ಸೊಲ್ಲಾಪುರ(ಮಹಾರಾಷ್ಟ್ರ): ಇಲ್ಲಿನ ವೆಲ್ಡಿಂಗ್ ಶಾಪ್ವೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿರುವ ಭೀಕರತೆಗೆ ಸುತ್ತಮುತ್ತಲಿನ ಕಟ್ಟಡದ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಸೊಲ್ಲಾಪುರದ ನಿರಾಳೆ ವಸ್ತಿಯಲ್ಲಿರುವ ವೆಲ್ಡಿಂಗ್ ಶಾಪ್ನಲ್ಲಿ ಈ ಘಟನೆ ನಡೆದಿದೆ.
ನೀರಾಲೆ ವಸ್ತಿ ರಸ್ತೆಯಲ್ಲಿರುವ ವೆಲ್ಡಿಂಗ್ ಶಾಪ್ನಲ್ಲಿ ಶನಿವಾರ ಬೆಳಗಿನ ಜಾವ 2:30ರಿಂದ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಸ್ಫೋಟದ ಭೀಕರತೆಗೆ ಸುತ್ತಮುತ್ತಲಿನ ಕಟ್ಟಡದ ಗಾಜು ಸಂಪೂರ್ಣವಾಗಿ ಪುಡಿಪುಡಿಯಾಗಿವೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಘಟನೆ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದೆ.
ಇದನ್ನೂ ಓದಿ: ಹರಿದ್ವಾರ ಅರ್ಧಕುಂಭದಲ್ಲಿ ಬಾಂಬ್ ಸ್ಫೋಟಿಸುವ ಪ್ಲಾನ್.. ಐವರು ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ
ಸಿಲಿಂಡರ್ ಸ್ಫೋಟಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಸ್ಫೋಟದ ಸದ್ದಿಗೆ ಪ್ರದೇಶದ ಜನರು ಭಯಭೀತರಾಗಿದ್ದು, ಘಟನೆಯಿಂದಾಗಿ ಹತ್ತಿರದ ಮೂರು ಅಂಗಡಿಗಳು ಸುಟ್ಟು ಹೋಗಿವೆ.