ETV Bharat / bharat

ಬಂಪರ್​​​​... ಹಸು ಸಾಕಣೆದಾರರಿಗೆ 305 ಕೋಟಿ ಬೋನಸ್!​

author img

By

Published : May 15, 2023, 5:49 PM IST

ಸೂರತ್ ಹಾಗೂ ತಾಪಿ ಜಿಲ್ಲೆಗಳ ದನಗಾಹಿಗಳಿಗೆ ವಾರ್ಷಿಕವಾಗಿ ಬೋನಸ್​ ನೀಡುವುದಾಗಿ ಸುಮುಲ್​ ಡೈರಿ ಅಧ್ಯಕ್ಷ ಮಾನ್ಸಿಂಗ್​ಭಾಯ್ ಪಟೇಲ್ ಘೋಷಿಸಿದ್ದಾರೆ.

ದನಗಾಹಿ
ದನಗಾಹಿ

ಸೂರತ್ (ಗುಜರಾತ್​): ಸೂರತ್ ಮತ್ತು ತಾಪಿ ಜಿಲ್ಲೆಗಳ ಜಾನುವಾರು ಸಾಕಣೆದಾರರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ಸುಮುಲ್ ಡೈರಿಯು ಜೂನ್ 5 ರಂದು ದನಗಾಹಿಗಳಿಗೆ 305 ಕೋಟಿ ಬೋನಸ್ ನೀಡಲಿದೆ ಎಂದು ಸುಮುಲ್ ಡೈರಿ ಅಧ್ಯಕ್ಷ ಮಾನ್ಸಿಂಗ್‌ಭಾಯ್ ಪಟೇಲ್ ಘೋಷಿಸಿದ್ದಾರೆ.

ಇದರಿಂದಾಗಿ ಇಡೀ ಜಾನುವಾರು ಸಾಕಣೆದಾರರಲ್ಲಿ ಸಂತಸದ ಅಲೆ ಕಾಣುತ್ತಿದೆ. ಸುಮುಲ್ ಡೈರಿ ನಿರ್ದೇಶಕರ ಪ್ರಕಾರ, ಜೂನ್ 5 ರಂದು 305 ಕೋಟಿ ರೂ ಗಳ ಬೋನಸ್ ನೀಡಲಾಗುವುದು. ಹಾಲು ಉತ್ಪಾದಕರಿಗೆ ವಿಶೇಷವಾಗಿ ರೂ 100 ಬೋನಸ್ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ.

ಸುಮುಲ್ ಡೈರಿಯ ಲಾಭದಲ್ಲಿ ದನ ಕಾಯುವವರಿಗೆ ಬೋನಸ್: ತಾಪಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘವು 2.50 ಲಕ್ಷ ಜಾನುವಾರುಗಳಿಗೆ ಪ್ರತಿ ಕಿಲೋಫೀಟ್ ಹಾಲಿಗೆ 110 ರೂ.ಗಳನ್ನು ಶೀಘ್ರದಲ್ಲೇ ನೀಡಲಿದೆ ಎಂದು ಸುಮುಲ್ ಡೈರಿ ಅಧ್ಯಕ್ಷ ಮಾನಸಿಂಗ್‌ಭಾಯ್ ಪಟೇಲ್ ಘೋಷಿಸಿದ್ದಾರೆ. ಈ ಬೆಲೆ ಬದಲಾವಣೆಯು ಕಳೆದ ಮೂರು ವರ್ಷಗಳಲ್ಲಿ ಗರಿಷ್ಠವಾಗಿದೆ. ಕಳೆದ ಎರಡು ವರ್ಷಗಳಲ್ಲಿ 86 ಹಾಗೂ 92 ರೂ. ನೀಡಿದ್ದು, ಈ ವರ್ಷ 110 ರೂ. ನೀಡಲು ನಿರ್ಧರಿಸಲಾಗಿದೆ. ಸಾಮಾನ್ಯವಾಗಿ, ಒಂದು ವರ್ಷದಲ್ಲಿ ರೈತರಿಗೆ ಸರಬರಾಜು ಮಾಡುವ ಹಾಲಿನ ವೆಚ್ಚವನ್ನು ಅಂದಾಜು ಮಾಡಲಾಗುತ್ತದೆ. ಆದರೆ, ವರ್ಷಾಂತ್ಯದಲ್ಲಿ ಸುಮುಲ್ ಡೈರಿಯ ಲಾಭದಲ್ಲಿ ದನ ಕಾಯುವವರಿಗೆ ಬೋನಸ್ ನೀಡಲಾಗುತ್ತದೆ.

