ಗ್ವಾಲಿಯರ್: ಕೊರೊನಾ ಸೋಂಕಿತರಿಗಾಗಿ ಇಂದೋರ್ನಿಂದ ರೆಮ್ಡಿಸಿವಿರ್ ಇಂಜೆಕ್ಷನ್ ಸಾಗಿಸುತ್ತಿದ್ದ ವಿಮಾನ ಗ್ವಾಲಿಯರ್ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವ ವೇಳೆ ಅಪಘಾತಕ್ಕೀಡಾಗಿದೆ.
ಮಧ್ಯಪ್ರದೇಶ ವಿಮಾನಯಾನ ಇಲಾಖೆಯ 7 ಜನ ಪ್ರಯಾಣಿಸುವ ಏರ್ಕ್ರಾಫ್ಟ್ ಇದಾಗಿದ್ದು, ರೆಮ್ಡಿಸಿವಿರ್ ಇಂಜೆಕ್ಷನ್ ತರುತ್ತಿತ್ತು. ಲ್ಯಾಂಡ್ ಆಗುವಾಗ ವೇಗದಲ್ಲಿ ರನ್ವೇಗೆ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಲಗುತ್ತಿದೆ.
ವಿಮಾನದ ಕ್ಯಾಪ್ಟನ್ ಮತ್ತು ಸಹ ಪೈಲೆಟ್ ಸೇರಿ ಮೂವರು ಗಾಯಗೊಂಡಿದ್ದು, ಏರ್ಫೋರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಮಾದಲ್ಲಿದ್ದ ರೆಮ್ಡಿಸಿವಿರ್ ಇಂಜೆಕ್ಷನ್ಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಗ್ವಾಲಿಯರ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾಗ್ಪುರದಿಂದ ಹೈದರಾಬಾದ್ಗೆ ಹೋಗಬೇಕಾಗಿದ್ದ ಏರ್ ಆ್ಯಂಬುಲೆನ್ಸ್ ತಾಂತ್ರಿಕ ವೈಫಲ್ಯದಿಂದಾಗಿ ಮುಂಬೈ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡ್ ಆದ ಬೆನ್ನಲ್ಲೇ ಈ ಅವಘಡ ಸಂಭವಿಸಿದೆ. (ತಾಂತ್ರಿಕ ವೈಫಲ್ಯ: ಮುಂಬೈ ಏರ್ಪೋರ್ಟ್ನಲ್ಲಿ ಏರ್ ಆ್ಯಂಬುಲೆನ್ಸ್ ತುರ್ತು ಲ್ಯಾಂಡಿಂಗ್)