ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಗೂ ಕೊರೊನಾ ವೈರಸ್ ಕರಿಛಾಯೆ ಬಿದ್ದಿದ್ದು, ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿ ಜುಲೈ 13ರ ಬದಲಾಗಿ ಜುಲೈ 17ರಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಪ್ರವಾಸ ಮುಗಿಸಿ ಶ್ರೀಲಂಕಾ ತಂಡ ನಿನ್ನೆ ತವರಿಗೆ ವಾಪಸ್ ಆಗಿದೆ. ಈ ವೇಳೆ ತಂಡದ ಬ್ಯಾಟಿಂಗ್ ಕೋಚ್ ಸೇರಿ ಇಬ್ಬರಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಹೀಗಾಗಿ ಸಂಪೂರ್ಣ ತಂಡ ಕ್ವಾರಂಟೈನ್ಗೊಳಗಾಗಿದೆ. ಮುಂದಿನ ಕೆಲ ದಿನಗಳ ಕಾಲ ಎಲ್ಲರೂ ಕ್ವಾರಂಟೈನ್ನಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬೇರೆ ದಾರಿ ಇಲ್ಲದೇ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿ ಮುಂದೂಡಿಕೆ ಮಾಡಲು ಚಿಂತನೆ ನಡೆದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿರಿ: ಅಣ್ಣನ ಹಾದಿಯಲ್ಲೇ ತಂಗಿಯ ಹೆಜ್ಜೆ... ಹೊಸ ಪಕ್ಷ ಸ್ಥಾಪಿಸಿದ ಜಗನ್ ಸಹೋದರಿ
ಲಭ್ಯವಾಗಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ 'ಬಿ' ತಂಡ ಮೈದಾನಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ. ಆದರೆ ಆ ತಂಡದಲ್ಲಿ ಯಾವುದೇ ಪ್ರಮುಖ ಪ್ಲೇಯರ್ಸ್ ಇಲ್ಲದ ಕಾರಣ ಸರಣಿ ಕೆಲವು ದಿನಗಳ ಕಾಲ ಮುಂದೂಡಿಕೆ ಮಾಡಿ, ಇಂಗ್ಲೆಂಡ್ ಪ್ರವಾಸದಲ್ಲಿದ್ದ ತಂಡದಿಂದಲೇ ಕ್ರಿಕೆಟ್ ಆಡಿಸಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅಲ್ಲಿನ ಕ್ರಿಕೆಟ್ ಮಂಡಳಿ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದರೆ ನಾಳೆ ಸಂಜೆಯ ವೇಳೆಗೆ ಮಹತ್ವದ ನಿರ್ಧಾರ ಬರುವುದು ಸ್ಪಷ್ಟವಾಗಿದೆ.
ಭಾರತ-ಶ್ರೀಲಂಕಾ ಮಧ್ಯೆ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ಕೊಲಂಬೊ ಮೈದಾನದಲ್ಲಿ ನಡೆಯಲಿದ್ದು, ಈಗಾಗಲೇ ಟೀಂ ಇಂಡಿಯಾ ಅಭ್ಯಾಸದಲ್ಲಿ ನಿರಂತವಾಗಿದೆ.