ETV Bharat / bharat

ಸುಲ್ಲಿ ಡೀಲ್​ ಆ್ಯಪ್​ನಲ್ಲಿ ಮುಸ್ಲಿಂ ಹುಡುಗಿಯರೇ ಟಾರ್ಗೆಟ್​.. ಹಿಂದೂ ಧರ್ಮದ ವಿರುದ್ಧ ಹೇಳಿಕೆ ನೀಡ್ತಿದ್ದವರ ಹರಾಜು - ಹಿಂದು ಧರ್ಮದ ವಿರುದ್ಧ ಹೇಳಿಕೆ ನೀಡಿದವರ ಟ್ರೋಲ್​

ಸುಲ್ಲಿ ಡೀಲ್ಸ್​ ಅಪ್ಲಿಕೇಶನ್ ರಚಿಸಿ, ಇದರಲ್ಲಿ ಮುಸ್ಲಿಂ ಯುವತಿಯರ ಫೋಟೋ ಹರಿಬಿಡುತ್ತಿದ್ದರು. ಈ ಬಗ್ಗೆ ವಿವಾದ ಉಂಟಾದಾಗ ಆ ದಾಖಲೆಗಳನ್ನು ಅಳಿಸಿ ಹಾಕಲಾಗುತ್ತಿತ್ತು. ಹೀಗೆ ಮಾಡಿದರೆ ಪೊಲೀಸರಿಗೆ ಇದನ್ನು ಕಂಡು ಹಿಡಿಯುವುದು ಕಷ್ಟ ಎಂದು ಓಂಕಾರೇಶ್ವರ್​ ಭಾವಿಸಿದ್ದ.

sulli deal app
ಸುಲ್ಲಿ ಡೀಲ್​ ಆ್ಯಪ್​
author img

By

Published : Jan 10, 2022, 12:27 PM IST

ನವದೆಹಲಿ: ಸುಲ್ಲಿ ಡೀಲ್ಸ್​ ಆ್ಯಪ್​ ಸೃಷ್ಟಿಕರ್ತ ಓಂಕಾರೇಶ್ವರ್​ ಬಂಧನದ ಬಳಿಕ ನಡೆಯುತ್ತಿರುವ ವಿಚಾರಣೆಯಲ್ಲಿ ಆಘಾತಕಾರಿ ಸಂಗತಿಗಳು ಬಯಲಾಗಿವೆ. ಆ್ಯಪ್​ನಲ್ಲಿ ಹಿಂದೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಟ್ವಿಟರ್​ನಲ್ಲಿ ಹರಡುತ್ತಿದ್ದ ಯುವತಿಯರನ್ನೇ ಟಾರ್ಗೆಟ್​​ ಮಾಡಲಾಗುತ್ತಿತ್ತು ಎಂದು ಓಂಕಾರೇಶ್ವರ್​ ಒಪ್ಪಿಕೊಂಡಿದ್ದಾನೆ.

ಹಿಂದು ದೇವಾಲಯಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಯುವತಿಯರನ್ನು ಅಶ್ಲೀಲವಾಗಿ ಚಿತ್ರಿಸಿ ಆ್ಯಪ್​ ಮೂಲಕ ಹರಾಜು ಹಾಕಲಾಗುತ್ತಿತ್ತು. ಇದರಲ್ಲಿ ಮುಸ್ಲಿಂ ಹುಡುಗಿಯರನ್ನೇ ಟಾರ್ಗೆಟ್​ ಮಾಡಲಾಗುತ್ತಿತ್ತು. ಅಂತಹವರನ್ನೇ ಹುಡುಕಿ ಅಶ್ಲೀಲವಾಗಿ ತೋರಿಸಿ ಟ್ವಿಟರ್​ನಲ್ಲಿ ಹರಾಜು ಹಾಕುತ್ತಿದ್ದೆವು ಎಂಬ ವಿಚಾರವನ್ನು ಆರೋಪಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಓಂಕಾರೇಶ್ವರನ ಮೊಬೈಲ್​, ಮ್ಯಾಕ್ ಬುಕ್ ಅನ್ನು ಫೋರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ. ಅಳಿಸಿ ಹಾಕಲಾದ ದತ್ತಾಂಶಗಳನ್ನು ಮರು ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದು ಧರ್ಮ, ದೇವಾಲಯಗಳು, ದೇವರ ಬಗ್ಗೆ ಅನೇಕ ಮುಸ್ಲಿಂ ಹುಡುಗಿಯರು ಆಕ್ಷೇಪಾರ್ಹ ಟ್ವೀಟ್​ ಮಾಡುವವರನ್ನು ಗುರುತಿಸಿ, ಅವರನ್ನು ಅಶ್ಲೀಲವಾಗಿ ಚಿತ್ರಿಸಿ ಟ್ವಿಟರ್​ನಲ್ಲಿ ಹರಾಜು ಮಾಡುತ್ತಿದ್ದ. ಇದಕ್ಕಾಗಿಯೇ ಓಂಕಾರೇಶ್ವರ್​ ಮಹಾಸಭಾ ಹೆಸರಿನ ಟ್ವಿಟರ್ ಗುಂಪನ್ನು ರಚನೆ ಮಾಡಿದ್ದ.

