ಇನ್ಪೋಸಿಸ್ ಫೌಂಡೇಶನ್ ಮುಖಸ್ಥೆ ಹಾಗೂ ಲೇಖಕಿ ಸುಧಾ ಮೂರ್ತಿಯವರನ್ನು ನೆನಪಿಸಿಕೊಂಡಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಅವರ ಸಮಾಜಸೇವೆ ಮತ್ತು ಸರಳತೆ. ಸಾಕಷ್ಟು ಸಮಾಜಮುಖಿ ಕಾರ್ಯಗಳ ಮೂಲಕ ಜನಮನ ಗೆದ್ದಿದ್ದಾರೆ. ಜೊತೆಗೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ.
ಒಂದಿಲ್ಲೊಂದು ವಿಷಯಗಳ ಮೂಲಕ ಸದಾ ಸುದ್ದಿಯಲ್ಲಿರುವ ಸುಧಾಮೂರ್ತಿ ಅವರು ತಮ್ಮ ಮನೆಯ ಮುದ್ದಿನ ಶ್ವಾನದ ಹುಟ್ಟುಹಬ್ಬ ಆಚರಿಸಿ ಮತ್ತೆ ಜನಮನ ತಲುಪಿದ್ದಾರೆ.
ತಮ್ಮ ಮುದ್ದಿನ ಶ್ವಾನ ಗೋಪಿಯ ಹುಟ್ಟುಹಬ್ಬವನ್ನು ಅತ್ಯಂತ ಖುಷಿಯಿಂದ ಆಚರಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮತ್ತೆ ತಮ್ಮ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಸುಧಾಮೂರ್ತಿ ಮತ್ತು ಅವರ ಸಹೋದರಿ, ಗೋಪಿಗೆ ಆರತಿ ಬೆಳಗಿ, ಹಾಡು ಹೇಳುವ ಮೂಲಕ ಶ್ವಾನದ ಹುಟ್ಟುಹಬ್ಬ ಆಚರಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮನುಷ್ಯರಿಗೆ ಹುಟ್ಟುಹಬ್ಬ ಆಚರಿಸುವಂತೆ ತಮ್ಮ ಪ್ರೀತಿಯ ಗೋಪಿಗೂ ಬರ್ತ್ಡೇ ಸೆಲೆಬ್ರೇಷನ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2021ರಲ್ಲಿ ಅತಿ ಹೆಚ್ಚು ಬಳಸಿದ ಎಮೋಜಿ ಯಾವುದು ಗೊತ್ತಾ?
ಸಾಮಾನ್ಯವಾಗಿ ಶ್ವಾನಗಳನ್ನು ಅತಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ತಮ್ಮ ಮಕ್ಕಳಂತೆಯೇ ಅವುಗಳನ್ನು ಪೋಷಿಸುತ್ತಾರೆ. ಅವುಗಳ ಹುಟ್ಟು ಹಬ್ಬ ಆಚರಿಸೋದನ್ನು ಕೂಡ ನೀವು ನೋಡಿರಬಹುದು. ಇದೀಗ ಆ ಸಾಲಿನಲ್ಲಿ ಸುಧಾಮೂರ್ತಿ ಸಹ ಗುರುತಿಸಿಕೊಂಡಿದ್ದಾರೆ. ತಮ್ಮ ಗೋಪಿಯ ಬರ್ತ್ಡೇ ಸೆಲೆಬ್ರೇಷನ್ ಮಾಡಿದ್ದಾರೆ.