ETV Bharat / bharat

ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಆಡಿಯೋ ಕ್ಲಿಪ್​ನಿಂದ ರ‍್ಯಾಗಿಂಗ್ ಮಾಡಿರುವುದು ಬಯಲು - ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ

ಜ 19 ರಂದು ಮಹಾರಾಷ್ಟ್ರದ ಐಟಿಐ ಕಾಲೇಜಿನ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ರ‍್ಯಾಗಿಂಗ್​ನಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಬಯಲಾಗಿದೆ.

Kailas Gayakwaada
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
author img

By

Published : Jan 24, 2023, 8:03 PM IST

ಲೋನಾರ್(ಮಹಾರಾಷ್ಟ್ರ): ಇಲ್ಲಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ಕೈಲಾಸ್ ಗಾಯಕವಾಡ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋನಾರ್ ಪೊಲೀಸರು ಐವರ ವಿರುದ್ಧ ರ‍್ಯಾಗಿಂಗ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲೋನಾರ್‌ನ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಕೈಲಾಸ್ ಗಾಯಕ್‌ವಾಡ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಜನವರಿ 19 ರಂದು ಬೆಳಕಿಗೆ ಬಂದಿತ್ತು.

ವಿದ್ಯಾರ್ಥಿ ಕೈಲಾಸ್​ ಗಾಯಕ್​ವಾಡ ಮೇಲೆ ರ‍್ಯಾಗಿಂಗ್ ಮಾಡುತ್ತಿದ್ದ ವೇಳೆ ಹಾಸ್ಟೆಲ್ ವಾರ್ಡನ್​ ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೇ ಐಟಿಐ ಕಾಲೇಜಿನ ಶಿಕ್ಷಕಿ ಕೈಲಾಸ್​ನನ್ನು ಇತರ ವಿದ್ಯಾರ್ಥಿಗಳ ಮುಂದೆಯೇ ನಿಂದಿಸಿದ್ದರು. ಇದರಿಂದ ಮನನೊಂದು ಆತ ಜ.18 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಯೋಗೇಶ್​ ಕೋಲ್ಹೆ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಅನ್ವಯ ಲೋನಾರ್ ಪೊಲೀಸರು, ಐಟಿಐ ಶಿಕ್ಷಕ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಹಾಸ್ಟೆಲ್‌ನ ವಾರ್ಡನ್​ ಮತ್ತು ಮೂವರು ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್ ಮಾಡಿದ್ದು, ಮಾತ್ರವಲ್ಲದೆ ಕೈಲಾಸ್​ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಕ್ಕೆ, ಮಹಾರಾಷ್ಟ್ರ ಕಿರುಕುಳ ಕಾಯ್ದೆ 1999ರ ಮೂರು ಮತ್ತು ನಾಲ್ಕು ಸೆಕ್ಷನ್‌ಗಳು ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಡಿಯೋ ಕ್ಲಿಪ್ ವೈರಲ್: ಕೈಲಾಸ್​ ಗಾಯಕ್​ವಾಡ ಆತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂದಾಗ ಪೊಲೀಸರು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಈ ನಡುವೆ ಕೈಲಾಸ್ ಗಾಯಕ್ವಾಡ್ ಆತ್ಮಹತ್ಯೆ ಮಾಡಿಕೊಂಡಿರುವ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಲೋನಾರ್ ಪ್ರದೇಶದಲ್ಲಿ ರ‍್ಯಾಗಿಂಗ್ ಯಾವ ಮಟ್ಟದಲ್ಲಿದೆ. ಕೈಲಾಸ್​ಗೆ ರ‍್ಯಾಗಿಂಗ್ ಮಾಡಿರುವ ಕುರಿತು ಚರ್ಚೆ ಪ್ರಾರಂಭವಾಗಿದೆ. ಈ ಪ್ರಕರಣದಲ್ಲಿ ಐವರ ವಿರುದ್ಧ ರ‍್ಯಾಗಿಂಗ್ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಲೋನಾರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ರ‍್ಯಾಗಿಂಗ್ ಎಂದರೇನು?: ರ‍್ಯಾಗಿಂಗ್ ಎನ್ನುವುದು ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯ ನಡವಳಿಕೆ. ಅದು ಮಾತು, ಬರವಣಿಗೆ ಅಥವಾ ಕೃತ್ಯದ ಮೂಲಕವೂ ಆಗಿರಬಹುದು. ಯಾವುದೇ ವಿದ್ಯಾರ್ಥಿಯನ್ನು ಚುಡಾಯಿಸುವುದು, ತಮಗೆ ಬೇಕಾದಂತೆ ನಡೆಸಿಕೊಳ್ಳುವುದು ಅಥವಾ ಅಸಭ್ಯವಾಗಿ ವರ್ತಿಸುವುದು, ರೌಡಿಗಳಂತೆ ತೊಡಗಿಸಿಕೊಳ್ಳುವುದು ಅಥವಾ ಕಿರಿಕಿರಿ, ಕಷ್ಟ ಅಥವಾ ಮಾನಸಿಕವಾಗಿ ಕುಗ್ಗುವಂತೆ ಮಾಡುವ ಅಶಿಸ್ತಿನ ಚಟುವಟಿಕೆಗಳು ಆಗಿರುತ್ತದೆ. ಒಂದು ಫ್ರೆಶರ್ ಅಥವಾ ಜೂನಿಯರ್ ವಿದ್ಯಾರ್ಥಿಯಲ್ಲಿ ಅದರ ಭಯ ಹೆಚ್ಚಿಸುವುದು. ಪ್ರತಿಕೂಲ ಪರಿಣಾಮ ಬೀರುವಂತೆ ಅವಮಾನ ಅಥವಾ ಮುಜುಗರದ ಭಾವನೆಯನ್ನು ಉಂಟುಮಾಡುವುದನ್ನು ರ‍್ಯಾಗಿಂಗ್ ಎಂದು ಹೇಳಲಾಗುತ್ತದೆ.

