ಔರಂಗಾಬಾದ್ (ಮಹಾರಾಷ್ಟ್ರ): ಶಿವಸಂವಾದ ಯಾತ್ರೆಯ ವೇಳೆ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಶಿವಸೇನೆ ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ. ಔರಂಗಾಬಾದ್‌ನ ಮಹಲ್‌ಗಾಂವ್‌ನಲ್ಲಿ ಮಂಗಳವಾರ ಠಾಕ್ರೆ ಅವರ ಕಾರ್ಯಕ್ರಮ ಮತ್ತು ರಮಾಬಾಯಿ ಅಂಬೇಡ್ಕರ್ ಅವರ ಮೆರವಣಿಗೆ ಏಕಕಾಲದಲ್ಲಿ ನಡೆದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಶಿವಸೇನೆ ಶಾಸಕ ಆದಿತ್ಯ ಠಾಕ್ರೆ ಸದ್ಯ ಔರಂಗಾಬಾದ್‌ಗೆ ಭೇಟಿ ನೀಡುತ್ತಿದ್ದರು. ಮಹಲ್‌ಗಾಂವ್‌ನಲ್ಲಿ ಆದಿತ್ಯ ಠಾಕ್ರೆ ಅವರ ಶಿವಸಂವಾದ ಯಾತ್ರೆ ಮತ್ತು ರಾಮಾಯಿ ಅವರ ಮೆರವಣಿಗೆ ಏಕಕಾಲದಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ರಮಾಬಾಯಿ ಮೆರವಣಿಗೆ ನಿಲ್ಲಿಸಿದ ಬಳಿಕ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಕೆಲಕಾಲ ಉದ್ವಿಗ್ನ ಸ್ಥಿತಿ ಉಂಟಾಗಿತ್ತು. ಆದರೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.
'ವೈಜಾಪುರದ ಮಹಲ್‌ಗಾಂವ್‌ನಲ್ಲಿ ಆದಿತ್ಯ ಠಾಕ್ರೆ ಶಿವಸಂವಾದ ಯಾತ್ರೆಯನ್ನು ನಡೆಸುತ್ತಿದ್ದರು. ಅದೇ ಸಮಯದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನದ ಮೆರವಣಿಗೆ ಪ್ರಾರಂಭವಾಯಿತು. ಮೆರವಣಿಗೆ ನಡೆಸುತ್ತಿದ್ದವರು ಮತ್ತು ಶಿವಸೇನೆ ಬೆಂಗಾವಲು ಪಡೆಯ ನಡುವೆ ಬಿರುಕು ಮೂಡಿಸಲು ಕೆಲ ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಆರೋಪಿಸಿದ್ದಾರೆ.
ನಾವು ಸ್ಥಳದಿಂದ ಹೊರಡುವಾಗ ಬೆಂಗಾವಲು ಪಡೆ ಮೇಲೆ ಕೆಲವರು ಕಲ್ಲು ತೂರಿದರು. ಅಲ್ಲದೇ ಸ್ಥಳೀಯ ಶಾಸಕ ರಮೇಶ ಬೋರ್ನಾರೆ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಗುಂಪು ಗುಂಪಾಗಿ ಸಮಾಜ ವಿರೋಧಿ ಕೃತ್ಯ ಸೃಷ್ಟಿಸಲು ಪ್ರಯತ್ನಿಸಿದರು ಎಂದು ಅಂಬಾದಾಸ್ ದಾನ್ವೆ ದೂರಿದರು.
ಇದನ್ನೂ ಓದಿ: 'ಅಧಿಕಾರಕ್ಕಾಗಿ ಪಕ್ಷ ಒಡೆಯುವುದೇ?' ರೆಬೆಲ್ ಶಾಸಕರ ನಡೆಗೆ ಆದಿತ್ಯ ಠಾಕ್ರೆ ಅಸಮಾಧಾನ
ಡಿಜೆ ಮತ್ತು ಮೆರವಣಿಗೆಯನ್ನು ನಿಲ್ಲಿಸುವಂತೆ ಪೊಲೀಸರು ಹೇಳಿದಾಗ ಜನರು ಕೋಪಗೊಂಡು ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿಯನ್ನು ನೋಡುತ್ತಾ ಆದಿತ್ಯ ಠಾಕ್ರೆ ವೇದಿಕೆಯಿಂದ ಕೆಳಗಿಳಿದು ಭಾಷಣ ಮಾಡಿದರು. ಬಳಿಕ ಅವರು ನೆರೆದಿದ್ದ ಜನರಲ್ಲಿ ಅನಾನುಕೂಲತೆಗಾಗಿ ಕ್ಷಮೆಯಾಚಿಸಿದರು. ಅಲ್ಲದೇ ಡಿಜೆ ಮತ್ತು ಮೆರವಣಿಗೆಯನ್ನು ನಡೆಸಲು ಬಯಸಿದರೆ ಅವರು ಮುಂದುವರೆಸಬಹುದು ಎಂದು ಹೇಳಿದರು. ಬಳಿಕ ನೆರೆದಿದ್ದ ಜನಸಮೂಹ ಆದಿತ್ಯ ಠಾಕ್ರೆ ಅವರ ಕಾರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅದನ್ನು ಭದ್ರತಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ ಎಂದು ದಾನ್ವೆ ತಿಳಿಸಿದ್ದಾರೆ.
ಮಹಲ್‌ಗಾಂವ್‌ನಲ್ಲಿ ಶಿವಸಂವಾದ ಯಾತ್ರೆ ನಡೆಯುತ್ತಿದ್ದರೆ, ಮತ್ತೊಂದೆಡೆ ಈ ಭಾಗದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಕಾರ್ಯಕ್ರಮ ನಡೆೆಯುತ್ತಿದ್ದಂತೆಯೇ ಪೊಲೀಸರು ಭೀಮಸೈನಿಕರಿಗೆ ರಮಾಬಾಯಿಯವರ ಜನ್ಮ ದಿನಾಚರಣೆ ಮೆರವಣಿಗೆ ಮತ್ತು ಡಿಜೆ ನಿಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಸಿಟ್ಟಿಗೆದ್ದ ಭೀಮಸೈನಿಕರು ಸಭೆಯತ್ತ ಕಲ್ಲುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಇದನ್ನೂ ಓದಿ: ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಿ.. ರಾ.ಮ. ಹಕ್ಕುಗಳ ಆಯೋಗದಿಂದ ನಿರ್ದೇಶನ