ಕೊಚ್ಚಿ (ಕೇರಳ): ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವು ಶುಕ್ರವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ಈ ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 197 ಪ್ರಯಾಣಿಕರಿದ್ದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಜೆಡ್ಡಾದಿಂದ (ಸೌದಿ ಅರೇಬಿಯಾ) ಕೋಯಿಕ್ಕೋಡ್‌ಗೆ ಸ್ಪೈಸ್ ಜೆಟ್ ಎಸ್‌ಜಿ 036 ವಿಮಾನವು ಹೊರಟಿತ್ತು. ಆದರೆ, ಹೈಡ್ರಾಲಿಕ್ ವೈಫಲ್ಯದ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಈ ವಿಮಾನವನ್ನು ಕೊಚ್ಚಿಗೆ ತಿರುಗಿಸಿದ ನಂತರ ಸಂಜೆ 6.29ಕ್ಕೆ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ತುರ್ತು ಲ್ಯಾಂಡಿಂಗ್ ಪರಿಸ್ಥಿತಿಯ ನಂತರ ವಿಮಾನವು ರನ್‌ವೇಯಲ್ಲಿ 7.19ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಮುಂಬೈ ನಿಲ್ದಾಣಕ್ಕೆ ಬಂದ ತಿಮಿಂಗಿಲ ವಿಮಾನ.. ನೋಡಿದವರಿಗೆ ಅಚ್ಚರಿಯೋ ಅಚ್ಚರಿ!