ನವದೆಹಲಿ : ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಗಳು "ದುರದೃಷ್ಟಕರ", ಕೆಲವು "ಊಹಾಪೋಹಗಳು" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅಸಮಾಧಾನ ಹೊರ ಹಾಕಿದ್ದಾರೆ.
ನಿವೃತ್ತರಾಗುತ್ತಿರುವ ನ್ಯಾಯಮೂರ್ತಿ ನವೀನ್ ಸಿನ್ಹಾ ಅವರನ್ನು ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡುತ್ತಾ, ನ್ಯಾಯಾಧೀಶರ ನೇಮಕಾತಿಯ ಪ್ರಕ್ರಿಯೆಯು ಪವಿತ್ರವಾಗಿದೆ ಮತ್ತು ಅದಕ್ಕೆ ತನ್ನದೇ ಘನತೆ ಇದೆ. ಮಾಧ್ಯಮಗಳು ಅದರ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು ಎಂದರು.
''ಈ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಿಸುವ ಅಗತ್ಯವಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಪ್ರಕ್ರಿಯೆ ನಡೆಯುತ್ತಿದೆ. ಸಭೆಗಳು ನಡೆಯುತ್ತವೆ ಮತ್ತು ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ. ನ್ಯಾಯಾಧೀಶರ ನೇಮಕಾತಿಯ ಪ್ರಕ್ರಿಯೆಯು ಪವಿತ್ರವಾದುದು ಮತ್ತು ಅದಕ್ಕೆ ಕೆಲವು ಘನತೆ ಇದೆ. ನನ್ನ ಮಾಧ್ಯಮ ಸ್ನೇಹಿತರು ಈ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಗುರುತಿಸಬೇಕು "ಎಂದು ಅವರು ಹೇಳಿದರು.
ಸಿಜೆಐ ಸಂಸ್ಥೆಯಾಗಿ, ಸುಪ್ರೀಂಕೋರ್ಟ್ ಮಾಧ್ಯಮ ಸ್ವಾತಂತ್ರ್ಯ ಮತ್ತು ವ್ಯಕ್ತಿಗಳ ಹಕ್ಕುಗಳನ್ನು ಗೌರವಿಸುತ್ತದೆ ಮತ್ತು ಪ್ರಕ್ರಿಯೆಯು ಬಾಕಿ ಇದೆ, "ಇಂತಹ ಬೇಜವಾಬ್ದಾರಿಯುತ ವರದಿ ಮತ್ತು ಊಹಾಪೋಹಗಳಿಂದಾಗಿ ಉಜ್ವಲ ಪ್ರತಿಭೆಗಳ ವೃತ್ತಿ ಪ್ರತಿಭೆ, ಬೆಳವಣಿಗೆಗೆ ಹಾನಿಯಾಗುತ್ತದೆ ಎಂದು ಸಿಜೆಐ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ದುರದೃಷ್ಟಕರ ಮತ್ತು ನಾನು ಅದರ ಬಗ್ಗೆ ತುಂಬಾ ಅಸಮಾಧಾನ ಹೊಂದಿದ್ದೇನೆ" ಎಂದು ಎನ್ ವಿ ರಮಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ವೃತ್ತಿಪರ ಪತ್ರಕರ್ತರು ಮತ್ತು ನೈತಿಕ ಮಾಧ್ಯಮಗಳು ನಿರ್ದಿಷ್ಟವಾಗಿ ಸುಪ್ರೀಂಕೋರ್ಟ್‌ನ ನಿಜವಾದ ಶಕ್ತಿ. ನೀವು ನಮ್ಮ ವ್ಯವಸ್ಥೆಯ ಭಾಗವಾಗಿದ್ದೀರಿ. ಎಲ್ಲಾ ಪಾಲುದಾರರು ಈ ಸಂಸ್ಥೆಯ ಸಮಗ್ರತೆ ಮತ್ತು ಘನತೆಯನ್ನು ಎತ್ತಿಹಿಡಿಯಬೇಕೆಂದು ನಾನು ನಿರೀಕ್ಷಿಸುತ್ತೇನೆ" ಎಂದು ಅವರು ಹೇಳಿದರು.