ETV Bharat / bharat

ಕೊರೊನಾ ಸೋಂಕಿತನ ಶವಸಂಸ್ಕಾರಕ್ಕೆ ವಿರೋಧ: ಸ್ಥಳೀಯರಿಂದ ಕಲ್ಲೆಸೆತ

author img

By

Published : May 5, 2021, 8:42 AM IST

ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸ್ಥಳೀಯರು ಕಲ್ಲು ತೂರಿರುವ ಘಟನೆ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯಲ್ಲಿ ನಡೆದಿದೆ.

Stone pelt on Baldia Funeral workers, Stone pelt on Baldia Funeral workers in Adilabad, Adilabad news, Adilabad corona news, ಶವಸಂಸ್ಕಾರ ಕಾರ್ಯಕರ್ತರ ಮೇಲೆ ಕಲ್ಲಿನ ದಾಳಿ, ಆದಿಲಾಬಾದ್​ನಲ್ಲಿ ಶವಸಂಸ್ಕಾರ ಕಾರ್ಯಕರ್ತರ ಮೇಲೆ ಕಲ್ಲಿನ ದಾಳಿ, ಆದಿಲಾಬಾದ್​ ಸುದ್ದಿ, ಆದಿಲಾಬಾದ್​ ಕೊರೊನಾ ಸುದ್ದಿ,
ಕೊರೊನಾ ಶವಸಂಸ್ಕಾರ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಕಲ್ಲಿನ ದಾಳಿ

ಆದಿಲಾಬಾದ್​: ಕೊರೊನಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡುತ್ತಿದ್ದ ವೇಳೆ ಸ್ಥಳೀಯ ನಿವಾಸಿಗಳು ಕಲ್ಲು ತೂರಿರುವ ಘಟನೆ ಆದಿಲಾಬಾದ್‌ನಲ್ಲಿ ವರದಿಯಾಗಿದೆ.

ಅನುಕುಂಟ ಗ್ರಾಮದ ವ್ಯಕ್ತಿಯೊಬ್ಬರು ಸೋಮವಾರ ಕೊರೊನಾದಿಂದಾಗಿ ಆದಿಲಾಬಾದ್‌ನ​ ರಿಮ್ಸ್​ನಲ್ಲಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಶವಸಂಸ್ಕಾರ ನಡೆಸುವ ಕಾರ್ಯಕರ್ತರು ಆಂಬ್ಯುಲೆನ್ಸ್​ನಲ್ಲಿ ಅನುಕುಂಟ ಗ್ರಾಮವೆಂದು ತಿಳಿದು ಬಂಗಾರಿಗೂಡ ಗ್ರಾಮದ ನದಿಯ ದಡಕ್ಕೆ ತೆಗೆದುಕೊಂಡು ಹೋಗಿದ್ದರು. ರಾತ್ರಿ 8 ರ ಸುಮಾರಿಗೆ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಶವವನ್ನು ಇಲ್ಲಿಗೇಕೆ ತಂದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಬಳಿಕ ಕಲ್ಲಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಕುರಿತು ಪುರಸಭೆ ಕಮಿಷನರ್​ ಪೊಲೀಸರಿಗೆ ದೂರು ನೀಡಿದ್ದು, ಕೈಲಾಸ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.