ETV Bharat / bharat

Southern Railway Recruitment: 790 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; ಆ. 30 ರೊಳಗೆ ಅರ್ಜಿ ಹಾಕಿ

ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ.

Southern Railway Recruitment In Karnataka andra Pradesh kerala

author img

By

Published : Aug 2, 2023, 5:11 PM IST

ದಕ್ಷಿಣ ರೈಲ್ವೆ ಇಲಾಖೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಲೊಕೋ ಪೈಲಟ್​, ಟೆಕ್ನಿಶಿಯನ್​ ಪೋಸ್ಟ್​​, ಜ್ಯೂನಿಯರ್​ ಇಂಜಿನಿಯರ್​, ಟ್ರೈನಿ ಮ್ಯಾನೇಜರ್​ ಸೇರಿದಂತೆ ಒಟ್ಟು 790 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನ ರಾಜ್ಯದಲ್ಲಿ ಈ ಹುದ್ದೆ ನೇಮಕಾತಿ ನಡೆಯಲಿದೆ. 10ನೇ ತರಗತಿ ಮತ್ತು ಐಟಿಐ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಹುದ್ದೆ ವಿವರ: ಅಸಿಸ್ಟೆಂಟ್​ ಲೋಕೋ ಪೈಲಟ್ 234​, ಟೆಕ್ನಿಶಿಯನ್​ನಲ್ಲಿ , ಟ್ರೈನಿ ಮ್ಯಾನೇಜರ್​ನಲ್ಲಿ 27, ಜ್ಯೂನಿಯರ್​ ಇಂಜಿನಿಯರ್​- 168, ಟೆಕ್ನಿಷಿಯನ್​- 361 ಹುದ್ದೆಗಳು ಸೇರಿದಂತೆ ಒಟ್ಟು 709 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ಅಧಿಸೂಚನೆ
ಅಧಿಸೂಚನೆ

ವಿದ್ಯಾರ್ಹತೆ: ಅಸಿಸ್ಟೆಂಟ್​ ಲೋಕೋ ಪೈಲಟ್ ಮತ್ತು ಟೆಕ್ನಿಶಿಯನ್​ ಹುದ್ದೆಗೆ ಎಸ್​ಎಸ್​ಎಲ್​ಸಿ ಮತ್ತು ಐಟಿಐ ಪದವಿ, ಜ್ಯೂನಿಯರ್​ ಇಂಜಿನಿಯರ್​ ಹುದ್ದೆಗೆ ಡಿಪ್ಲೊಮಾ ಪದವಿ, ಟೆಕ್ನಿಶಿಯನ್​ ಹುದ್ದೆಗೆ ಪದವಿಯನ್ನು ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 42 ವರ್ಷ ಆಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.rrcmas.in ಈ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬೇಕು

ಅಭ್ಯರ್ಥಿಗಳು ಮೇಲಿನ ಲಿಂಕ್​ನಲ್ಲಿ ಆನ್​ಲೈನ್​ ಅಪ್ಲಿಕೇಷನ್​ನಲ್ಲಿ ವೈಯಕ್ತಿಕ ಮಾಹಿತಿ ಮತ್ತು ಬಯೋಡೇಟಾವನ್ನು ಎಚ್ಚರಿಕೆಯಿಂದ ಭರಿಸಬೇಕು

ಜೊತೆಗೆ ಅಭ್ಯರ್ಥಿಗಳು ಜನ್ಮ ದಿನದ ದಾಖಲಾತಿ ಸೇರಿದಂತೆ ಶೈಕ್ಷಣಿಕ ಅರ್ಹತೆ ಮತ್ತು ಸೇವಾ ಅನುಭವವನ್ನು ಭರಿಸಬೇಕು.

ಮೂರು ತಿಂಗಳಿಗಿಂತ ಹಳೆಯದಲ್ಲದ ಪಾಸ್​ಪೋರ್ಟ್​​ ಫೋಟೋ, ಸಹಿ ಮತ್ತು ಸ್ವಯಂ ದೃಢೀಕೃತ ಶೈಕ್ಷಣಿಕ ದಾಖಲಾಗಿ, ಜಾತಿ ಪ್ರಮಾಣ ಪತ್ರಗಳನ್ಜು ಭರ್ತಿ ಮಾಡಬೇಕು.

ಆಯ್ಕೆ: ಈ ಹುದ್ದೆಗೆ ಅಭ್ಯರ್ಥಿಗಳು ಕಂಪ್ಯೂಟರ್​ ಆಧಾರಿತ ಪರೀಕ್ಷೆ, ಬಹು ಆಯ್ಕೆ ಮಾದರಿ ಪರೀಕ್ಷೆ, ದಾಖಲಾತಿ ಪರಿಶೀಲನೆ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಅಂತಿಮವಾಗಿ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ ಜುಲೈ 30ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 30 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ಜಾಲತಾಣವಾದ rrcmas.in ಇಲ್ಲಿಗೆ ಭೇಟಿ ನೀಡಬಹುದು.

ವಿಶೇಷ ಸೂಚನೆ: ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ಎದುರಾಗುವ ಪ್ರಶ್ನೆ ಅಥವಾ ಇನ್ನಿತರ ಮಾಹಿತಿ ಕುರಿತು rrcchennaimas@gmail.com. ಈ ಇ ಮೇಲ್​​ ವಿಳಾಸಕ್ಕೆ ತಿಳಿಸಬಹುದು ಅಥವಾ 044-28213185 ಈ ನಂಬರ್​ಗೆ ಆರ್​ಆರ್​ಸಿಯ ಕೆಲಸದ ದಿನದಲ್ಲಿ ಬೆಳಗ್ಗೆ 10ರಿಂದ ಸಂಜೆ 5ಗಂಟೆ ಒಳಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Job Alert: ಐಟಿಪಿಬಿಯಲ್ಲಿ ಕಾನ್​ಸ್ಟೆಬಲ್ ಹುದ್ದೆ; ಎಸ್​ಎಸ್​ಎಲ್​ಸಿ ಓದಿದ್ರೆ ಸಾಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.