ETV Bharat / bharat

ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಭಾರತಕ್ಕೆ ಆಗಮನ: ದ್ವಿಪಕ್ಷೀಯ ಬಲವರ್ಧನೆಗೆ ಮಾತುಕತೆ - ಈಟಿವಿ ಭಾರತ ಕನ್ನಡ

ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಭಾರತಕ್ಕೆ ಭೇಟಿ ನೀಡಿದ್ದಾರೆ. ವಿಕ್ರಮಸಿಂಘೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಭಾರತೀಯ ಗಣ್ಯರೊಂದಿಗೆ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.

Sri Lankan President Ranil Wickremesinghe arrives in Delhi

author img

By

Published : Jul 20, 2023, 8:11 PM IST

ನವದೆಹಲಿ : ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಗುರುವಾರ ದೆಹಲಿಗೆ ಆಗಮಿಸಿದ್ದಾರೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (MoS) ವಿ ಮುರಳೀಧರನ್ ಅವರು ವಿಮಾನ ನಿಲ್ದಾಣದಲ್ಲಿ ವಿಕ್ರಮಸಿಂಘೆ ಅವರನ್ನು ಸ್ವಾಗತಿಸಿದರು. ಕಲಾವಿದರು ವಿಮಾನ ನಿಲ್ದಾಣದಲ್ಲಿ ಗರ್ಬಾ ನೃತ್ಯ ಪ್ರದರ್ಶಿಸಿ ಶ್ರೀಲಂಕಾ ಅಧ್ಯಕ್ಷರನ್ನು ಸ್ವಾಗತಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ವಿಕ್ರಮಸಿಂಘೆ ಅವರು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.

ವಿಕ್ರಮಸಿಂಘೆ ಅವರ ಭೇಟಿಯು ಭಾರತ ಮತ್ತು ಶ್ರೀಲಂಕಾ ನಡುವಿನ ಬಹು ದೀರ್ಘಕಾಲದ ಬಾಂಧವ್ಯ ಮತ್ತಷ್ಟು ಹೆಚ್ಚಿಸಲಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ವಿಕ್ರಮಸಿಂಘೆ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ತಮ್ಮ ಭೇಟಿಯ ಸಮಯದಲ್ಲಿ, ಅಧ್ಯಕ್ಷ ವಿಕ್ರಮಸಿಂಘೆ ಅವರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಭಾರತೀಯ ಗಣ್ಯರೊಂದಿಗೆ ಪರಸ್ಪರ ಹಿತಾಸಕ್ತಿಯ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

"ನೆರೆಹೊರೆಯವರು ಮೊದಲು ಎಂಬ ಭಾರತದ ನೀತಿ ಮತ್ತು ವಿಷನ್ ಸಾಗರ ಯೋಜನೆಯಲ್ಲಿ ಶ್ರೀಲಂಕಾ ಪ್ರಮುಖ ಪಾಲುದಾರನಾಗಿದೆ. ಈ ಭೇಟಿ ಉಭಯ ದೇಶಗಳ ನಡುವಿನ ದೀರ್ಘಕಾಲದ ಸ್ನೇಹವನ್ನು ಬಲಪಡಿಸುತ್ತದೆ ಮತ್ತು ವರ್ಧಿತ ಸಂಪರ್ಕ ಮತ್ತು ವಲಯಗಳಾದ್ಯಂತ ಪರಸ್ಪರ ಲಾಭದಾಯಕ ಸಹಕಾರಕ್ಕಾಗಿ ಮಾರ್ಗಗಳನ್ನು ಅನ್ವೇಷಿಸುತ್ತದೆ." ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ದ್ವೀಪ ರಾಷ್ಟ್ರ ಶ್ರೀಲಂಕಾವು ಕಳೆದ ವರ್ಷ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಅದರ ನಂತರ ಇದೇ ಪ್ರಥಮ ಬಾರಿಗೆ ಶ್ರೀಲಂಕಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. 2022 ರ ಜುಲೈನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ವಿಕ್ರಮಸಿಂಘೆ ಅವರ ಮೊದಲ ಭಾರತ ಪ್ರವಾಸ ಕೂಡ ಇದಾಗಿದೆ.

ಭಾರತವು ಕಳೆದ ವರ್ಷ ಶ್ರೀಲಂಕಾಕ್ಕೆ ಕರೆನ್ಸಿ ಬೆಂಬಲ, ಸಾಲಗಳ ಪಾವತಿಗೆ ಸಮಯ ಮತ್ತು ಆಹಾರ, ಇಂಧನ ಮತ್ತು ಔಷಧಗಳ ತುರ್ತು ಖರೀದಿಗಳಿಗೆ ಸಾಲಗಳನ್ನು ಒಳಗೊಂಡಂತೆ ಸುಮಾರು $4 ಶತಕೋಟಿ ಮೌಲ್ಯದ ಆರ್ಥಿಕ ಸಹಾಯವನ್ನು ಒದಗಿಸಿತ್ತು. ಇದರಿಂದಾಗಿ ಶ್ರೀಲಂಕಾ ತಾನು ಕಂಡ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಾಯಕವಾಗಿತ್ತು.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಜುಲೈ 11 ರಂದು ಶ್ರೀಲಂಕಾಕ್ಕೆ ತೆರಳಿದ್ದರು ಮತ್ತು ವಿಕ್ರಮಸಿಂಘೆ ಅವರ ಭೇಟಿಗೆ ತಯಾರಿ ನಡೆಸಲು ಅವರ ತಮ್ಮ ಸಹವರ್ತಿ ಅರುಣಿ ವಿಜೆವರ್ಧನೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ಎರಡೂ ದೇಶಗಳು ತಮ್ಮ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ.

ಇದನ್ನೂ ಓದಿ : Sensex 67,571 - Nifty 19,979: ಷೇರು ಮಾರುಕಟ್ಟೆ ಹೊಸ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.