ಹೈದ್ರಾಬಾದ್ : ಕೋವಿಡ್ ಹಾವಳಿಯಿಂದಾಗಿ ವೃದ್ಧರು, ಅಂಗವಿಕಲರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುವ ಭಕ್ತರಿಗೆ ನಿಲ್ಲಿಸಿದ್ದ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನವನ್ನು ಮರು ಆರಂಭಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮುಂದಾಗಿದೆ.
ಶೀಘ್ರವೇ ವೃದ್ಧರು, ಅಂಗವಿಕಲರು, ಕಾಯಿಲೆಗಳಿಂದ ಬಳಲುತ್ತಿರುವ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲು ಟಿಟಿಡಿ ತೀರ್ಮಾನಿಸಿದೆ. ಈ ಭಕ್ತರು ಟಿಟಿಡಿ ವೆಬ್‌ಸೈಟ್‌ನಲ್ಲಿ ಬಾರ್‌ಕೋಡ್ ಹೊಂದಿರುವ ಟೋಕನ್ ಪಡೆಯಬಹುದಾಗಿದೆ. ದಿನಕ್ಕೆ ಒಂದು ಸಾವಿರದಂತೆ ಟೋಕನ್ ನೀಡಲಾಗುವುದು ಎಂದು ಟಿಟಿಡಿ ಹೇಳಿದೆ.
ಅಲ್ಲದೇ, ಪ್ರತಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮತ್ತು ಪ್ರತಿ ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ಬೆಳಿಗ್ಗೆ 10 ಗಂಟೆಗೆ ಸ್ಲಾಟ್‌ನಲ್ಲಿ ಪ್ರತಿದಿನ ಒಂದು ಸಾವಿರ ಜನರಿಗೆ ದರ್ಶನಕ್ಕೆ ಅನುಮತಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಟೋಕನ್‌ಗಳನ್ನು ಆರಂಭಿಸುವ ಬಗ್ಗೆ ಟಿಟಿಡಿ ಶೀಘ್ರವೇ ಮಾಹಿತಿ ನೀಡಲಾಗುತ್ತದೆ ಎಂದೂ ತಿಳಿಸಿದೆ. ಕೋವಿಡ್ ಹಾವಳಿಯಿಂದಾಗಿ 2020ರ ಮಾರ್ಚ್ನಿಂದ ಈ ವಿಶೇಷ ದರ್ಶನವನ್ನು ನಿಲ್ಲಿಸಲಾಗಿತ್ತು.
ಇದನ್ನೂ ಓದಿ: ಮಧ್ಯಪ್ರದೇಶದ ವಿವಿಯಲ್ಲಿ ವಿದ್ಯಾರ್ಥಿನಿ ನಮಾಜ್: ತನಿಖಾ ಸಮಿತಿ ಮುಂದೆ ತಪ್ಪೊಪ್ಪಿಗೆ