ETV Bharat / bharat

ಚುನಾವಣಾ ಸುಧಾರಣೆ ಮಸೂದೆ ಅನುಮೋದನೆ.. ಆಧಾರ್​ಗೆ ವೋಟರ್​ ಲಿಂಕ್​ ಜೋಡಿಸಲು ಹೀಗೆ ಮಾಡಿ..

author img

By

Published : Dec 17, 2021, 8:09 AM IST

ಕೇಂದ್ರ ಸಂಪುಟವು ಬುಧವಾರ ಚುನಾವಣಾ ಸುಧಾರಣೆಗಳ ಮಸೂದೆಯನ್ನು ಅನುಮೋದಿಸಿದೆ. ಅದರನ್ವಯ ಮತದಾರರ ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡಲು ಅವಕಾಶ ನೀಡಿದೆ..

Aadhaar Voter ID Linking, bill on electoral reforms, linking of Aadhaar to voter ID cards, Election Commission of India, ಆಧಾರ್​ಗೆ ವೋಟರ್​ ಲಿಂಕ್,  ಚುನಾವಣಾ ಸುಧಾರಣೆ ಮಸೂದೆ, ಮತದಾರರ ವೋಟರ್​ ಐಡಿಗೆ ಆಧಾರ್ ಲಿಂಕ್, ಭಾರತದ ಚುನಾವಣೆ ಆಯೋಗ,
ಆಧಾರ್​ಗೆ ವೋಟರ್​ ಲಿಂಕ್​ ಜೋಡಿಸಲು ಹೀಗೆ ಮಾಡಿ

ನವದೆಹಲಿ : ಚುನಾವಣೆ ಆಯೋಗದ ಶಿಫಾರಸಿನಂತೆ ಚುನಾವಣೆ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿದೆ. ನಾಲ್ಕು ಪ್ರಮುಖ ಸುಧಾರಣೆ ತರುವ ವಿಧೇಯಕ ಮಂಡನೆಗೆ ಬುಧವಾರ ನಡೆದ ಸಚಿವ ಸಂಪುಟ ಸಭೆ ಅಂಗೀಕಾರ ಸೂಚಿಸಿದೆ. ಇವುಗಳಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆಯೂ ಸೇರಿದೆ.

ಚುನಾವಣೆ ಪ್ರಕ್ರಿಯೆ ಸಮರ್ಪಕ ಅನುಷ್ಠಾನ, ಮತದಾನ ಹೆಚ್ಚಿಸಲು ಕ್ರಮ, ಚುನಾವಣೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವುದು ಹಾಗೂ ನಕಲಿ ಮತದಾನ ತಡೆಯುವ ದಿಸೆಯಲ್ಲಿ ಕೇಂದ್ರ ಸರಕಾರ ವಿಧೇಯಕ ಮಂಡಿಸಲಿದೆ.

ಆಧಾರ್‌ ಸಂಖ್ಯೆ-ಪ್ಯಾನ್‌ ಸಂಖ್ಯೆ ಜೋಡಿಸಿದಂತೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡುವುದು ಹೊಸ ಸುಧಾರಣೆಯಾಗಿದೆ. ಇದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪುತ್ತದೆ.

ಈವರೆಗೆ ಪ್ರತಿ ವರ್ಷದ ಜನವರಿ 1ಕ್ಕೂ ಮೊದಲು 18 ವರ್ಷ ತುಂಬಿದವರು ವರ್ಷದಲ್ಲಿ ಒಮ್ಮೆ ಮಾತ್ರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಿತ್ತು. ಆದರೆ, ಇನ್ನು ಮುಂದೆ ನಾಲ್ಕು ಬಾರಿ ನೋಂದಣಿಗೆ ಅವಕಾಶ ನೀಡಲಾಗಿದೆ. ಜನವರಿ 1, ಏಪ್ರಿಲ್‌ 1, ಜುಲೈ 1 ಹಾಗೂ ಅಕ್ಟೋಬರ್‌ 1 ಎಂಬ ನಾಲ್ಕು ಕಟ್‌ಆಫ್‌ ದಿನಾಂಕ ನೀಡಿದೆ.

ಹಾಗೆಯೇ, ಚುನಾವಣೆ ನಡೆಸಲು ಶಾಲೆ ಸೇರಿ ಹಲವು ಪ್ರಮುಖ ಸಂಸ್ಥೆಗಳಿಂದ ಕಟ್ಟಡ ನೀಡಲು ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಚುನಾವಣೆ ಆಯೋಗಕ್ಕೆ ಚುನಾವಣೆ ನಡೆಸಲು ಯಾವುದೇ ಕಟ್ಟಡ ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ.

