ಔರಂಗಾಬಾದ್: ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಯುವಕರಿಬ್ಬರು ಸಣ್ಣ ಪ್ರಮಾಣದಲ್ಲಿ ಮಾಂಸ ಮಾರಾಟದ ಬಿಸಿನೆಸ್ ಆರಂಭಿಸಿ, ಈಗ ಆ ಕಂಪನಿಯನ್ನು 10 ಕೋಟಿ ರೂಪಾಯಿಗಳಿಗೆ ಮಾರಿದ ಯಶೋಗಾಥೆ ಇಲ್ಲಿದೆ.
2020ರ ಮಧ್ಯಭಾಗದಲ್ಲಿ ಅಪ್ಪಳಿಸಿದ ಕೊರೊನಾ ಅಲೆಯ ಲಾಕ್ಡೌನ್ನಿಂದ ಆಕಾಶ್ ಮಾಸ್ಕೆ ಮತ್ತು ಆದಿತ್ಯ ಕೀರ್ತನೆ ಎಂಬಿಬ್ಬರ ಜೀವನದಲ್ಲಿ ದುರಂತದ ಸರಮಾಲೆ ಘಟಿಸಿದ್ದವು. ಬಾಲ್ಯದ ಗೆಳೆಯರಾಗಿದ್ದ ಈ ಇಬ್ಬರೂ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು. ಆದರೆ, ಲಾಕ್ಡೌನ್ ಆಗಿದ್ದರಿಂದ ಮೊದಲ ಒಂದು ತಿಗಳು ಸಿನಿಮಾ ನೋಡುತ್ತ ಮನೆಯಲ್ಲೇ ಕಾಲಹರಣ ಮಾಡಿದ್ದರು. ಲಾಕ್ಡೌನ್ ದೀರ್ಘಾವಧಿಗೆ ಮುಂದುವರೆದಿದ್ದರಿಂದ ಇವರನ್ನು ಕಂಪನಿ ಕೆಲಸದಿಂದ ವಜಾ ಮಾಡಿತ್ತು.
ಔರಂಗಾಬಾದ್ ಸುತ್ತಮುತ್ತ ಉದ್ಯಮ ವಹಿವಾಟುಗಳು ಚೆನ್ನಾಗಿ ನಡೆಯುತ್ತಿರುವುದರ ಪರಿಚಯವಿದ್ದ ಇಬ್ಬರೂ ತಮ್ಮದೇ ಆದ ಬಿಸಿನೆಸ್ ಆರಂಭಿಸಲು ತೀರ್ಮಾನಿಸಿದರು. ಹೊಸ ಬಿಸಿನೆಸ್ ಆರಂಭಿಸುವ ಬಗ್ಗೆ ಹಲವಾರು ಪುಸ್ತಕಗಳನ್ನು ಓದಿಕೊಂಡ ಇಬ್ಬರೂ ಸಾಕಷ್ಟು ಉತ್ಸಾಹಭರಿತರಾಗಿದ್ದರು. ಇಷ್ಟಾದರೂ ನಿಖರವಾಗಿ ಏನು ಆರಂಭಿಸಬೇಕೆಂಬುದು ಮಾತ್ರ ತಿಳಿದಿರಲಿಲ್ಲ.
ಸ್ಥಳೀಯ ವಿಶ್ವವಿದ್ಯಾಲಯವೊಂದರಲ್ಲಿ ಇಬ್ಬರೂ ಮಾಂಸ ಮತ್ತು ಕೋಳಿ ಸಂಸ್ಕರಣೆಯ ಕೋರ್ಸ್ ಒಂದನ್ನು ಕಲಿತು ಮುಗಿಸಿದ್ದು, ಅವರ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ್ ತಂದಿತು. ಅತ್ಯಂತ ಅಸಂಘಟಿತವಾದ ಮಾಂಸ ಮಾರುಕಟ್ಟೆಗೆ ಪ್ರವೇಶಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸರಕು ನೀಡುವುದು ಅವರ ಉದ್ದೇಶವಾಗಿತ್ತು. ಇದೊಂಥರ ಬೇರೆ ರೀತಿಯ ಐಡಿಯಾ ಆಗಿದ್ದರಿಂದ ಇಬ್ಬರ ಕುಟುಂಬದವರು ಅವರ ಬೆಂಬಲಕ್ಕೆ ಬರಲಿಲ್ಲ.
25 ಸಾವಿರ ಹೂಡಿಕೆ ಮಾಡಿ 100 ಚದರ ಅಡಿ ಜಾಗದಲ್ಲಿ ವ್ಯಾಪಾರ ಆರಂಭಿಸಿ ಈಗ ತಿಂಗಳಿಗೆ ₹ 4 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುತ್ತಿದೆ. ಈ ಬಗ್ಗೆ ಗಮನಿಸಿದ ಫ್ಯಾಬಿ ಇತ್ತೀಚೆಗೆ 10 ಕೋಟಿ ಹೂಡಿಕೆ ಮಾಡಿದ್ದಾರೆ. ಇನ್ನು ಕಂಪನಿಯ ಸ್ಥಾಪಕರಾದ ಆಕಾಶ್ ಮಾಸ್ಕೆ ಮತ್ತು ಆದಿತ್ಯ ಕೀರ್ತನೆ ಅಲ್ಪ ಷೇರುಗಳೊಂದಿಗೆ ತಮ್ಮ ಬ್ರ್ಯಾಂಡ್‌ನಲ್ಲಿ ಮುಂದುವರೆಯಲಿದ್ದಾರೆ.
ಇದನ್ನು ಓದಿ:ರಿಯಲ್ ಎಸ್ಟೇಟ್.. 1 ಲಕ್ಷ ಕೋಟಿ ದಾಖಲೆಯ ವಹಿವಾಟು