ಕೋಲ್ಕತ್ತಾ(ಪಶ್ಚಿಮ ಬಂಗಾಳ): ಸದಾ ಒಂದಿಲ್ಲೊಂದು ವಿಷಯವನ್ನಿಟ್ಟುಕೊಂಡು ಬಿಜೆಪಿ ಮೇಲೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹರಿಹಾಯುತ್ತಿರುತ್ತಾರೆ. ಇದರ ಮಧ್ಯೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ನಿನ್ನೆ ದೀದಿ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ.
ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಕಳೆದ ಕೆಲ ತಿಂಗಳಿಂದ ಬಿಜೆಪಿ ಬ್ರಿಗೇಡ್ನಿಂದ ಕಡೆಗಣಿಸಲ್ಪಟ್ಟಿದ್ದಾರೆ. ಹೀಗಾಗಿ, ಅವರು ತೃಣಮೂಲ ಕಾಂಗ್ರೆಸ್ ಸೇರುತ್ತಾರೆಂಬ ಊಹಾಪೋಹ ಸಹ ಹರಿದಾಡ್ತಿವೆ. ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಅವರೊಂದಿಗೆ ಭೇಟಿ, ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಫೋಟೋ ಶೇರ್ ಮಾಡಿರುವ ಸುಬ್ರಮಣಿಯನ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರುವ ಕೆಲವೊಂದು ಫೋಟೋ ಸ್ವಾಮಿ ಅವರೇ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಕೋಲ್ಕತ್ತಾದಲ್ಲಿದ್ದೆ. ಮಮತಾ ಬ್ಯಾನರ್ಜಿ ಅವರನ್ನ ಭೇಟಿಯಾಗಿದ್ದೇನೆ. ಅವರು ಧೈರ್ಯಶಾಲಿ. ಸಿಪಿಎಂ ವಿರುದ್ಧದ ಅವರ ಹೋರಾಟ ನಿಜಕ್ಕೂ ಶ್ಲಾಘನೀಯ ಎಂದು ಬರೆದುಕೊಂಡಿದ್ದಾರೆ.
-
#BJP (@BJP4India) leader and former Rajya Sabha member, Subramanian Swamy (@Swamy39) met West Bengal Chief Minister #MamataBanerjee (@MamataOfficial) at the state secretariat, Nabanna. pic.twitter.com/b4P294Qjbh
— IANS (@ians_india) August 18, 2022 " class="align-text-top noRightClick twitterSection" data="
">#BJP (@BJP4India) leader and former Rajya Sabha member, Subramanian Swamy (@Swamy39) met West Bengal Chief Minister #MamataBanerjee (@MamataOfficial) at the state secretariat, Nabanna. pic.twitter.com/b4P294Qjbh
— IANS (@ians_india) August 18, 2022#BJP (@BJP4India) leader and former Rajya Sabha member, Subramanian Swamy (@Swamy39) met West Bengal Chief Minister #MamataBanerjee (@MamataOfficial) at the state secretariat, Nabanna. pic.twitter.com/b4P294Qjbh
— IANS (@ians_india) August 18, 2022
ಬಿಜೆಪಿ ಜೊತೆ ಹಳಸಿದ ಸ್ವಾಮಿ ಸಂಬಂಧ: ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಜೊತೆಗಿನ ಸ್ವಾಮಿ ಸಂಬಂಧ ಸೌಹಾರ್ದಯುತವಾಗಿ ಉಳಿದಿಲ್ಲ. ಹೀಗಾಗಿ, ಕೇಸರಿ ಬ್ರಿಗೇಡ್ ತೊರೆದು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದೆ.
ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಯಿಂದ ಮೋದಿ ದೂರವಿರಬೇಕು, ಉಕ್ರೇನ್ ಪರ ಭಾರತ ನಿಲ್ಲಬೇಕು: ಸುಬ್ರಮಣಿಯನ್ ಸ್ವಾಮಿ
ಆದರೆ, ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಭೇಟಿ ಕೇವಲ ಸೌಹಾರ್ದಯುತವಾಗಿ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದ್ದ ಸುಬ್ರಮಣಿಯನ್ ಸ್ವಾಮಿ 2ಜಿ, ನ್ಯಾಷನಲ್ ಹೆರಾಲ್ಡ್, ಅಯೋಧ್ಯೆ ಪ್ರಕರಣ ಹೊರಗೆ ತರುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದರು.