ETV Bharat / bharat

ಮುನುಗೋಡು ಉಪಚುನಾವಣೆ: ಟಿಆರ್‌ಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

author img

By

Published : Nov 1, 2022, 4:32 PM IST

Updated : Nov 1, 2022, 8:03 PM IST

ತೆಲಂಗಾಣದ ಪಲಿವೇಲದಲ್ಲಿ ಬಿಜೆಪಿ ಮತ್ತು ಟಿಆರ್‌ಎಸ್ ಕಾರ್ಯಕರ್ತರು ಪರಸ್ಪರ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

ಮುನುಗೋಡಿನಲ್ಲಿ ಟಿಆರ್‌ಎಸ್ ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲು ತೂರಾಟ

ಮುನುಗೋಡು(ತೆಲಂಗಾಣ) : ತೆಲಂಗಾಣದ ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ಎರಡೇ ದಿನಗಳ ಬಾಕಿಯಿದೆ. ಈ ನಡುವೆ ಬಿಜೆಪಿ ಮತ್ತು ಟಿಆರ್‌ಎಸ್ ಕಾರ್ಯಕರ್ತರು ಪರಸ್ಪರ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇದರಿಂದ ಇಲ್ಲಿನ ಪಲಿವೇಲದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಲಿವೇಲದಲ್ಲಿ ಬಿಜೆಪಿ ಒಂದೆಡೆ, ಟಿಆರ್‌ಎಸ್‌ ಮತ್ತೊಂದೆಡೆ ಪ್ರಚಾರ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ದಾಳಿ - ಪ್ರತಿದಾಳಿ ಮಾಡಿಕೊಂಡಿದ್ದಾರೆ. ಬಿಜೆಪಿ ಪ್ರಚಾರ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ಈಟೆಲ ರಾಜೇಂದರ್ ಅವರ ಬೆಂಗಾವಲು ವಾಹನದ ಮೇಲೂ ಕಲ್ಲು ತೂರಾಟ ನಡೆದಿದೆ.

ಗಲಾಟೆಯಿಂದಾಗಿ ಕಾರಿನ ಗಾಜು ಪುಡಿಯಾಗಿರುವುದು
ಗಲಾಟೆಯಿಂದಾಗಿ ಕಾರಿನ ಗಾಜು ಪುಡಿಯಾಗಿರುವುದು

ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಓದಿ: ಮಹಾರಾಷ್ಟ್ರದ ಸ್ಟೀಲ್​ ಕಾರ್ಖಾನೆಯಲ್ಲಿ ಸ್ಫೋಟ: ಇಬ್ಬರು ಕಾರ್ಮಿಕರ ದುರ್ಮರಣ

Last Updated : Nov 1, 2022, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.