ETV Bharat / bharat

ಮೋದಿ ಜೊತೆ ಕುಳಿತು ಪರೇಡ್​ ವೀಕ್ಷಿಸಲು ಅವಕಾಶ ಪಡೆದ 100 ವಿದ್ಯಾರ್ಥಿಗಳು

ನಾಳೆ ದೇಶಾದ್ಯಂತ 72ನೇ ಗಣರಾಜ್ಯೋತ್ಸವ ನಡೆಯಲಿದೆ. ಈ ಬಾರಿ ಸುಮಾರು 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನೇರವಾಗಿ ನೋಡುವ ಹಾಗೂ ಗಣರಾಜ್ಯೋತ್ಸವದ ಮೆರವಣಿಗೆ ವೀಕ್ಷಿಸುವ ಅವಕಾಶ ಸಿಕ್ಕಿದೆ.

ಗಣರಾಜ್ಯೋತ್ಸವ ಪರೇಡ್​
Republic Day Parade
author img

By

Published : Jan 25, 2021, 10:06 AM IST

ನವದೆಹಲಿ: ದೇಶಾದ್ಯಂತದ ಶಾಲಾ-ಕಾಲೇಜುಗಳಿಂದ ಸುಮಾರು 100 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ನೇರವಾಗಿ ನೋಡುವ ಹಾಗೂ ಗಣರಾಜ್ಯೋತ್ಸವದ ಮೆರವಣಿಗೆ ವೀಕ್ಷಿಸುವ ಅವಕಾಶ ಸಿಕ್ಕಿದೆ. ಈ ಕುರಿತಂತೆ ಶಿಕ್ಷಣ ಸಚಿವಾಲಯ ಮಾಹಿತಿ ನೀಡಿದೆ.

  • Happy to share that meritorious students across the country will be given a chance to witness the #RepublicDay2021 parade from the Prime Minister's Box.
    They will also have a chance to meet & interact with the Minister of Education, Govt. of India Shri @DrRPNishank. pic.twitter.com/AhKpcKgTWk

    — Ministry of Education (@EduMinOfIndia) January 24, 2021 " class="align-text-top noRightClick twitterSection" data=" ">

ಪ್ರತಿವರ್ಷದಂತೆ ಈ ಬಾರಿಯೂ ಗಣರಾಜ್ಯೋತ್ಸವದ ಮೆರವಣಿಗೆ ನೇರವಾಗಿ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ದೇಶಾದ್ಯಂತದ ಪ್ರತಿಭಾನ್ವಿತ 100 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಶಾಲಾ ಮಟ್ಟದಿಂದ 50 ಮತ್ತು ಉನ್ನತ ಶಿಕ್ಷಣ ಮಟ್ಟದಿಂದ 50 ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿದೆ. ಇವರು ಪ್ರಧಾನಿಮಂತ್ರಿ ಮೋದಿಯವರು ಜೊತೆ ಕುಳಿತುಕೊಂಡು ಪರೇಡ್​ ಮೆರವಣಿಗೆಯನ್ನು ವೀಕ್ಷಿಸಲಿದ್ದಾರೆ.

ಅಷ್ಟೇ ಅಲ್ಲದೆ ಈ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅವಕಾಶ ಸಿಗಲಿದೆ. ಈ ಕುರಿತಂತೆ ಶಿಕ್ಷಣ ಸಚಿವಾಯಲ ಟ್ವೀಟ್​ ಮಾಡಿ ಮಾಹಿತಿ ನೀಡಿದೆ.

ಓದಿ: ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!

ಕೋವಿಡ್​​ ಹಿನ್ನೆಲೆಯಲ್ಲಿ ಈ ಬಾರಿ ನಡೆಯುವ 72ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಇದೇ ಮೊದಲ ಬಾರಿಗೆ ಯಾವುದೇ ಮುಖ್ಯ ಅತಿಥಿಗಳಿಲ್ಲದೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಯಾವುದೇ ಪ್ರಶಸ್ತಿಗಳನ್ನು ಪಡೆದ ಮಕ್ಕಳ ಮೆರವಣಿಗೆ ನಡೆಯುವುದಿಲ್ಲ.

ಅಷ್ಟೇ ಅಲ್ಲದೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು401 ಕ್ಕೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.