ಮೈನ್ಪುರಿ(ಉತ್ತರ ಪ್ರದೇಶ): ಅಗ್ನಿವೀರ್ ನೇಮಕಾತಿಗೋಸ್ಕರ ಈಗಾಗಲೇ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ಅಗ್ನಿವೀರ್ ದೈಹಿಕ ಪರೀಕ್ಷೆಗೋಸ್ಕರ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಓಡುತ್ತಿದ್ದಾಗ ಹಠಾತ್ ಬಿದ್ದು ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೈನ್ಪುರಿ ಜಿಲ್ಲೆಯ ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 12ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಓಡುತ್ತಿದ್ದಾಗ ಏಕಾಏಕಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗ್ತಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ, ಸಾವನ್ನಪ್ಪಿದ್ದಾಳೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ಸೇನೆಗೆ ಸೇರಬೇಕೆಂದು ಕನಸು ಕಾಣುತ್ತಿದ್ದರೆಂದು ಪೋಷಕರು ತಿಳಿಸಿದ್ದಾರೆ.
ಇದನ್ನೂ ಓದಿರಿ: ರೈಲ್ವೆ ಹಳಿ ಮೇಲೆ ವಿದ್ಯಾರ್ಥಿ ಶವ ಪತ್ತೆ: ಆತಂಕ ಮೂಡಿಸಿದ ವಿದ್ಯಾರ್ಥಿಯ ಪೋಸ್ಟ್!
ಘಿರೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಅಲಾಲ್ಪುರ ಗ್ರಾಮದ ಸುರೇಶ್ ಚೌಹಾಣ್ ಅವರ ಪುತ್ರಿ ಶ್ವೇತಾ ಚೌಹಾಣ್(19) ಸಾವನ್ನಪ್ಪಿರುವ ವಿದ್ಯಾರ್ಥಿನಿ. ಅಗ್ನಿಪಥ್ ಯೋಜನೆಯಡಿ ನಡೆಯುತ್ತಿದ್ದ ನೇಮಕಾತಿಗೋಸ್ಕರ ಆಕೆ ತಯಾರಿ ನಡೆಸಿದ್ದರು. ಓಡುತ್ತಿದ್ದಾಗ ಏಕಾಏಕಿ ಕೆಳಗೆ ಬಿದ್ದು, ಸಾವನ್ನಪ್ಪಿದ್ದಾರೆ. ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲೂ ಶೋಕದ ವಾತಾವರಣ ನಿರ್ಮಾಣಗೊಂಡಿದೆ.