ETV Bharat / bharat

ಮತ್ತೆ ಸ್ಪೈಸ್​ಜೆಟ್​ ವಿಮಾನದಲ್ಲಿ ತಾಂತ್ರಿಕ ದೋಷ.. 24 ದಿನದಲ್ಲಿ 9ನೇ ಅಚಾತುರ್ಯ - ಸ್ಪೈಸ್​ಜೆಟ್​ ವಿಮಾನ ದೋಷ ಮುಂದುವರಿಕೆ

ಸ್ಪೈಸ್​ಜೆಟ್​ ವಿಮಾನಗಳಲ್ಲಿ ತಾಂತ್ರಿಕ ದೋಷ ಉಂಟಾಗುತ್ತಿರುವ ಘಟನೆಗಳು ಇನ್ನೂ ನಿಂತಿಲ್ಲ. ಇಂದೂ ಕೂಡ ದುಬೈ- ಮಧುರೈ ಮಧ್ಯೆ ಸಂಚರಿಸಬೇಕಿದ್ದ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ.

ಮತ್ತೆ ಸ್ಪೈಸ್​ಜೆಟ್​ ವಿಮಾನದಲ್ಲಿ ತಾಂತ್ರಿಕ ದೋಷ

author img

By

Published : Jul 12, 2022, 4:53 PM IST

ನವದೆಹಲಿ: ದೇಶದ ದೊಡ್ಡ ವಿಮಾನ ಸಂಸ್ಥೆಗಳಲ್ಲಿ ಒಂದಾದ ಸ್ಪೈಸ್​ಜೆಟ್​ ಏರ್​ಲೈನ್ಸ್​ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷ ಉಂಟಾಗಿ ಭಾರೀ ಟೀಕೆಗೆ ಗುರಿಯಾಗಿದೆ. ಇಂದು ಕೂಡ ದುಬೈನಿಂದ ಮಧುರೈಗೆ ತೆರಳಬೇಕಿದ್ದ ಬೋಯಿಂಗ್ ಬಿ737 ಮ್ಯಾಕ್ಸ್ ವಿಮಾನದ ಮುಂದಿನ ಚಕ್ರದಲ್ಲಿ ದೋಷ ಕಂಡು ಬಂದಿದ್ದು, ತಡವಾಗಿ ಹಾರಾಟ ನಡೆಸಿದೆ. ಇದು 24 ದಿನಗಳಲ್ಲಿ 9ನೇ ಘಟನೆಯಾಗಿದೆ.

ದುಬೈನಿಂದ ಮಧುರೈ ಮಾರ್ಗವಾಗಿ ಹಾರಾಟ ನಡೆಸಬೇಕಿದ್ದ ವಿಮಾನವನ್ನು ಇಂಜಿನಿಯರ್​ ಪರಿಶೀಲನೆ ನಡೆಸಿದ ವೇಳೆ ಮುಂದಿನ ಭಾಗದ ಚಕ್ರ ಸಹಜತೆಗಿಂತಲೂ ಸ್ಪಲ್ಪ ಕುಗ್ಗಿದಂತೆ ಕಂಡು ಬಂದಿದೆ. ಇದರಿಂದ ವಿಮಾನದ ಹಾರಾಟಕ್ಕೆ ತಡೆ ನೀಡಿ, ಬಳಿಕ ಮುಂಬೈನಿಂದ- ಮಧುರೈಗೆ ವಿಮಾನದ ವ್ಯವಸ್ಥೆ ಮಾಡಲಾಗಿದೆ.

ದುಬೈನಿಂದ ಮಧುರೈಗೆ ಹಾರಬೇಕಿದ್ದ ವಿಮಾನದಲ್ಲಿ ಕೊನೆ ಕ್ಷಣದ ತಾಂತ್ರಿಕ ದೋಷ ಉಂಟಾದ ಕಾರಣ, ವಿಮಾನ ಪ್ರಯಾಣ ವಿಳಂಬವಾಗಿದೆ. ತಕ್ಷಣವೇ ಮುಂಬೈನಿಂದ ವಿಮಾನ ಕಾರ್ಯಾಚರಣೆ ನಡೆಸಿದೆ. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ವಿಮಾನದ ಸುರಕ್ಷತೆ ಬಗ್ಗೆ ಭಯ ಬೇಡ ಎಂದು ಸಂಸ್ಥೆ ಸ್ಪಷ್ಟೀಕರಣ ನೀಡಿದೆ.

ಕಳೆದ ಕೆಲ ದಿನಗಳಿಂದ ವಿಮಾನಗಳಲ್ಲಿ ಪದೇ ಪದೆ ತಾಂತ್ರಿಕ ದೋಷಗಳು ಸಂಭವಿಸುತ್ತಿರುವ ಕಾರಣ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಸ್ಪೈಸ್‌ಜೆಟ್‌ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು.

ಓದಿ: ದೇಶದ 60 ಸ್ಟಾರ್ಟ್​​​ಅಪ್​ಗಳ ಜೊತೆ ಇಸ್ರೋ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದಲ್ಲಿ ದೊರೆಯಲಿದೆ ವಿಪುಲ ಅವಕಾಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.