2.50 ಲಕ್ಷ ದನಗಾಹಿಗಳಿಗೆ ಹೆಚ್ಚಿನ ಪ್ರಯೋಜನ: ''ತಾಪಿ ಜಿಲ್ಲೆಯ ದನಗಾಹಿಗಳಿಗೆ ವಾರ್ಷಿಕ ಬೋನಸ್ ನೀಡುವುದಾಗಿ ಸುಮುಲ್ ಡೈರಿ ಅಧ್ಯಕ್ಷ ಮಾನ್ಸಿಂಗ್‌ಭಾಯ್ ಪಟೇಲ್ ಘೋಷಿಸಿದ್ದಾರೆ. ಜೂ. 5ರಂದು 305 ಕೋಟಿ ರೂ. ಬೋನಸ್ ನೀಡಲಾಗುವುದು. ವಿಶೇಷವಾಗಿ ಹಾಲು ಉತ್ಪಾದಕರಿಗೆ 100 ರೂ. ಬೋನಸ್ ನೀಡಲಾಗುವುದು. 5 ರೂ.ಗಳನ್ನು ಉಳಿತಾಯದ ರೂಪದಲ್ಲಿ ವಿತರಿಸಲಾಗುವುದು. ಇದು ಅವರ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು 2.50 ಲಕ್ಷ ದನಗಾಹಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ'' ಎಂದು ಸುಮುಲ್ ಡೈರಿ ನಿರ್ದೇಶಕ ಜಯೇಶ್ ಪಟೇಲ್ ಅವರು ತಿಳಿಸಿದ್ದಾರೆ.

ಕಿಸಾನ್ ಮೇಳದಲ್ಲಿ 72 ಲೀಟರ್​ ಹಾಲು ನೀಡಿದ ಹರಿಯಾಣದ ಹಸು: ಇನ್ನೊಂದೆಡೆ ಲೂಧಿಯಾನದಲ್ಲಿ ನಡೆದ ಡೈರಿ ಮತ್ತು ಕಿಸಾನ್ ಮೇಳ(ಫೆಬ್ರವರಿ 6-2023) ರಲ್ಲಿ ಹರಿಯಾಣದ ಹಸುವೊಂದು 24 ಗಂಟೆಗಳಲ್ಲಿ 72 ಲೀಟರ್​ ಹಾಗೂ 400 ಮಿಲಿಲೀಟರ್​ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಿತ್ತು. ಲೂಧಿಯಾನದ ಜಾಗರಾನ್‌ನಲ್ಲಿ ನಡೆದ ಡೈರಿ ಮತ್ತು ಕಿಸಾನ್ ಮೇಳದಲ್ಲಿ ಹರಿಯಾಣದ ಹಸುವೊಂದು ವಿನೂತನ ದಾಖಲೆ ಬರೆದಿತ್ತು. 24 ಗಂಟೆಗಳಲ್ಲಿ 72 ಲೀಟರ್​ 400 ಮಿಲಿ ಲೀಟರ್​ ಹಾಲು ನೀಡುವ ಮೂಲಕ ಹರಿಯಾಣದ ಕುರುಕ್ಷೇತ್ರದ ಹಿಂದೆ ಇದ್ದ ದಾಖಲೆಗಳನ್ನು ಮುರಿದು, ಹೊಸ ದಾಖಲೆ ನಿರ್ಮಿಸಿತ್ತು.

ಇದನ್ನೂ ಓದಿ: ಕಿಸಾನ್ ಮೇಳದಲ್ಲಿ 72 ಲೀಟರ್​ ಹಾಲು ನೀಡಿದ ಹರಿಯಾಣದ ಹಸು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.