ಓದಿ: ರೋರಿಂಗ್​ ಸ್ಟಾರ್ ಹುಟ್ಟುಹಬ್ಬ ಆಚರಣೆ ಇಲ್ಲ : ಫ್ಯಾನ್ಸ್​​ಗೆ ಶ್ರೀಮುರಳಿ ಸಂದೇಶ

ಸೇವಾ ಅಧಿಕಾರಿಗಳಲ್ಲಿ ಲಿಂಗ ಸಮಾನತೆ ತರಲು ಕಾನೂನು ರೂಪಿಸಲು ಸಹ ಕೇಂದ್ರ ಸರಕಾರ ತೀರ್ಮಾನಿಸಿದೆ. ಇದುವರೆಗೆ ಸರಕಾರಿ ಉದ್ಯೋಗದಲ್ಲಿರುವ ಪುರುಷ ಉದ್ಯೋಗಿಯ ಪತ್ನಿಗೆ ಮಾತ್ರ ಅಂಚೆ ಮೂಲಕ ಮತದಾನ ಮಾಡಲು ಅನುಮತಿ ಇತ್ತು. ಆದರೆ, ಇನ್ನು ಮುಂದೆ ಮಹಿಳಾ ನೌಕರರ ಪತಿಯಂದಿರೂ ಕೂಡ ಅಂಚೆ ಮತದಾನ ಮಾಡಬಹುದಾಗಿದೆ.

ಆಧಾರ್​ ಲಿಂಕ್​ ಕಡ್ಡಾಯವಲ್ಲ : ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದ್ರೆ, ಆಧಾರ್​ ಲಿಂಕ್ ಮಾಡುವುದರಿಂದ ನಕಲಿ ಮತದಾನ ಹಾಗೂ ಎರಡು ಕಡೆ ಮತದಾರರ ಗುರುತಿನ ಚೀಟಿ ಹೊಂದುವುದು ತಪ್ಪಿಸುವಂತೆ ಆಗುತ್ತದೆ.

ಆಧಾರ್ ಲಿಂಕ್ ಮಾಡುವುದು ಹೇಗೆ?:

  • https://voterportal.eci.gov.in ಗೆ ಭೇಟಿ ನೀಡಿ. ಬಳಿಕ ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ/ವೋಟರ್ ಐಡಿ ಸಂಖ್ಯೆ ಬಳಸಿ ಲಾಗಿನ್ ಆಗಿ ಮತ್ತು ಪಾಸ್‌ವರ್ಡ್ ಹಾಕಿ..
  • ನಿಮ್ಮ ಹೆಸರು, ಹುಟ್ಟಿದ ದಿನಾಂಕ ಮತ್ತು ತಂದೆಯ ಹೆಸರು ಸೇರಿದಂತೆ ರಾಜ್ಯ, ಜಿಲ್ಲೆ ಮತ್ತು ವೈಯಕ್ತಿಕ ವಿವರಗಳನ್ನು ನೀಡಿ..
  • ವಿವರಗಳನ್ನು ನೀಡಿದ ಬಳಿಕ ‘Search’ ಬಟನ್ ಕ್ಲಿಕ್ ಮಾಡಿ. ನೀವು ನೀಡಿರುವ ವಿವರಗಳು ಸರ್ಕಾರಿ ಡೇಟಾಬೇಸ್‌ಗೆ ಹೊಂದಿಕೆಯಾಗಬೇಕು. ಬಳಿಕ ವಿವರಗಳು ಪರದೆಯ ಮೇಲೆ ಗೋಚರಿಸುತ್ತವೆ.
  • ಪರದೆಯ ಎಡಭಾಗದಲ್ಲಿ ಗೋಚರಿಸುವ ‘Feed Aadhaar No’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಆಗ ಆಧಾರ್ ಕಾರ್ಡ್, ಆಧಾರ್ ಸಂಖ್ಯೆ, ಮತದಾರರ ಗುರುತಿನ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಾಯಿತ ಇಮೇಲ್ ವಿಳಾಸದಲ್ಲಿ ನಮೂದಿಸಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಬೇಕಾದ ಪುಟವೊಂದು ತೆರೆದುಕೊಳ್ಳುತ್ತದೆ. ಆ ಪುಟದಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ನಮೂದಿಸಿ. ಬಳಿಕ Submit ಬಟನ್ ಒತ್ತಿರಿ. ಇದಾದ ನಂತರ ನಿಮ್ಮ ಅರ್ಜಿ ಯಶಸ್ವಿಯಾಗಿ ನೋಂದಾಯಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ.

