ನವದೆಹಲಿ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಜಿಲ್ಲೆಯ ಕಯಾರಿ ಪಟ್ಟಣದಿಂದ 7 ಕಿ.ಮೀ ದೂರದಲ್ಲಿ ಸೇನಾ ಟ್ರಕ್ ಆಳವಾದ ಕಂದಕಕ್ಕೆ ಉರುಳಿಬಿದ್ದು ಜೂನಿಯರ್ ಕಮಿಷನ್ಡ್ ಆಫೀಸರ್ ಜೆಸಿಒ (Junior Commissioned Officer-JCO) ಸೇರಿದಂತೆ ಒಂಬತ್ತು ಮಂದಿ ಸೈನಿಕರು ಮೃತಪಟ್ಟ ದುರ್ಘಟನೆ ನಿನ್ನೆ ನಡೆದಿದೆ. ಯೋಧರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
-
Indian Army personnel lost their lives in an accident yesterday near Kiari in Ladakh. Army chief Gen Manoj Pande on behalf of all ranks expressed grief on the loss of lives in the tragic accident. pic.twitter.com/1jmKjSg1dJ
— ANI (@ANI) August 20, 2023 " class="align-text-top noRightClick twitterSection" data="
">Indian Army personnel lost their lives in an accident yesterday near Kiari in Ladakh. Army chief Gen Manoj Pande on behalf of all ranks expressed grief on the loss of lives in the tragic accident. pic.twitter.com/1jmKjSg1dJ
— ANI (@ANI) August 20, 2023Indian Army personnel lost their lives in an accident yesterday near Kiari in Ladakh. Army chief Gen Manoj Pande on behalf of all ranks expressed grief on the loss of lives in the tragic accident. pic.twitter.com/1jmKjSg1dJ
— ANI (@ANI) August 20, 2023
ಪ್ರಧಾನಮಂತ್ರಿ ಕಾರ್ಯಾಲಯವು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ, "ಲೇಹ್ ಬಳಿ ಸಂಭವಿಸಿದ ದುರ್ಘಟನೆಯಿಂದ ನಾವು ಭಾರತೀಯ ಸೇನೆಯ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ದೇಶಕ್ಕೆ ಅವರು ನೀಡಿದ ಸೇವೆಯನ್ನು ಯಾವಾಗಲೂ ಸ್ಮರಿಸಲಾಗುವುದು. ರಾಷ್ಟ್ರಕ್ಕೆ ಯೋಧರ ಉತ್ಕೃಷ್ಟ ಸೇವೆ ಸದಾ ಸ್ಮರಣೀಯ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ" ಎಂದು ತಿಳಿಸಿದೆ.
-
Pained by the mishap near Leh in which we have lost personnel of the Indian Army. Their rich service to the nation will always be remembered. Condolences to the bereaved families. May those who are injured recover at the earliest: PM @narendramodi
— PMO India (@PMOIndia) August 19, 2023 " class="align-text-top noRightClick twitterSection" data="
">Pained by the mishap near Leh in which we have lost personnel of the Indian Army. Their rich service to the nation will always be remembered. Condolences to the bereaved families. May those who are injured recover at the earliest: PM @narendramodi
— PMO India (@PMOIndia) August 19, 2023Pained by the mishap near Leh in which we have lost personnel of the Indian Army. Their rich service to the nation will always be remembered. Condolences to the bereaved families. May those who are injured recover at the earliest: PM @narendramodi
— PMO India (@PMOIndia) August 19, 2023
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ. ಲಡಾಖ್‌ನ ಲೇಹ್ ಬಳಿ ಸಂಭವಿಸಿದ ಅಪಘಾತದಲ್ಲಿ ನಮ್ಮ ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ದುಃಖ ತಂದಿದೆ. ದೇಶಕ್ಕೆ ಅವರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು, ಗಾಯಗೊಂಡ ಸಿಬ್ಬಂದಿಯನ್ನು ಫೀಲ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ : ಲಡಾಖ್‌ನಲ್ಲಿ ಕಂದಕಕ್ಕೆ ಬಿದ್ದ ಸೇನಾ ವಾಹನ : 9 ಯೋಧರ ದುರ್ಮರಣ
ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿ," ರಸ್ತೆ ಅಪಘಾತದಿಂದ ನಾವು ನಮ್ಮ ವೀರ ಸೈನಿಕರನ್ನು ಕಳೆದುಕೊಂಡಿದ್ದೇವೆ, ಸೇನಾ ಟ್ರಕ್ ಕಮರಿಗೆ ಉರುಳಿ ಬಿದ್ದ ಪರಿಣಾಮ ದುರಂತ ಸಂಭವಿಸಿದೆ. ದುಃಖದ ಸಮಯದಲ್ಲಿ ಮೃತರ ಕುಟುಂಬಗಳೊಂದಿಗೆ ಇಡೀ ರಾಷ್ಟ್ರವೇ ಹೆಗಲು ಕೊಟ್ಟು ನಿಂತಿದೆ. ಅಗಲಿದ ಯೋಧರಿಗೆ ಸಂತಾಪಗಳು, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ" ಎಂದಿದ್ದಾರೆ.
