ETV Bharat / bharat

ಬೋರ್ಡಿಂಗ್​ ಪಾಸ್ ನೀಡದ ವಿಮಾನ ನಿಲ್ದಾಣ ಸಿಬ್ಬಂದಿಗೆ ಸಬ್​​​​ಇನ್ಸ್​​ಪೆಕ್ಸರ್ ಕಪಾಳ ಮೋಕ್ಷ - ಸ್ಪೈಸ್ ಜೆಟ್ ವಿಮಾನ

ತಡವಾಗಿ ವಿಮಾನ ನಿಲ್ದಾನಕ್ಕೆ ಆಗಮಿಸಿದ್ದ ಸಬ್​ ಇನ್ಸ್​ಪೆಕ್ಟರ್ ನಿಲ್ದಾಣದ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಸ್ಪೈಸ್​ ಜೆಟ್​​ನಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಲು ತಡವಾಗಿ ನಿಲ್ದಾಣಕ್ಕೆ ಆಗಮಿದ್ದ ಈ ಹಿನ್ನೆಲೆ ಬೋರ್ಡಿಂಗ್ ಪಾಸ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಾರೆ. ವಾದ-ಪ್ರತಿವಾದ ತಾರಕಕ್ಕೇರಿ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ.

Spicejet
ಸ್ಪೈಸ್ ಜೆಟ್ ವಿಮಾನ
author img

By

Published : Nov 18, 2020, 7:34 AM IST

ಅಹಮದಾಬಾದ್: ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿದ್ದ ಸಬ್ ಇನ್ಸ್​ಪೆಕ್ಟರ್​​ಗೆ ಬೋರ್ಡಿಂಗ್ ಪಾಸ್ ನೀಡದ ಸ್ಪೈಸ್ ಜೆಟ್ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿರುವ ಘಟನೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನವೆಂಬರ್ 17ರಂದು ಗುಜರಾತ್​​​ನ ಸಬ್​​ಇನ್ಸ್​ಪೆಕ್ಟರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಆತ ಸ್ಪೈಸ್ ಜೆಟ್​​ ಎಸ್​​​ಜಿ-8194 ವಿಮಾನದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿಸಲು ಟಿಕೆಟ್ ಕೌಂಟರ್​ ಬಳಿ ಬಂದಿದ್ದಾರೆ. ಆದರೆ ಸಮಯ ಮೀರಿದ್ದ ಹಿನ್ನೆಲೆ ಬೋರ್ಡಿಂಗ್ ಟಿಕೆಟ್ ನೀಡಲು ಸಿಬ್ಬಂದಿ ನಿರಾಕರಿಸಿದ್ದಾರೆ. ಈ ಹಿನ್ನೆಲೆ ವಾಗ್ವಾದ ನಡೆದು ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇದೇ ವಿಚಾರವಾಗಿ ಕೆಲ ಪ್ರಯಾಣಿಕರು ಹಾಗೂ ನಿಲ್ದಾಣ ಸಿಬ್ಬಂದಿ ನಡುವೆ ವಾಗ್ವಾದ ತಾರಕಕ್ಕೇರಿತ್ತು. ಈ ವೇಳೆ ನಿಲ್ದಾಣದ ಸೆಕ್ಯೂರಿಟಿ ಹಾಗೂ ಸಿಐಎಸ್ಎಫ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪರಿಸ್ಥಿತಿ ನಿಯಂತ್ರಿಸಲಾಗಿದೆ.

ಬಳಿಕ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ಬಳಿಕ ಸಿಬ್ಬಂದಿ ಹಾಗೂ ಪ್ರಯಾಣಿಕರು ಸೇರಿ ಪೊಲೀಸ್​ ಸಹ ಪರಸ್ಪರ ರಾಜಿಯಾಗಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.