ಇದರಲ್ಲಿ ಸುಮಾರು 50 ಮಂದಿ ಟ್ರೋಲರ್ಸ್​ ಇದ್ದಾರೆ. ಹಿಂದೂ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುವ ಮುಸ್ಲಿಂ ಯುವತಿಯರನ್ನೇ ಟ್ರೋಲ್ ಮಾಡುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ.

ಇದಾದ ಬಳಿಕ ಸುಲ್ಲಿ ಡೀಲ್ಸ್​ ಅಪ್ಲಿಕೇಶನ್ ಅನ್ನು ರಚಿಸಿ, ಇದರಲ್ಲಿ ಮುಸ್ಲಿಂ ಯುವತಿಯರ ಫೋಟೋ ಹರಿಬಿಡುತ್ತಿದ್ದರು. ಈ ಬಗ್ಗೆ ವಿವಾದ ಉಂಟಾದಾಗ ಆ ದಾಖಲೆಗಳನ್ನು ಅಳಿಸಿ ಹಾಕಲಾಗುತ್ತಿತ್ತು. ಹೀಗೆ ಮಾಡಿದರೆ ಪೊಲೀಸರಿಗೆ ಇದನ್ನು ಕಂಡು ಹಿಡಿಯುವುದು ಕಷ್ಟ ಎಂದು ಓಂಕಾರೇಶ್ವರ​ ಭಾವಿಸಿದ್ದ. ಆದರೆ, ಬುಲ್ಲಿ ಬಾಯಿ ಆ್ಯಪ್​ನ ನೀರಜ್ ಬಿಷ್ಣೋಯ್ ನೀಡಿದ ಸುಳಿವಿನಿಂದಾಗಿ ಓಂಕಾರೇಶ್ವರ್​ನ ಈ ಕೃತ್ಯ ಬೆಳಕಿಗೆ ಬರಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬುಲ್ಲಿ ಬಾಯಿ ಆ್ಯಪ್ ತಯಾರಿಸಿದ ನೀರಜ್ ಬಿಷ್ಣೋಯ್ ವಿಚಾರಣೆಯ ವೇಳೆ ಸುಲ್ಲಿ ಡೀಲ್ಸ್​ ಆ್ಯಪ್​ನ ಓಂಕಾರೇಶ್ವರ್​ನ ಬಗ್ಗೆ ಮಾಹಿತಿ ನೀಡಿದ್ದ. ಈ ವೇಳೆ, ಪೊಲೀಸ್ ತಂಡವೊಂದು ಸುಲ್ಲಿ ಡೀಲ್ಸ್​ ಆ್ಯಪ್​ನ ಸೃಷ್ಟಿಕರ್ತ ಓಂಕಾರೇಶ್ವರನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ 4 ದಿನ ಪೊಲೀಸ್​ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Happy Birthday Hrithik Roshan: ಹುಟ್ಟುಹಬ್ಬದ ಸಂಭ್ರಮದಲ್ಲಿ 'ಗ್ರೀಕ್ ಗಾಡ್'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.