ETV Bharat / bharat

ವಿಶೇಷ ಅಧಿವೇಶನ: ಮೊದಲ ದಿನ ಸಂಸತ್ತಿನ 75 ವರ್ಷಗಳ ಪ್ರಯಾಣದ ಕುರಿತು ಚರ್ಚೆ - ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ

ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ 75 ವರ್ಷಗಳ ಸಂಸತ್ತಿನ ಪ್ರಯಾಣದ ಕುರಿತು ಕೇಂದ್ರ ಸರ್ಕಾರವು ವಿಶೇಷ ಚರ್ಚೆ ನಡೆಸಲು ಮುಂದಾಗಿದೆ.

Parliament
ವಿಶೇಷ ಅಧಿವೇಶನ
author img

By PTI

Published : Sep 14, 2023, 7:13 AM IST

ನವದೆಹಲಿ : ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗುವ ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನಸಭಾದಿಂದ ಸಂಸತ್‌ವರೆಗಿನ 75 ವರ್ಷಗಳ ಸುದೀರ್ಘ ಸಂಸದೀಯ ಹಾದಿಯಲ್ಲಿನ ಸಾಧನೆ, ಅನುಭವ, ನೆನಪು ಮತ್ತು ಕಲಿಕೆಗಳ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.

  • 18 सितम्बर से शुरू हो रहा है संसद का सत्र।

    सत्र के पहले दिन संविधान सभा से शुरू हुई 75 वर्षों की संसदीय यात्रा की उपलब्धियों, अनुभवों और इससे मिली सीख पर चर्चा की जाएगी। #LokSabha #RajyaSabha pic.twitter.com/fW31L3bQRY

    — SansadTV (@sansad_tv) September 13, 2023 " class="align-text-top noRightClick twitterSection" data=" ">

ಸ್ವಾತಂತ್ರ್ಯದ ಅಮೃತ ಕಾಲಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಅಧಿವೇಶನಕ್ಕೆ ಒಂದು ದಿನ ಮುನ್ನ (ಸೆ.17) ಹೊಸ ಸಂಸತ್ ಭವನದ ಮೇಲೆ ದೇಶದ ತ್ರಿವರ್ಣ ಧ್ವಜ ಹಾರಿಸಲಾಗುವುದು. ಈ ಸಂದರ್ಭದಲ್ಲಿ ಪ್ರಧಾನಿ ಉಪಸ್ಥಿತರಿರುವರು. ಸರ್ಕಾರ ಸೆಪ್ಟೆಂಬರ್ 18 ರಿಂದ 22 ರವರೆಗೆ ವಿಶೇಷ ಅಧಿವೇಶನ ಕರೆದಿದೆ. ಸೆಪ್ಟೆಂಬರ್ 17 ವಿಶ್ವಕರ್ಮ ಪೂಜೆಯ ಶುಭದಿನವಾಗಿದ್ದು, ನರೇಂದ್ರ ಮೋದಿಯವರ ಜನ್ಮದಿನವೂ ಹೌದು.

ಸೆಪ್ಟೆಂಬರ್ 17 ರಂದು ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೊಸ ಸಂಸತ್ತಿನ ಮುಂಭಾಗದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಕೂಡ ಉಪಸ್ಥಿತರಿರುವರು. ಅಧಿವೇಶನದ ಮೊದಲ ದಿನ ಉಭಯ ಸದನಗಳ ಕಲಾಪಗಳು ಹಳೆಯ ಸಂಸತ್ತಿನ ಕಟ್ಟಡದಲ್ಲಿ ಮೊದಲಿನಂತೆಯೇ ನಡೆಯಲಿದೆ. ನೂತನ ಕಟ್ಟಡದಲ್ಲಿ ಎರಡನೇ ದಿನದಿಂದ ಕಲಾಪ ಪ್ರಾರಂಭವಾಗುತ್ತದೆ. ಅಂದರೆ, ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪೂಜೆ ಸಲ್ಲಿಸಿದ ಬಳಿಕ ಎರಡೂ ಸದನಗಳ ಕಲಾಪಗಳನ್ನು ಹೊಸ ಕಟ್ಟಡದಲ್ಲಿ ನಡೆಸಲಾಗುತ್ತದೆ.

ಲೋಕಸಭೆ ಕಲಾಪದಲ್ಲಿ 'ವಕೀಲರ (ತಿದ್ದುಪಡಿ) ಮಸೂದೆ 2023' ಮತ್ತು 'ನಿಯತಕಾಲಿಕಗಳ ಮುದ್ರಣ ಮತ್ತು ನೋಂದಣಿ ಮಸೂದೆ 2023' ಮಂಡಿಸಿ ಅಂಗೀಕಾರ ಪಡೆಯಲು ಕೇಂದ್ರ ಮುಂದಾಗಿದೆ. ಇದನ್ನು ಈಗಾಗಲೇ ರಾಜ್ಯಸಭೆಯಲ್ಲಿ ಆಗಸ್ಟ್ 3, 2023 ರಂದು ಅಂಗೀಕರಿಸಲಾಗಿದೆ. ಹಾಗೆಯೇ, 'ಪೋಸ್ಟ್ ಆಫೀಸ್ ಬಿಲ್ 2023' ಅನ್ನು ಸಹ ಲೋಕಸಭೆಯಲ್ಲಿ ಮಂಡಿಸಲಾಗುವುದು. ಈ ಮಸೂದೆಯನ್ನು 10 ಆಗಸ್ಟ್ 2023 ರಂದು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.

ಐದು ದಿನಗಳ ಅಧಿವೇಶನ ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ (ಸೆಪ್ಟೆಂಬರ್ 17 ರಂದು) ಸರ್ಕಾರವು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಈ ಬಗ್ಗೆ ಎಕ್ಸ್​ ಆ್ಯಪ್​ನಲ್ಲಿ ಮಾಹಿತಿ ಹಂಚಿಕೊಂಡ ಅವರು, 'ಸಭೆಯ ಆಹ್ವಾನವನ್ನು ಇ-ಮೇಲ್ ಮೂಲಕ ಸಂಬಂಧಪಟ್ಟ ಎಲ್ಲಾ ನಾಯಕರಿಗೆ ಕಳುಹಿಸಲಾಗಿದೆ. ಅಮೃತಕಾಲದ ಮಧ್ಯೆ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳನ್ನು ನಡೆಸಲು ಎದುರು ನೋಡುತ್ತಿದ್ದೇವೆ' ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಸಂಸತ್ತಿನ ವಿಶೇಷ ಅಧಿವೇಶನದ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ವಿಶೇಷ ಅಧಿವೇಶನದ ಅಜೆಂಡಾ ಏನು? ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಮೋದಿ ಸರ್ಕಾರ ಯಾವ ಉದ್ದೇಶಕ್ಕಾಗಿ ಈ ಅಧಿವೇಶನವನ್ನು ಕರೆದಿದೆ?, ನವೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದವರೆಗೆ ಕಾಯಬಹುದಿತ್ತು ಎಂದು ಹೇಳುತ್ತಿವೆ.

ಇದನ್ನೂ ಓದಿ : ಲೋಕಸಭೆ ಅಧಿವೇಶನದ ನಂತರ ರಾಜ್ಯಾಧ್ಯಕ್ಷ ಪ್ರತಿಪಕ್ಷ ನಾಯಕರ ಆಯ್ಕೆ: ಮಾಜಿ ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.