ETV Bharat / bharat

ಪಂಜಾಬ್ ಚುನಾವಣಾ ಕಣಕ್ಕಿಳಿಯಲಿದ್ದಾರೆ ಸೋನು ಸೂದ್ ಸಹೋದರಿ

ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ (Punjab Assembly polls -2022)ಯಲ್ಲಿ ತನ್ನ ಸಹೋದರಿ ಮಾಳವಿಕಾ ಸ್ಪರ್ಧಿಸುವುದಾಗಿ ನಟ ಸೋನು ಸೂದ್ ತಿಳಿಸಿದ್ದಾರೆ.

ಪಂಜಾಬ್ ಚುನಾವಣಾ ಕಣಕ್ಕಿಳಿಯಲಿದ್ದಾರೆ ಸೋನು ಸೂದ್ ಸಹೋದರಿ
ಪಂಜಾಬ್ ಚುನಾವಣಾ ಕಣಕ್ಕಿಳಿಯಲಿದ್ದಾರೆ ಸೋನು ಸೂದ್ ಸಹೋದರಿ
author img

By

Published : Nov 14, 2021, 2:49 PM IST

ಮೊಗಾ (ಪಂಜಾಬ್): 2022ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ (Punjab Assembly polls -2022) ತನ್ನ ಸಹೋದರಿ ಮಾಳವಿಕಾ (Malvika) ಸ್ಪರ್ಧಿಸುವುದಾಗಿ ನಟ ಸೋನು ಸೂದ್ (Sonu Sood) ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ಪಂಜಾಬ್​ನ ಮೊಗಾ ಜಿಲ್ಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸೋನು ಸೂದ್​, ತನ್ನ ಸಹೋದರಿ ಮಾಳವಿಕಾ ಪಂಜಾಬ್ ಜನರ ಸೇವೆ ಸಲ್ಲಿಸುತ್ತಾರೆ. ಪಂಜಾಬ್ ಜನತೆಯ ವಿಶ್ವಾಸ ಗಳಿಸಲು ಶಕ್ತಿಮೀರಿ ಪ್ರಯತ್ನಿಸಲಾಗುವುದು. ಚುನಾವಣೆ ವೇಳೆ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಾಗುವುದು. ಸೂಕ್ತ ಸಮಯದಲ್ಲಿ ಪಕ್ಷದ ಹೆಸರನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Punjab Vidhansabha Election 2022 : ಮೊದಲ ಲಿಸ್ಟ್​ ರಿಲೀಸ್ ಮಾಡಿದ ಆಮ್​ ಆದ್ಮಿ

ಹಾಗೆಯೇ ತಾವು ರಾಜಕೀಯ ಸೇರುವ ವಿಚಾರವನ್ನು ತಳ್ಳಿಹಾಕಿದ ಸೂದ್​, ಯಾವುದೇ ವ್ಯಕ್ತಿ ಜನರಿಗೆ ಸೇವೆ ಸಲ್ಲಿಸಲು ರಾಜಕೀಯಕ್ಕೆ ಸೇರಬೇಕೆಂದೇನಿಲ್ಲ. ಆದರೆ, ರಾಜಕೀಯಕ್ಕೆ ಸೇರುವುದರಿಂದ ನೀವು ಸೇವೆ ಸಲ್ಲಿಸುವ ವಲಯವನ್ನು ವಿಸ್ತರಿಸಬಹುದು, ಹೆಚ್ಚು ಜನರನ್ನು ತಲುಪಬಹುದು ಎಂದು ಅಭಿಪ್ರಾಯಪಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.