ETV Bharat / bharat

ಲಷ್ಕರ್‌-ಇ-ತೈಬಾದ ಕಮಾಂಡರ್‌ ಸೇರಿ ಮೂವರು ಉಗ್ರರ ಹೊಡೆದುರುಳಿಸಿದ ಸೇನೆ

author img

By

Published : Jun 21, 2021, 7:12 AM IST

ಮೂವರು ಪೊಲೀಸರು, ಇಬ್ಬರು ಪುರಸಭೆ ಕೌನ್ಸಿಲರ್‌ಗಳು ಮತ್ತು ಇಬ್ಬರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್-ಇ-ತೈಬಾ ಸಂಘಟನೆಯ ಉನ್ನತ ಕಮಾಂಡರ್ ಸೇರಿ ಮೂವರು ಉಗ್ರರನ್ನು ಬಾರಾಮುಲ್ಲಾ ಜಿಲ್ಲೆಯ ಸೊಪೋರ್​​ನಲ್ಲಿ ಭದ್ರತಾ ಪಡೆ ಸದೆಬಡಿದಿದೆ.

Sopore encounter
ಉನ್ನತ ಕಮಾಂಡರ್ ಸೇರಿ ಲಷ್ಕರ್-ಇ-ತೈಬಾದ ಮೂವರು ಉಗ್ರರ ಸದೆಬಡಿದ ಭದ್ರತಾ ಪಡೆ

ಸೊಪೋರ್: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್​​ನಲ್ಲಿ ಲಷ್ಕರ್-ಇ-ತೈಬಾ ಉಗ್ರವಾದಿ ಸಂಘಟನೆಯ ಮೂವರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಮೃತಪಟ್ಟ ಭಯೋತ್ಪಾದಕರ ಪೈಕಿ ಉನ್ನತ ಕಮಾಂಡರ್ ಕೂಡ ಇದ್ದಾನೆ ಎಂದು ಕಾಶ್ಮೀರದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ತಿಳಿಸಿದ್ದಾರೆ.

ಮುದಾಸಿರ್​ ಪಂಡಿತ್​ - ಹತೈಯಾದ ಲಷ್ಕರ್-ಇ-ತೈಬಾದ ಉನ್ನತ ಕಮಾಂಡರ್ ಆಗಿದ್ದು, ಈತನ ನೇತೃತ್ವದಲ್ಲಿ ಮಾರ್ಚ್​ 29ರಂದು ಸೊಪೋರ್​​ನಲ್ಲಿ ಪ್ರದೇಶದ ಬಿಡಿಸಿ (ಬ್ಲಾಕ್​ ಡೆವಲಪ್ಮೆಂಟ್​ ಕೌನ್ಸಿಲ್​) ಅಧ್ಯಕ್ಷೆ ಫರೀದಾ ಖಾನ್ ಅವರನ್ನು ಗುರಿಯಾಗಿಸಿ ಪುರಸಭೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಮೂವರು ಪೊಲೀಸರು, ಇಬ್ಬರು ಪುರಸಭೆ ಕೌನ್ಸಿಲರ್‌ಗಳು ಮತ್ತು ಇಬ್ಬರು ನಾಗರಿಕರನ್ನು ನಿರ್ದಾಕ್ಷಿಣ್ಯವಾಗಿ ಗುಂಡಿಕ್ಕಿ ಕೊಲ್ಲಲಾಗಿತ್ತು.

ಇದನ್ನೂ ಓದಿ: ಕಲಬುರಗಿಯಲ್ಲಿ ಭೀಕರ ಕೊಲೆ.. ಕೈಕಟ್ಟಿ, ಪೆಟ್ರೋಲ್ ಸುರಿದು ವಿದ್ಯಾರ್ಥಿಯ ಬರ್ಬರ ಹತ್ಯೆ!

ಅಂದಿನಿಂದ ಈತನಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಎನ್​ಕೌಂಟರ್​ನಲ್ಲಿ ಮುದಾಸಿರ್​ ಪಂಡಿತ್ ಸೇರಿ ಮೂವರು ಭಯೋತ್ಪಾದಕರನ್ನು ಹತೈಗೈದಿದ್ದಾರೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.