತಿ ಹತ್ಯೆಯಲ್ಲಿ ಈತನ ಹೆಸರು ಕೇಳಿ ಬಂದಿತ್ತು.
ಹೀಗಾಗಿ ಅಸ್ಸೋಂ ಪೊಲೀಸರು ಬಿಹಾರ ಮೂಲದ ಮೋಹನ್ ಕುಮಾರ್ನನ್ನು ಡಿಸೆಂಬರ್ 9 ರಂದು ಬೊಂಗೈಗಾಂವ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದರು. ನಿಲ್ದಾಣದಲ್ಲಿ ಬಿಹಾರಕ್ಕೆ ತೆರಳುವ ರೈಲಿಗಾಗಿ ಕಾಯುತ್ತಿದ್ದಾಗ ಮೋಹನ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ರಾತ್ರಿ ಪೊಲೀಸರು ತರುಣ್ ಚಕ್ರವರ್ತಿ ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮೋಹನ್ ಕುಮಾರ್ನನ್ನು ಸ್ಥಳಕ್ಕೆ ಕರೆದೊಯ್ದಿದ್ದರು. ಶಸ್ತ್ರಾಸ್ತ್ರಗಳನ್ನು ಇರಿಸಲಾಗಿರುವ ರಹಸ್ಯ ಸ್ಥಳವನ್ನು ತೋರಿಸಿದ ನಂತರ, ಮೋಹನ್ ಕುಮಾರ್ ಪಿಸ್ತೂಲ್‌ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ.
ಇದನ್ನೂ ಓದಿ: ಮದನಪಲ್ಲಿ ರೌಡಿಶೀಟರ್ ಮೇಲೆ ಗುಂಡಿನ ದಾಳಿ ಪ್ರಕರಣ : ಮೂವರ ಬಂಧನ
ಬಳಿಕ ಪೊಲೀಸರು ಹಲವು ಬಾರಿ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಮೋಹನ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಅವನು ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಮೋಹನ್ ಕುಮಾರ್ ಬಳಸುತ್ತಿದ್ದ ಪಿಸ್ತೂಲ್ ಜತೆಗೆ ಎರಡು ದೇಶಿ ನಿರ್ಮಿತ ಬಂದೂಕುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಶರ್ಮಾ ಸಿಎಂ ಆದ ಬಳಿಕ ನಡೆಯುತ್ತಿರುವ 172ನೇ ಎನ್‌ಕೌಂಟರ್: ಹಿಮಂತ್ ಬಿಸ್ವಾ ಶರ್ಮಾ ಅಧಿಕಾರಕ್ಕೆ ಬಂದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಅಪರಾಧಿಗಳೊಂದಿಗೆ ಪೊಲೀಸರು ನಡೆಸುತ್ತಿರುವ 172ನೇ ಎನ್‌ಕೌಂಟರ್ ಇದು. ಹೀಗೆ ಅಸ್ಸೋಂ ಪೊಲೀಸರ ಕೈಯಲ್ಲಿ ಎನ್‌ಕೌಂಟರ್ ಆದ 57ನೇ ಆರೋಪಿಯಾಗಿದ್ದಾನೆ ಮೋಹನ್ ಕುಮಾರ್