ನವದೆಹಲಿ: ಭಾರತದಲ್ಲಿ 2014ರಿಂದ ಸರಿ ಸುಮಾರು 2.35 ಲಕ್ಷ ದಿನಗೂಲಿ ನೌಕರರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿಯನ್ನು ಮಂಗಳವಾರ ಸರ್ಕಾರ ಲೋಕಸಭೆಯಲ್ಲಿ ತಿಳಿಸಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ಸಂಖ್ಯೆ 44,254 ಮಂದಿ, ಮಹಾರಾಷ್ಟ್ರದಲ್ಲಿ 29,516, ಮಧ್ಯಪ್ರದೇಶ 25,486, ತೆಲಂಗಾಣ 23,838, ಕೇರಳ 19,930 ಮತ್ತು ಗುಜರಾತ್ನಲ್ಲಿ 17,708 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಅಧಿಕೃತ ದಾಖಲೆ ಅನುಸಾರ 2021ರಲ್ಲಿ ಪ್ರತಿ ದಿನ 115 ದಿನಗೂಲಿ ನೌಕರರು, 63 ಗೃಹಿಣಿಯರು ತಮ್ಮ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿದ್ದಾರೆ. 1,64,033 ಮಂದಿ ದೇಶದಲ್ಲಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ ಎಂದು ಲೋಕಸಭೆಯಲ್ಲಿ ತಿಳಿಸಲಾಯಿತು. ರಾಷ್ಟ್ರೀಯ ಅಪರಾಧ ದಳ (ಎನ್ಸಿಆರ್ಪಿ)ದ ದಾಖಲೆಯನ್ನು ಮಂಡಿಸಿದ ಕೇಂದ್ರ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ, 2021ರಲ್ಲಿ 42,004 ದಿನಗೂಲಿ ನೌಕರರು ಮತ್ತು 23,179 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
20,231 ಸ್ವಯಂ ಉದ್ಯೋಗಿಗಳು, 15,870 ವೇತನದಾರರು, 13,714 ನಿರುದ್ಯೋಗಿಗಳು, 13,089 ವಿದ್ಯಾರ್ಥಿಗಳು, 12,055 ಉದ್ಯಮಿಗಳು ಮತ್ತು 11,431 ಖಾಸಗಿ ಉದ್ದಿಮೆದಾರರು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿವಲಯದಲ್ಲಿ ನಿರತ 10,881 ಮಂದಿ, 5,563 ಕೃಷಿ ಕಾರ್ಮಿಕರು, 5,318 ಕೃಷಿಕರು, 512 ಗುತ್ತಿಗೆ ಭೂಮಿಯಲ್ಲಿ ಕೆಲಸ ಮಾಡುವವರು ಸಾವನ್ನಪ್ಪಿದ್ದಾರೆ.
2021ರಲ್ಲಿ ಭಾರತದಲ್ಲಿ ಆತ್ಮಹತ್ಯೆ ದರ 6.2ಕ್ಕೆ ಏರಿಕೆ ಕಂಡಿದೆ. ಒಂದು ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ಈ ಆತ್ಮಹತ್ಯೆ ದರ ನಿಗದಿ ಪಡಿಸಲಾಗುವುದು. 2021ರಲ್ಲಿ ಅಖಿಲ ಭಾರತ ಆತ್ಮಹತ್ಯೆ ದರ 12 ಇತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅತಿ ಹೆಚ್ಚು ಅಂದರೆ 39.7 ಮಂದಿ ಆತ್ಮಹತ್ಯೆಗೆ ಶರಣಾದರೆ ಸಿಕ್ಕಿಂನಲ್ಲಿ 39.2, ಪುದುಚೇರಿಯಲ್ಲಿ 31.8 ಹಾಗೂ ತೆಲಂಗಾಣದಲ್ಲಿ 26.9 ಮತ್ತು ಕೇರಳದಲ್ಲಿ 26.9 ರಷ್ಟಿದೆ.
ತಮಿಳುನಾಡು ಮತ್ತು ಮಧ್ಯಪ್ರದೇಶದ ನಂತರದಲ್ಲಿ ಮಹಾರಾಷ್ಟ್ರ ಸ್ಥಾನ ಪಡೆದಿದೆ. ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ 13,500, ಕರ್ನಾಟಕದಲ್ಲಿ 13,056 ಮಂದಿ ಜೀವವನ್ನು ಕೊನೆಕೊಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂಬ ಕನಸು ಈಡೇರದ್ದಕ್ಕೆ ಬೆಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