ನವದೆಹಲಿ: ವಂಚನೆ ಪ್ರಕರಣದಲ್ಲಿ ದೆಹಲಿಯ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಅವರು ಕಿರುತೆರೆ ನಟಿ ಚಾಹತ್ ಖನ್ನಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸುಕೇಶ್ ಚಂದ್ರಶೇಖರ್ ತನ್ನನ್ನು ಮದುವೆ ಯಾಗುವ ಬಗ್ಗೆ ಪ್ರಸ್ತಾಪಿಸಿದ್ದಾಗಿ ಚಾಹತ್ ಖನ್ನಾ ಹೇಳಿಕೊಂಡಿದ್ದರು. ಈ ಆರೋಪ ಸುಳ್ಳು ಎಂದು ಸುಕೇಶ್ ಪತ್ರ ಬರೆದಿದ್ದರು. ಇದೀಗ ಸುಕೇಶ್, ಕಿರುತೆರೆ ನಟಿ ಚಾಹತ್ ಖನ್ನಾ ಅವರಿಗೆ 100 ಕೋಟಿ ರೂಪಾಯಿ ಲೀಗಲ್ ನೋಟಿಸ್ ನೀಡಿದ್ದಾರೆ.
ಸುಕೇಶ್ ಚಂದ್ರಶೇಖರ್ ಪರವಾಗಿ ಅವರ ವಕೀಲರು, ಸುಕೇಶ್ ಇಮೇಜ್ ಹಾಳು ಮಾಡಿದ್ದಕ್ಕಾಗಿ 100 ಕೋಟಿ ರೂಪಾಯಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಚಾಹತ್ ಖನ್ನಾ ಅವರು ಬೇಷರತ್ ಕ್ಷಮೆಯಾಚಿಸಬೇಕು ಹಾಗೂ 100 ಕೋಟಿ ರೂ. ದಂಡವನ್ನು ಪಾವತಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಲಾಗಿದೆ.
ಏಳು ದಿನಗಳೊಳಗೆ ಕ್ಷಮೆಯಾಚಿಸಲು ಗಡುವು: ನಟಿ ಚಾಹತ್ ಖನ್ನಾ ಸಂದರ್ಶನದಲ್ಲಿ ಹೇಳಿರುವ ವಿಚಾರಗಳಿಂದ ಸುಕೇಶ್ ಚಂದ್ರಶೇಖರ್ ಅವರ ಇಮೇಜ್ ಅನ್ನು ಸಂಪೂರ್ಣ ಹಾಳಾಗಿದೆ. ಅವರಿಗೆ ಮಾನಸಿಕ ನೋವನ್ನುಂಟಾಗಿದೆ. ನೋಟಿಸ್ ಕಳುಹಿಸಿರುವ ಸುಕೇಶ್ ಪರ ವಕೀಲರು, 7 ದಿನಗಳೊಳಗೆ ಕ್ಷಮೆಯಾಚಿಸುವಂತೆ ಮತ್ತು ಮಾಧ್ಯಮಗಳಲ್ಲಿ ಈ ಬಗ್ಗೆ ಹೇಳಿಕೆ ನೀಡುವಂತೆ ಹೇಳಿದ್ದಾರೆ. ಚಾಹತ್ ಖನ್ನಾ ಅವರು ಈ ರೀತಿ ಮಾಡದಿದ್ದಲ್ಲಿ ಆಕೆಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಂದರ್ಶನವೊಂದರಲ್ಲಿ ಚಾಹತ್ ಖನ್ನಾ ಹೇಳಿದ್ಧೇನು: ಜ.29 ರಂದು ಸಂದರ್ಶನವೊಂದರಲ್ಲಿ ಚಾಹತ್ ಖನ್ನಾ ಅವರು ''ಕಾರ್ಯಕ್ರಮದ ಹೆಸರಿನಲ್ಲಿ ಮುಂಬೈನಿಂದ ದೆಹಲಿಗೆ ಕರೆಸಿಕೊಂಡರು'' ಎಂದು ಹೇಳಿದ್ದರು. ಮತ್ತೊಂದೆಡೆ, ''ಹೆಸರಿನ ಪಿಂಕಿ ಇರಾನಿ ಮಹಿಳೆಯು ಅವರನ್ನು ಕಾರ್ಯಕ್ರಮದ ಬದಲಿಗೆ ತಿಹಾರ್ ಜೈಲಿಗೆ ಕರೆದೊಯ್ದರು. ಅಲ್ಲಿ ಅವರು ಸುಕೇಶನನ್ನು ಭೇಟಿಯಾಗಿದ್ದಾರೆ'' ಎಂದು ಚಾಹತ್ ಹೇಳಿಕೆ ನೀಡಿದ್ದರು.
ಆರೋಪ ನಿರಾಕರಿಸಿದ ಸುಕೇಶ್: ಇದೇ ಸಂದರ್ಭದಲ್ಲಿ ಸುಕೇಶ್ ಅವರು ಪ್ರಸ್ತಾಪಿಸುವ ವಿಚಾರಗಳನ್ನು ನಿರಾಕರಿಸಿದ್ದಾರೆ. ಅವರು, ಈಗ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸುಕೇಶ್ ಚಂದ್ರಶೇಖರ್ ತಮ್ಮ ಪತ್ರಗಳ ಮೂಲಕ ಕಲಾವಿದರನ್ನಷ್ಟೇ ಅಲ್ಲ ರಾಜಕಾರಣಿಗಳನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಮುನ್ಸಿಪಲ್ ಚುನಾವಣೆಗೂ ಮುನ್ನ ಸುಕೇಶ್ ಚಂದ್ರಶೇಖರ್ ಅವರು ಸುಮಾರು ಹನ್ನೆರಡು ಪತ್ರಗಳನ್ನು ಬರೆದಿದ್ದಾರೆ. ತಿಹಾರ್ ಜೈಲಿನಲ್ಲಿ ಇದ್ದಕೊಂಡೇ, ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮತ್ತು ಮಾಧ್ಯಮಗಳಿಗೆ ಹೆಸರುಗಳ ಪಟ್ಟಿಯನ್ನು ನೀಡಿದ್ದಾರೆ. ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿಯೇ, ಅವರು ತಮ್ಮ ಮೇಲಿನ ಆರೋಪಗಳ ವಿರುದ್ಧ ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ: ಏರ್ ಏಷ್ಯಾ ಸಂಸ್ಥೆಗೆ 20 ಲಕ್ಷ ದಂಡ... ವಿಮಾನ ಹಾರಾಟ ತರಬೇತಿ ಮುಖ್ಯಸ್ಥರ ವಜಾಕ್ಕೆ ಡಿಜಿಸಿಎ ಆದೇಶ