ETV Bharat / bharat

ಪಂಜಾಬ್​ನ ಕಾಂಗ್ರೆಸ್ ಶಾಸಕ ಸುಖಪಾಲ್ ಖೈರಾ ಬಂಧನ - Narcotic Drugs and Psychotropic Substances

ಕಾಂಗ್ರೆಸ್ ನಾಯಕ ಸುಖಪಾಲ್ ಖೈರಾ ಅವರ ಚಂಡೀಗಢ ನಿವಾಸದ ಮೇಲೆ ನಿನ್ನೆ ಬೆಳಗ್ಗೆ ದಾಳಿ ನಡೆಸಿದ್ದ ಪಂಜಾಬ್ ಪೊಲೀಸರು, ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.

Sukhpal Singh Khaira Arrested
ಸುಖಪಾಲ್ ಖೈರಾ ಬಂಧನ
author img

By ETV Bharat Karnataka Team

Published : Sep 29, 2023, 10:09 AM IST

ಚಂಡೀಗಢ (ಪಂಜಾಬ್): ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಪಂಜಾಬ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. 2015 ರಲ್ಲಿ ದಾಖಲಾದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಪಂಜಾಬ್ ಪೊಲೀಸರ ತಂಡ ಖೈರಾ ನಿವಾಸದ ಮೇಲೆ ದಾಳಿ ನಡೆಸಿತ್ತು.

ಮಾಹಿತಿಯ ಪ್ರಕಾರ, ಪಂಜಾಬ್ ಪೊಲೀಸರು ಗುರುವಾರ ಬೆಳಗ್ಗೆ ಖೈರಾ ಅವರ ಚಂಡೀಗಢ ನಿವಾಸದ ಮೇಲೆ ದಾಳಿ ನಡೆಸಿದರು. ನಂತರ ಅವರನ್ನು ಬಂಧಿಸಿ ಜಲಾಲಾಬಾದ್‌ಗೆ ಕರೆದೊಯ್ದರು. ಭೋಲಾತ್‌ನ ಕಾಂಗ್ರೆಸ್ ಶಾಸಕನನ್ನು ಜಲಾಲಾಬಾದ್​ನ ಫಜಿಲ್ಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ವೇಳೆ ಪೊಲೀಸರು ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು.

ಕಾಂಗ್ರೆಸ್ ನಾಯಕ ಸುಖಪಾಲ್ ಸಿಂಗ್ ಖೈರಾ ಅವರನ್ನು 2015 ರ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಇವರು ಕಿಸಾನ್ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದಾರೆ. ಈ ಹಿಂದೆಯೂ ಕೂಡ ಖೈರಾ ವಿವಾದಗಳಲ್ಲಿ ಸಿಲುಕಿದ್ದರು. 2015 ರಲ್ಲಿ ಇವರ ವಿರುದ್ಧ ಡ್ರಗ್ಸ್ ಕಳ್ಳಸಾಗಣೆ ಪ್ರಕರಣ ದಾಖಲಾಗಿತ್ತು. ಫಾಜಿಲ್ಕಾ ನ್ಯಾಯಾಲಯ ಅವರಿಗೆ ಸಮನ್ಸ್ ಕೂಡ ಜಾರಿ ಮಾಡಿತ್ತು. ಕಳ್ಳಸಾಗಣೆದಾರರಿಂದ 2 ಕೆಜಿ ಹೆರಾಯಿನ್, 24 ಚಿನ್ನದ ಬಿಸ್ಕತ್‌ಗಳು, ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳು ಮತ್ತು ಕಂಟ್ರಿ ನಿರ್ಮಿತ ಪಿಸ್ತೂಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿದ್ದ ಖೈರಾ: ಇನ್ನು ಸುಖಪಾಲ್ ಸಿಂಗ್ ಖೈರಾ ಅವರು ಈ ಹಿಂದೆ ಆಮ್ ಆದ್ಮಿ ಪಕ್ಷದಲ್ಲಿದ್ದರು. 2017 ರ ವಿಧಾನಸಭಾ ಚುನಾವಣೆಗೂ ಮೊದಲು ಆಮ್ ಆದ್ಮಿ ಪಕ್ಷವನ್ನು ಸೇರಿದ್ದರು. 2018 ರಲ್ಲಿ ಅವರು ಪಕ್ಷದ ವಿರುದ್ಧ ಬಂಡಾಯವೆದ್ದಿದ್ದರು. 2019 ರಲ್ಲಿ ಎಎಪಿ ಪಕ್ಷಕ್ಕೆ ರಾಜೀನಾಮೆ ನೀಡಿ, 2019 ರ ಜನವರಿಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡೆದರು. ಬಳಿಕ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಿ ಜಯ ಗಳಿಸಿದರು.

ಇದನ್ನೂ ಓದಿ : ವಿಜಯನಗರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಪ್ರತಿಭಟನೆ

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪಂಜಾಬ್ ಕಾಂಗ್ರೆಸ್ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರವು ಕೀಳು ಮಟ್ಟದ ಮತ್ತು ಸೇಡಿನ ರಾಜಕೀಯವನ್ನು ಮಾಡುತ್ತಿದೆ. ಸುಖಪಾಲ್ ಖೈರಾ ಅವರ ಬಂಧನವು ಅತ್ಯಂತ ಶೋಚನೀಯ. ಸರ್ಕಾರದ ವಿರುದ್ಧ ಖೈರಾ ಅವರು ಬಹಿರಂಗವಾಗಿ ಮಾತನಾಡಿದ್ದಾರೆ, ಭಗವಂತಮಾನ್ ಸರ್ಕಾರ ಮಾಡಿದ ತಪ್ಪುಗಳು ಮತ್ತು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಹಿನ್ನೆಲೆ ಉದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : ಉದ್ಯಮಿಗೆ ವಂಚನೆ ಪ್ರಕರಣ.. ಚೈತ್ರಾ ಸೇರಿ ಏಳು ಜನ ಆರೋಪಿಗಳಿಗೆ ನ್ಯಾಯಾಂಗ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.