ಡೆಹ್ರಾಡೂನ್: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ನಿನ್ನೆ ಡೆಹ್ರಾಡೂನ್ ತಲುಪಿದ್ದಾರೆ. ಈ ವೇಳೆ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ತೇಜಸ್ವಿ ಸೂರ್ಯರನ್ನು ಸ್ವಾಗತಿಸಲು ಜಾಲಿ ಗ್ರಾಂಟ್‌ನಿಂದ ಬಿಜಾಪುರ ಅತಿಥಿ ಗೃಹದವರೆಗೆ ರೋಡ್ ಶೋ ನಡೆಸಲಾಯಿತು. ಈ ವೇಳೆ ಯುವಶಕ್ತಿಯ ದಂಡು ಬೀದಿಗಿಳಿದಿತ್ತು.
ಈ ವೇಳೆ ತೇಜಸ್ವಿ ಸೂರ್ಯ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಉತ್ತರಾಖಂಡದ ಆಡಳಿತ ಯುವ ಮುಖ್ಯಮಂತ್ರಿಯ ಕೈನಲ್ಲಿದೆ ಎಂದು ಹೇಳಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಯುವಕರು ಖಂಡಿತವಾಗಿಯೂ ಇತಿಹಾಸ ಸೃಷ್ಟಿಸಲಿದ್ದಾರೆ ಎಂದರು.
ತೇಜಸ್ವಿ ಸೂರ್ಯ ಮುಂದಿನ 2 ದಿನಗಳ ಕಾಲ ಉತ್ತರಾಖಂಡದಲ್ಲಿ ಇರಲಿದ್ದಾರೆ. ಈ ವೇಳೆ ಮುಂಬರುವ ಚುನಾವಣಾ ಕಾರ್ಯತಂತ್ರದ ಕುರಿತು ಯುವಕರೊಂದಿಗೆ ಚರ್ಚಿಸಲಿದ್ದಾರೆ. ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರ ಸ್ವಾಗತ ಕಾರ್ಯಕ್ರಮದ ನಂತರ ವಿವಿಧ ಸ್ಥಳಗಳಲ್ಲಿ ತೇಜಸ್ವಿ ಸೂರ್ಯ ಸಭೆ ನಡೆಸಲು ನಿನ್ನೆ ಮಧ್ಯಾಹ್ನ ಡೆಹ್ರಾಡೂನ್ಗೆ ತಲುಪಿದರು.
ಓದಿ: ಆಗಸದಲ್ಲಿ ನಕ್ಷತ್ರದಂತೆ ಗೋಚರಿಸಿದ ಬೆಳಕಿನ ಸರ... ವಿಜ್ಞಾನಿಗಳು ಹೇಳಿದ್ದು ಹೀಗೆ
ತೇಜಸ್ವಿ ಸೂರ್ಯ ಡಿಸೆಂಬರ್ 21 ರಂದು ಬೆಳಿಗ್ಗೆ 7 ಗಂಟೆಗೆ ತಪಕೇಶ್ವರ ಮಹಾದೇವ್ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ದರ್ಶನದ ನಂತರ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯಲ್ಲಿ ಮುಖ್ಯಮಂತ್ರಿ 11 ಮತ್ತು ಯುವ ಮೋರ್ಚಾ 11 ರ ನಡುವೆ ನಡೆಯುತ್ತಿರುವ ಪಂದ್ಯದ ಆಟಗಾರರನ್ನು ಗೌರವಿಸುತ್ತಾರೆ. ಇದರೊಂದಿಗೆ ಪಂದ್ಯದಲ್ಲೂ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ 11:30ಕ್ಕೆ ತೇಜಸ್ವಿ ಸೂರ್ಯ ಡೆಹ್ರಾಡೂನ್‌ನಲ್ಲಿ ಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಶ್ರೀನಗರದಲ್ಲಿ ಆಯೋಜಿಸಿರುವ ಯುವ ಸಂವಾದ ಕಾರ್ಯಕ್ರಮದಲ್ಲಿ ಯುವಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸೂರ್ಯ ಭನಿಯಾವಾಲಾದಲ್ಲಿ ಆಯೋಜಿಸಿರುವ ಸದಸ್ಯತ್ವ ಕಾರ್ಯಕ್ರಮದಲ್ಲಿ ತೇಜಸ್ವಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಸಂಜೆ 5 ಗಂಟೆಗೆ ರಿಷಿಕೇಶದಲ್ಲಿ ಗಂಗಾ ಆರತಿಯಲ್ಲಿ ಭಾಗವಹಿಸಲಿದ್ದಾರೆ.