ನವದೆಹಲಿ (ನೋಯ್ಡಾ): ರಾಜಧಾನಿ ದೆಹಲಿಯ ಪಕ್ಕದಲ್ಲಿರುವ ಗ್ರೇಟರ್ ನೋಯ್ಡಾದ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯನ್ನು ತಬ್ಬಿಕೊಂಡು ಗುಂಡಿಕ್ಕಿ ಹತ್ಯೆ ಮಾಡಿದ್ದಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ. ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ನಾಡರ್ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ ಘಟನೆ ವರದಿಯಾಗಿದೆ.
ಇಬ್ಬರೂ ವಿದ್ಯಾರ್ಥಿಗಳು ಸುಮಾರು 21 ವರ್ಷ ವಯಸ್ಸಿನವರಾಗಿದ್ದು ಒಬ್ಬರಿಗೊಬ್ಬರು ತಿಳಿದಿದ್ದವರು. ಕೊಲೆ-ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಹತ್ಯೆ ಮಾಡಿ ಆತ್ಮಹತ್ಯೆಗೆ ಒಳಗಾದ ವಿದ್ಯಾರ್ಥಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಅಮ್ರೋಹಾ ಮೂಲದ ಅನುಜ್ ಸಿಂಗ್ ಆರೋಪಿಯಾಗಿದ್ದು, ಕಾನ್ಪುರದ ಸ್ನೇಹಾ ಚೌರಾಸಿಯಾ ಹತ್ಯೆಯಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಈಕೆ ಕೂಡಾ ಅಂತಿಮ ಬಿಎ ಓದುತ್ತಿದ್ದಳು.
ಇದನ್ನು ಓದಿ:ಸ್ಯಾಮ್ಸಂಗ್ Galaxy Z Fold 5, Flip 5 ಜುಲೈನಲ್ಲಿ ಬಿಡುಗಡೆ ಸಾಧ್ಯತೆ
ಗುರುವಾರ ಮಧ್ಯಾಹ್ನ ಇಬ್ಬರು ವಿಶ್ವವಿದ್ಯಾನಿಲಯದ ಡೈನಿಂಗ್ ಹಾಲ್ ಹೊರಗೆ ಭೇಟಿಯಾಗಿದ್ದರು. ಅಲ್ಲಿ ಕೆಲಕಾಲ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯನ್ನು ತಬ್ಬಿಕೊಂಡಿದ್ದಾನೆ. ನಂತರ ಅಲ್ಲೇ ಆಕೆಗೆ ಗುಂಡಿಕ್ಕಿದ್ದಾನೆ. ಅಲ್ಲಿಂದ ಆತ ವಸತಿ ನಿಲಯಕ್ಕೆ ಓಡಿಹೋಗಿದ್ದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ: ಬಂಧಿತ ಮೂವರು ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ನಂಟು..!
ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಗ್ರೇಟರ್ ನೋಯ್ಡಾ) ಸಾದ್ ಮಿಯಾ ಖಾನ್, ಹತ್ಯೆಯಾದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ. ಇಬ್ಬರ ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶಿವ ನಾಡರ್ ಇನ್ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಘಟನೆ ಕುರಿತು ಪ್ರತಿಕ್ರಿಯಿಸಿ, ಘಟನೆಯಿಂದ ಮನಸ್ಸಿಗೆ ತೀವ್ರ ದುಃಖ ಮತ್ತು ನೋವಾಗಿದೆ. ಪ್ರಸ್ತುತ ತನಿಖೆಯಲ್ಲಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕ್ಯಾಂಪಸ್‌ನ ಎಲ್ಲ ಇತರ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದರು.
ನಾವು ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ನಾವು ಹತ್ಯೆಯಾದ ವಿದ್ಯಾರ್ಥಿ ಕುಟುಂಬದೊಂದಿಗೆ ಇರುತ್ತೇವೆ ಎಂದೂ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಪತಿ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ, ಪ್ರಿಯಕರ ಬೆಂಗಳೂರಿನಲ್ಲಿ ಸೆರೆ
ಇನ್ನೊಂದೆಡೆ ಗುಜರಾತ್ನಲ್ಲಿ ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿರೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪಾಕಿಸ್ತಾನ ಮತ್ತು ಬಿಹಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದ ಕೆಲವು ಗ್ಯಾಂಗ್‌ಗಳು ಆತ್ಮಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸೂರತ್‌ನ ಜಹಾಂಗೀರ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಹಾಯಕ ಪ್ರಾಧ್ಯಾಪಕಿರೊಬ್ಬರು ಬೆದರಿಕೆ ಮತ್ತು ಹಣದ ಸುಲಿಗೆಯಿಂದ ಬೇಸತ್ತು ಆತ್ಮಹತ್ಯೆ ಶರಣಾಗಿದ್ದಾರೆ. ಅವರ ಫೋಟೋಗಳನ್ನು ತೆಗೆದ ನಂತರ ಅವುಗಳನ್ನು ನಗ್ನ ಚಿತ್ರಗಳಾಗಿ ಮಾರ್ಫಿಂಗ್ ಮಾಡಿದ ಆರೋಪಿಗಳು ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ಸೂರತ್ ಮಹಿಳಾ ಸಹಾಯಕ ಪ್ರಾಧ್ಯಾಪಕಿ ಆತ್ಮಹತ್ಯೆ: ಬಂಧಿತ ಮೂವರು ಆರೋಪಿಗಳಿಗೆ ಪಾಕಿಸ್ತಾನದೊಂದಿಗೆ ನಂಟು..!