ಪಾಟ್ನಾ: ಕಿಡಿಗೇಡಿಗಳ ಗುಂಪೊಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡಿಸಿದೆ. ಪಾಟ್ನಾದ ಗೌರಿಚಕ್ ಪೊಲೀಸ್ ಠಾಣಾ ಸಮೀಪದ ಸಂಪತ್ಚಕ್ ಬ್ಲಾಕ್‌ನ ಸೊಹ್ಗಿ ಗ್ರಾಮದ ಬಳಿ ಈ ವಿಧ್ವಂಸಕ ಕೃತ್ಯ ನಡೆದಿದೆ.
ಎರಡು ಕಾರುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದೊಣ್ಣೆಗಳಿಂದ ಧ್ವಂಸಗೊಳಿಸಿದ್ದಾರೆ. ಕಾರಿನ ಗಾಜುಗಳು ಪುಡಿಪುಡಿಯಾಗಿದ್ದು, ಘಟನೆ ವೇಳೆ ಬೆಂಗಾವಲು ವಾಹನ ಪಡೆಯಲ್ಲಿ ನಿತೀಶ್ ಕುಮಾರ್ ಇರಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಬಾಯ್ಫ್ರೆಂಡ್ ಬದಲಿಸುವ ಮಹಿಳೆಯಂತೆ: ಬಿಜೆಪಿ ಮುಖಂಡನ ಹೇಳಿಕೆ
ಸಿಎಂ ನಿತೀಶ್ ಕುಮಾರ್ ಸೋಮವಾರ ಗಯಾಕ್ಕೆ ಭೇಟಿ ನೀಡಿ, ಮಹತ್ವಾಕಾಂಕ್ಷೆಯ ರಬ್ಬರ್ ಅಣೆಕಟ್ಟು ಯೋಜನೆ ಕುರಿತು ಪರಿಶೀಲನೆ ಮತ್ತು ಆ ಪ್ರದೇಶದ ಬರ ಪರಿಸ್ಥಿತಿ ಅವಲೋಕಿಸುವ ನಿರೀಕ್ಷೆಯಿತ್ತು. ಗಯಾಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿಯೇ ಈ ಘಟನೆ ನಡೆದಿದೆ.
ಬಿಹಾರದಲ್ಲಿ ಹೊಸ ಸರ್ಕಾರ ರಚನೆಯಾಗಿ ಕೆಲ ದಿನಗಳು ಉರುಳಿದೆ. ಬಿಜೆಪಿ ಜೊತೆಗಿನ ಮೈತ್ರಿಯನ್ನ ಕಡಿದುಕೊಂಡು ಆರ್‌ಜೆಡಿ ಜೊತೆ ಮಹಾಘಟಬಂಧನ್ ನೂತನ ಸರ್ಕಾರ ರಚಿಸಿರುವ ಸಿಎಂ ನಿತೀಶ್ ಕುಮಾರ್‌ಗೆ ಇದೀಗ ದಾಳಿ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ: ಪ್ರಮಾಣವಚನ ಸ್ವೀಕರಿಸಿ ಸಿಎಂ ನಿತೀಶ್ ಕುಮಾರ್ ಕಾಲಿಗೆರಗಿದ ಲಾಲು ಪುತ್ರ ತೇಜಸ್ವಿ