ETV Bharat / bharat

"1 ಕೋಟಿ ರೂ. ನೀಡಿ" ಎಂದ ನೆಟ್ಟಿಗ: ಸೋನು ಸೂದ್​ ಪ್ರತಿಕ್ರಿಯೆ ಹೀಗಿದೆ... - ನಟ ಸೋನು ಸೂದ್ ಇತ್ತೀಚಿನ ಸುದ್ದಿ

ನಟ ಸೋನು ಸೂದ್​ ಬಳಿ ನೆಟಿಜೆನ್ಸ್​ ವಿಚಿತ್ರ ಬೇಡಿಕೆ ಇಟ್ಟಿದ್ದು, ಇದಕ್ಕೆ ನಟ ಕೂಡ ತಮಾಷೆ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

Sonu Sood
ಸೋನು ಸೂದ್​
author img

By

Published : Aug 24, 2021, 2:15 PM IST

ಹೈದರಾಬಾದ್​: ನಟ ಮತ್ತು ಸಾಮಾಜಿಕ ಕಾರ್ಯಕರ್ತ ಸೋನು ಸೂದ್​ ಕೊರೊನಾ ಸಂದರ್ಭದಲ್ಲಿ ದೇಶಕ್ಕೆ ಮಾಡಿದ ಸಹಾಯ ಎಲ್ಲರಲ್ಲೂ ಅಚ್ಚಾಗಿ ಉಳಿದಿದೆ. 'ರಿಯಲ್​ ಹೀರೋ' ಬಿರುದು ಪಡೆದ ಸೂದ್​ ಇದೀಗ ಅಭಿಮಾನಿಯ ಒಂದು ಕೋರಿಕೆಗೆ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.

ಟ್ವಿಟ್ಟರ್​ನಲ್ಲಿ ಒಬ್ಬ ವ್ಯಕ್ತಿ "ಸರ್​ ನನಗೆ 1 ಕೋಟಿ ರೂ.ನೀಡಿ" ಎಂದು ಮನವಿ ಮಾಡಿದ್ದಾನೆ. ಇದಕ್ಕೆ ಸೋನು, "ಕೇವಲ ಒಂದು ಕೋಟಿ? ಇನ್ನೂ ಸ್ವಲ್ಪ ಹೆಚ್ಚು ಕೇಳಬಹುದಿತ್ತು" ಎಂದು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೊಬ್ಬ ವ್ಯಕ್ತಿ "ನಿಮ್ಮ ಮುಂದಿನ ಚಿತ್ರದಲ್ಲಿ ನನಗೆ ಅವಕಾಶ ನೀಡುತ್ತೀರಾ?" ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ನಟ "ಯಾರಿಗಾದರೂ ಸಹಾಯ ಮಾಡುವುದಕ್ಕಿಂತ ದೊಡ್ಡ ಪಾತ್ರವಿಲ್ಲ. ನೀವು ಆ ಪಾತ್ರವನ್ನು ನಿರ್ವಹಿಸಿದರೆ, ನಿಮಗಿಂತ ದೊಡ್ಡ ನಾಯಕ ಇಲ್ಲ" ಎಂದು ಸ್ಪೂರ್ತಿಯ ಮಾತುಗಳನ್ನು ಹೇಳಿದ್ದಾರೆ.

ಇತ್ತೀಚೆಗೆ ನೆಟ್ಟಿಗನೊಬ್ಬ "ಬ್ರದರ್​, ನನ್ನ ಗರ್ಲ್​ಫ್ರೆಂಡ್​​ ಐಫೋನ್ ಕೇಳುತ್ತಿದ್ದಾಳೆ. ಅದಕ್ಕಾಗಿ ನಿಮ್ಮಿಂದ ಏನಾದರೂ ಸಹಾಯ ಮಾಡಲು ಸಾಧ್ಯವಾಗುತ್ತದೆಯೇ?" ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ತಮಾಷೆಯಾಗಿ ಉತ್ತರ ನೀಡಿರುವ ನಟ ಸೋನು ಸೂದ್, "ನಿಮ್ಮ ಗೆಳತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ಒಂದು ವೇಳೆ ಐಫೋನ್​ ನೀಡಿದ್ರೆ ಅದರಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ" ಎಂದಿದ್ದಾರೆ.

ಸೋನು ಸೂದ್​ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಈ ಫೋಸ್ಟ್​ ಹೆಚ್ಚಿಗೆ ವೈರಲ್​ ಆಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.