ಎಲ್ಲರ ಮುಂದೆ ಕುಣಿಯಲು ಅಥವಾ ಹಾಡಲು ಕೇಳುವುದು, ಯಾರನ್ನಾದರೂ ಬೈಯುವುದು, ಹುಡುಗ ಅಥವಾ ಹುಡುಗಿಯನ್ನು ಚುಡಾಯಿಸುವಂತೆ ಹೇಳುವುದು. ಕೀಟಲೆ ಮಾಡುವುದು, ಶಿಕ್ಷಕರನ್ನು ಗೇಲಿ ಮಾಡುವುದು ಅಥವಾ ತಮಾಷೆ ಮಾಡುವುದು, ಏನಾದರೂ ತಿನ್ನಲು ಅಥವಾ ಕುಡಿಯಲು ಹೇಳುವುದು, ಮಾದಕ ದ್ರವ್ಯ ಸೇವಿಸಲು ಹೇಳುವುದು, ಅಶ್ಲೀಲ ವಿಡಿಯೋ ಟೇಪ್‌ಗಳನ್ನು ವೀಕ್ಷಿಸಲು ಹೇಳುವುದು, ಅಶ್ಲೀಲ ಚಟುವಟಿಕೆಗಳಲ್ಲಿ ಭಾಗವಹಿಸಲು ಹೇಳುವುದು, ದೈಹಿಕ ಹಾನಿಯನ್ನುಂಟು ಮಾಡುವುದು ಮುಂತಾದ ವಿಷಯಗಳು ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಾಗಿದ್ದವು. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ರ‍್ಯಾಗಿಂಗ್ ವಿರೋಧಿ ಅನುಷ್ಠಾನವನ್ನು ಯೋಜಿಸಲು ಹಲವಾರು ಸಮಿತಿಗಳನ್ನು ರಚಿಸಲಾಯಿತು. ಅವರು ನೀಡಿದ ವರದಿಯನ್ನು ಆಧರಿಸಿ, ಕಾನೂನುಗಳು ರೂಪುಗೊಂಡಿವೆ. ಆದರೂ ಸಹ ಈ ಪ್ರವೃತ್ತಿ ಇನ್ನೂ ನಿಂತಿಲ್ಲ.

ಇದನ್ನೂ ಓದಿ: ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿ ಅನುಮಾನಾಸ್ಪದ ಸಾವು.. ರ‍್ಯಾಗಿಂಗ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.