-
लेह में सेना के एक ट्रक के दुर्घटनाग्रस्त होने से 9 जवानों के शहीद होने का समाचार बेहद दुखदाई है।
— Mallikarjun Kharge (@kharge) August 19, 2023 " class="align-text-top noRightClick twitterSection" data="
हमारे बहादुर जवानों के हम हमेशा ऋणी रहेंगे।
वीर जवानों के शोक संतप्त परिवार एवं परिजनों के प्रति हमारी गहरी संवेदनाएँ। घायलों की शीघ्र स्वास्थ्य लाभ की हम कामना करते हैं।
इस…
">लेह में सेना के एक ट्रक के दुर्घटनाग्रस्त होने से 9 जवानों के शहीद होने का समाचार बेहद दुखदाई है।
— Mallikarjun Kharge (@kharge) August 19, 2023
हमारे बहादुर जवानों के हम हमेशा ऋणी रहेंगे।
वीर जवानों के शोक संतप्त परिवार एवं परिजनों के प्रति हमारी गहरी संवेदनाएँ। घायलों की शीघ्र स्वास्थ्य लाभ की हम कामना करते हैं।
इस…लेह में सेना के एक ट्रक के दुर्घटनाग्रस्त होने से 9 जवानों के शहीद होने का समाचार बेहद दुखदाई है।
— Mallikarjun Kharge (@kharge) August 19, 2023
हमारे बहादुर जवानों के हम हमेशा ऋणी रहेंगे।
वीर जवानों के शोक संतप्त परिवार एवं परिजनों के प्रति हमारी गहरी संवेदनाएँ। घायलों की शीघ्र स्वास्थ्य लाभ की हम कामना करते हैं।
इस…
ಇದನ್ನೂ ಓದಿ : ಸ್ಕಿಡ್ ಆಗಿ ಉರುಳಿ ಬಿದ್ದ ಸೇನಾ ಟ್ರಕ್ : ಇಬ್ಬರು ಯೋಧರಿಗೆ ಗಂಭೀರ ಗಾಯ
"ಲೇಹ್‌ನಲ್ಲಿ ಸೇನಾ ಟ್ರಕ್ ಅಪಘಾತದಲ್ಲಿ 9 ಯೋಧರು ಹುತಾತ್ಮರಾದ ಸುದ್ದಿ ತಿಳಿದು ತುಂಬಾ ದುಃಖ ಉಂಟಾಗಿದೆ. ನಮ್ಮ ವೀರ ಯೋಧರಿಗೆ ನಾವು ಸದಾ ಋಣಿಯಾಗಿದ್ದೇವೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. "ಲಡಾಖ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ನಮ್ಮ ಅನೇಕ ಸೈನಿಕರು ಹುತಾತ್ಮರಾದ ಸುದ್ದಿ ತುಂಬಾ ದುಃಖಕರ. ಎಲ್ಲಾ ಹುತಾತ್ಮರಿಗೆ ವಿನಯಪೂರಕ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇನೆ. ಯೋಧರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಎಕ್ಸ್ ಆ್ಯಪ್ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : ದೇಶದ ಗಡಿ ದಾಟುತ್ತಿದ್ದ ಅಫ್ಘಾನಿ ಪ್ರಜೆಯನ್ನು ಬಂಧಿಸಿದ ಭಾರತೀಯ ಸೇನೆ