ETV Bharat / bharat

ಅಂತಿಮ​​​ ವರ್ಷದ ವಿದ್ಯಾರ್ಥಿಗೆ ₹1 ಕೋಟಿ ಸ್ಯಾಲರಿ ಆಫರ್ ನೀಡಿದ ಅಮೆಜಾನ್​ - ಚೆನ್ನೈ ಎಸ್​ಆರ್​ಎಂ ವಿದ್ಯಾರ್ಥಿ

ಚೆನ್ನೈನ ವಿದ್ಯಾರ್ಥಿಯೋರ್ವನಿಗೆ ಜರ್ಮನಿ ಅಮೆಜಾನ್ ಕಂಪನಿ ವರ್ಷಕ್ಕೆ 1 ಕೋಟಿ ರೂಪಾಯಿ ಸ್ಯಾಲರಿ ನೀಡುವ ಜಾಬ್​​ ಆಫರ್ ನೀಡಿದೆ.

SRM student gets rs 1 crore job offer from Amazon

author img

By

Published : May 18, 2022, 8:55 PM IST

Updated : May 19, 2022, 3:43 PM IST

ಚೆನ್ನೈ(ತಮಿಳುನಾಡು): ಚೆನ್ನೈನ ಎಸ್​​ಆರ್​​ಎಂ ಇನ್​​​ಸ್ಟಿಟ್ಯೂಟ್​ ಆಫ್​ ಸೈನ್ಸ್​ ಆ್ಯಂಡ್ ಟೆಕ್ನಾಲಜಿ ಅಂತಿಮ​ ವರ್ಷದ ವಿದ್ಯಾರ್ಥಿಯೋರ್ವನಿಗೆ ಜರ್ಮನಿಯ ಅಮೆಜಾನ್ ಕಂಪನಿ ಭರ್ಜರಿ ಆಫರ್ ನೀಡಿದೆ. ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪುರಂಜಯ್ ಮೋಹನ್​​ಗೆ ವಾರ್ಷಿಕವಾಗಿ 1 ಕೋಟಿ ರೂಪಾಯಿ ಸ್ಯಾಲರಿ ನೀಡುವುದಾಗಿ ಆಫರ್ ಮಾಡಿದೆ.

ಜರ್ಮನಿಯ ಅಮೆಜಾನ್​​ ಸಾಫ್ಟ್​ವೇರ್​ ಅಭಿವೃದ್ಧಿಗೋಸ್ಕರ ಈ ಆಫರ್ ನೀಡಲಾಗಿದೆ ಎಂದು ಇನ್​​​​ಸ್ಟಿಟ್ಯೂಟ್ ಹೇಳಿಕೊಂಡಿದೆ. ಮಾಧ್ಯಮಗೋಷ್ಟಿಯಲ್ಲಿ ಈ ಕುರಿತು ಮಾತನಾಡಿರುವ ಎಸ್​ಆರ್​ಎಂ ಸಂಸ್ಥಾಪಕ, ಕುಲಪತಿ ಡಾ. ಟಿ.ಆರ್​ ಪರಿವೇಂದರ್​, ವಿದ್ಯಾರ್ಥಿಗಳನ್ನ ನಮ್ಮ ಸಂಸ್ಥೆ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ ಎಂಬುದಕ್ಕೆ ವಿದ್ಯಾರ್ಥಿ ಪುರಂಜಯ್​ ಉತ್ತಮ ಉದಾಹರಣೆ ಎಂದರು.

ಇದನ್ನೂ ಓದಿ: ಖರೀದಿಸುವ ಸೋಗಿನಲ್ಲಿ ಬಂದ್ರು.. ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರನ್ನೇ ಕದ್ದೊಯ್ದ ಸಹೋದರರು!

ಇದೇ ವೇಳೆ ಮಾತನಾಡಿರುವ ಪ್ರಾದ್ಯಾಪಕ ಸತ್ಯನಾರಾಯಣ್​, ಕಳೆದ ವರ್ಷ ಕೂಡ ನಮ್ಮ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ತಲಾ 50 ಲಕ್ಷ ರೂ.(ವಾರ್ಷಿಕ) ಸ್ಯಾಲರಿ ಪ್ಯಾಕೇಜ್ ಪಡೆದುಕೊಂಡಿದ್ದರು. ಆದರೆ, ಈ ವರ್ಷ 1 ಕೋಟಿ ಪ್ಯಾಕೇಜ್ ನೀಡಿದ್ದಾರೆ. ಇದು ನಮ್ಮ ಸಂಸ್ಥೆಯ ಹೆಮ್ಮೆಯ ವಿಚಾರ. SRMಗೆ ಪ್ರಸಕ್ತ ವರ್ಷದಲ್ಲಿ ಸಾವಿರಕ್ಕೂ ಅಧಿಕ ಕಂಪನಿಗಳು ಭೇಟಿ ನೀಡಿದ್ದು, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಬ್​ ಆಫರ್ ನೀಡಿವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಸ್ಥೆಗಳು ಬರುವ ಸಾಧ್ಯತೆ ಇದೆ ಎಂದರು.

ಕಳೆದ ವರ್ಷ ನಮ್ಮ ಸಂಸ್ಥೆಯಿಂದ 8 ಸಾವಿರ ಹಾಗೂ ಅದರ ಹಿಂದಿನ ವರ್ಷ 7 ಸಾವಿರ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ, ಈ ವರ್ಷ 10 ಸಾವಿರದ ಗಡಿ ದಾಟಿದೆ ಎಂದು ಸತ್ಯನಾರಾಯಣ್ ತಿಳಿಸಿದರು. ಪ್ರಮುಖವಾಗಿ ಅಮೆಜಾನ್​, ಪೇಬಲ್​, ಗೂಗಲ್, ಮಾರ್ಗನ್, ಬಜಾಜ್​​ ಫಿನ್​ಸರ್ವ್, ಟೊಯೊಟಾ, ಜೆಪಿ ಮಾರ್ಗನ್, ಟಿಸಿಎಸ್​, ವಿಪ್ರೋ, ಹೋಂಡಾ, ಐಬಿಎಂ, ಹೀರೋ ಮೋಟೋ ಕಾರ್ಪ್​, ಜಾನ್ ಡೀರ್, ಪಿಲಿಪ್ಸ್​, ಬ್ಯಾಂಕ್​ ಆಫ್​ ಅಮೆರಿಕ, ವೋಡಾಫೋನ್, ಅಪೊಲೊ, ಹಿಟ್ಯಾಚ್​ ಸೇರಿದಂತೆ ಅನೇಕ ಕಂಪನಿಗಳು ಸಂದರ್ಶನ ಮಾಡಿ, ವಿದ್ಯಾರ್ಥಿಗಳಿಗೆ ಆಫರ್​ ನೀಡಿವೆ ಎಂದಿದ್ದಾರೆ.

Last Updated : May 19, 2022, 3:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.