ETV Bharat / bharat

ಪೊಲೀಸ್ ಬಸ್​ ಮೇಲೆ ಶ್ರೀನಗರ ಟೈಗರ್ಸ್ ದಾಳಿ: ಮೂರಕ್ಕೇರಿದ ಹುತಾತ್ಮರ ಸಂಖ್ಯೆ - ಶ್ರೀನಗರದ ಪಂಥಾ ಚೌಕ್​ನಲ್ಲಿ ಉಗ್ರರ ದಾಳಿ

ಜಮ್ಮು ಕಾಶ್ಮೀರದ ಪಂಥಾ ಚೌಕ್‌ನ ಝೆವಾನ್ ಪ್ರದೇಶದಲ್ಲಿ ಪೊಲೀಸ್ ಬಸ್​ ಮೇಲೆ ಉಗ್ರರ ದಾಳಿ ಪ್ರಕರಣದಲ್ಲಿ ಮತ್ತೊಬ್ಬ ಪೊಲೀಸ್ ಹುತಾತ್ಮರಾಗಿದ್ದು, ಒಟ್ಟು ಹುತಾತ್ಮರಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

Srinagar attack: One more cop succumbs to injuries, toll rises to three
ಪೊಲೀಸ್ ಬಸ್​ ಮೇಲೆ ಶ್ರೀನಗರ ಟೈಗರ್ಸ್ ದಾಳಿ: ಮೂರಕ್ಕೇರಿದ ಹುತಾತ್ಮರ ಸಂಖ್ಯೆ
author img

By

Published : Dec 14, 2021, 12:51 PM IST

ಶ್ರೀನಗರ(ಜಮ್ಮು ಕಾಶ್ಮೀರ): ಪೊಲೀಸ್ ಬಸ್ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ಪೊಲೀಸ್ ಮಂಗಳವಾರ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಮೂಲಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಒಟ್ಟು ಮೂರಕ್ಕೆ ಏರಿಕೆಯಾಗಿದೆ.

ಕಂಗನ್‌ ಪ್ರದೇಶದ ನಿವಾಸಿಯಾದ ಕಾನ್‌ಸ್ಟೇಬಲ್ ರಮೀಜ್ ಅಹ್ಮದ್ ಸೇನಾ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ. ದಾಳಿ ನಡೆದ ದಿನ ಎಎಸ್‌ಐ ಗುಲಾಮ್ ಹಸನ್ ಮತ್ತು ಹಿರಿಯ ಕಾನ್ಸ್‌ಟೇಬಲ್ ಶಫೀಕ್ ಅಲಿ ಹುತಾತ್ಮರಾಗಿದ್ದು, ಈಗ ರಮೀಜ್ ಅಹ್ಮದ್ ಕೂಡಾ ಮೃತಪಟ್ಟಿದ್ದಾರೆ.

ಶ್ರೀನಗರದ ಪಂಥಾ ಚೌಕ್‌ನ ಝೆವಾನ್ ಪ್ರದೇಶದಲ್ಲಿ ಸಶಸ್ತ್ರ ಮೀಸಲು ಪೊಲೀಸ್ (ಎಆರ್‌ಪಿ) 9ನೇ ಬೆಟಾಲಿಯನ್‌ನ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲೆ ಉಗ್ರರು ದಾಳಿ ನಡೆಸಿದ್ದರು. 11 ಮಂದಿ ಗಾಯಗೊಂಡು, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೈಷ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಅಡಿಯಲ್ಲಿ ಬರುವ ಕಾಶ್ಮೀರ ಟೈಗರ್ಸ್ ಈ ದಾಳಿ ನಡೆಸಿದೆ ಎಂದು ವಿಶ್ವಾಸಾರ್ಹ ಮೂಲಗಳು ಬಹಿರಂಗಪಡಿಸಿವೆ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.

ಪೊಲೀಸರೂ ಕೂಡಾ ದಾಳಿಯ ವೇಳೆ ಪ್ರತಿದಾಳಿ ನಡೆಸಿದ್ದು, ಒಬ್ಬ ಉಗ್ರ ಗಾಯಗೊಂಡಿದ್ದಾನೆ. ಹೊಸ ಉಗ್ರಗಾಮಿ ಸಂಘಟನೆ ಸಕ್ರಿಯವಾಗಿದೆ ಎಂದು ತಿಳಿದುಬಂದಿದ್ದು, ದಾಳಿಕೋರರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ ಎಂದು ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ದೀಪದ ಬೆಂಕಿ ತಗುಲಿ ಕಾಲೇಜು ವಿದ್ಯಾರ್ಥಿನಿ ಸಜೀವ ದಹನ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.