ಎಸ್‌ಎಂಎಸ್ ಮೂಲಕ ಆಧಾರ್​ ಲಿಂಕ್​ : < ಮತದಾರರ ID ಸಂಖ್ಯೆ > < ಆಧಾರ್_ಸಂಖ್ಯೆ > ಈ ಮಾದರಿಯಲ್ಲಿ ಬರೆದು 166 ಅಥವಾ 51969ಗೆ ಎಸ್​ಎಂಎಸ್ ಕಳುಹಿಸುವ ಮೂಲಕ ನೀವು ನಿಮ್ಮ ಆಧಾರ್ ಅ​ನ್ನು ವೋಟರ್ ಐಡಿಯೊಂದಿಗೆ ಲಿಂಕ್ ಮಾಡಬಹುದಾಗಿದೆ.

ಫೋನ್ ಮೂಲಕ ಆಧಾರ್ ಲಿಂಕ್ : ನೀವು ಕಾಲ್ ಸೆಂಟರ್​ಗಳಿಗೆ ಕರೆ ಮಾಡುವ ಮೂಲಕ ನಿಮ್ಮ ಗುರುತಿನ ಚೀಟಿಗೆ ಆಧಾರ್​ ಲಿಂಕ್​ ಅನ್ನು ಮಾಡಬಹುದಾಗಿದೆ. ನೀವು ವಾರದ ದಿನಗಳಲ್ಲಿ 10 ರಿಂದ ಸಂಜೆ 5ರ ನಡುವೆ 1950 ನಂಬರ್​ಗೆ ಡಯಲ್ ಮಾಡಬೇಕಾಗುತ್ತದೆ. ನಂತರ ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಮಾಡಲು ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳವ ಮೂಲಕ ನಿಮ್ಮ ಗುರುತಿನ ಚೀಟಿಗೆ ಆಧಾರ್​ ಲಿಂಕ್​ನ್ನು ಮಾಡಬಹುದಾಗಿದೆ.

ಓದಿ: ಸಾವು ಗೆದ್ದ ದಿವ್ಯಾಂಶಿ... ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ

ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಆಧಾರ್ ಲಿಂಕ್ : ಹತ್ತಿರದ ಬೂತ್ ಮಟ್ಟದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಬಹುದಾಗಿದೆ. ಬೂತ್ ಮಟ್ಟದ ಅಧಿಕಾರಿಯು ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ. ವಿವರಗಳನ್ನು ಪರಿಶೀಲಿಸಲು ನಿಮ್ಮ ಮನೆಗಳಿಗೆ ಭೇಟಿ ನೀಡಬಹುದು. ಒಮ್ಮೆ ಪರಿಶೀಲಿಸಿದರೆ, ನಂತರ ಅದು ದಾಖಲೆಗಳಲ್ಲಿ ಕಾಣಿಸಿಕೊಳ್ಳಲಿದೆ.

ಆಧಾರ್ ಲಿಂಕ್ ಆಗಿದೆ ಅಥವಾ ಇಲ್ಲವೋ...? : ನೀವು ಎನ್​ವಿಎಸ್​​ಪಿ(NVSP) ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಪರಿಶೀಲಿಸಬಹುದು. https://voterportal.eci.gov.in ನಲ್ಲಿ ಮಾಹಿತಿಯನ್ನು ನಮೂದಿಸಿ. ವಿನಂತಿಯನ್ನು ನೋಂದಾಯಿಸಲಾಗಿದೆ ಮತ್ತು ಪ್ರಕ್ರಿಯೆಯಲ್ಲಿದೆ ಎಂದು ಹೇಳುವ ಅಧಿಸೂಚನೆಯು ನಿಮಗೆ ಘೋಚರಿಸುತ್ತದೆ.

ನಿಮ್ಮ ಆಧಾರ್ ಕಾರ್ಡ್ ವೋಟರ್ ಐಡಿಯೊಂದಿಗೆ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಲು ನೀವು UIDAIಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಹೀಗೆ ಮೇಲಿನ ಮಾಹಿತಿ ಮೂಲಕ ಆಧಾರ್ ಲಿಂಕ್​ನ್ನು ನಿಮ್ಮ ಗುರುತಿನ ಚೀಟಿಗೆ ಜೋಡಿಸಬಹುದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.