ETV Bharat / bharat

ಸೋಷಿಯಲ್ ಮೀಡಿಯಾ ಕ್ರೇಜ್: ಶೇ.95 ರಷ್ಟು ಹದಿಹರೆಯದವರೇ ಆನ್ ಲೈನ್ ಬಳಕೆ

author img

By

Published : Apr 21, 2023, 1:57 PM IST

Updated : Apr 21, 2023, 2:07 PM IST

ನಿಮ್ಮ ಮಕ್ಕಳು ಹೆಚ್ಚು ಫೋನ್​ ಬಳಸುತ್ತಿದ್ದರೆ ಅದನ್ನು ತಪ್ಪಿಸಲು ತಜ್ಞರ ಸಲಹೆ ಇಲ್ಲಿದೆ ನೋಡಿ.

Social Media Craze
ಸೋಷಿಯಲ್ ಮೀಡಿಯಾ ಕ್ರೇಜ್

ಹೈದರಾಬಾದ್​: 90ರ ದಶಕದಲ್ಲಿ ಮಕ್ಕಳ ಬಾಲ್ಯದ ಜೀವನವೇ ಒಂದು ಅದ್ಬುತ ಎನ್ನುವ ಹಾಗೆ ಇತ್ತು. ಇಂದಿನ ಪೀಳಿಗೆಯ ಮಕ್ಕಳು ತಮ್ಮ ಬಾಲ್ಯ ವ್ಯವಸ್ಥೆಯನ್ನು ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಬದುಕಿನ ಕೆಲವೊಂದು ಮೌಲ್ಯಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಪ್ರಸುತ್ತ ಸಾಲಿನಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ಗಳಲ್ಲಿ ಸಿಲುಕಿಕೊಂಡು ಹೊರ ಬರದೆ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆದಾರ ವಯೋಮಾನ ಶೇಕಡಾವಾರು ನೋಡುವುದಾದರೇ ಶೇ.95 ರಷ್ಟು ಹದಿಹರೆಯದವರು ಬಳಸುತ್ತಿದ್ದಾರೆ. ಹಾಗೂ ಶೇ.45 ರಷ್ಟು ಹದಿಹರೆಯದವರು ನಿರಂತರವಾಗಿ ಆನ್‌ಲೈನ್‌ನಲ್ಲಿದ್ದಾರೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತಿದ್ದು, ಮಕ್ಕಳನ್ನು ಆನ್​ ಲೈನ್​ ಎಂಬ ಮಾಯಲೋಕದಿಂದ ಹೊರತರುವುದು ಕಷ್ಟ ಆದರೆ, ಪೋಷಕರೇ ಪ್ರಯತ್ನಿಸಿ ಎನ್ನುತ್ತಾರೆ ತಜ್ಞರು.

ಮಕ್ಕಳ ಬಗ್ಗೆ ಗಮನ ಹರಿಸಬೇಕಾದ ಪೋಷಕರು ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಸರಿಯಾಗಿ ಗಮನ ಹರಿಸುವುದಿಲ್ಲ. ಹೀಗಾಗಿ ತಮ್ಮ ಬಳಿ ಫೋನ್ ಇದೆ ಎಂದು ಅವರು ಭಾವಿಸಿರುತ್ತಾರೆ. ಆದರೆ ತಮ್ಮ ಮಕ್ಕಳ ಹತ್ತಿರ ಆ ಫೋನ್​ ಇದ್ದರು ಸಹಾ ಯಾವುದೇ ನಿರ್ಬಂಧ ಹೇರುವುದಿಲ್ಲ. ಜೊತೆಗೆ ಪೋನ್​ ಬಳಕೆಯಿಂದ ಮಕ್ಕಳ ಮೇಲೆ ಏನೆಲ್ಲ ಬೀರುತ್ತವೆ ಎಂದು ಸಹಾ ಅವರು ಗಮನಿಸುವುದಿಲ್ಲ. ಇದರಿಂದ ಸಾಕಷ್ಟು ಪೋಷಕರು ಇಂದು ತಮ್ಮ ಮಕ್ಕಳು ಆನ್​​​​ಲೈನ್​ನಿಂದ ಹೊರ ತರುವ ಪ್ರಯತ್ನ ನಡೆಸುತ್ತಿದ್ದು, ಪೋಷಕರು ತಮ್ಮ ಮಕ್ಕಳೊಂದಿಗೆ ಪ್ರತಿದಿನ ಒಂದು ಗಂಟೆ ಕುಳಿತು ಮಾತನಾಡುತ್ತ ಅವರ ಸ್ನೇಹಿತರು ಮತ್ತು ಅಧ್ಯಯನದ ಬಗ್ಗೆ ಕೇಳಲು ಪೋಷಕರಿಗೆ ತಜ್ಞರು ಸಲಹೆ ನೀಡುತ್ತಾರೆ.

ಮತ್ತೊಂದು ವಿಪರಾಸ್ಯ ಏನು ಎಂದರೆ ಹದಿಹರೆಯದ ಮಕ್ಕಳು ಎಲ್ಲೆಂದರಲ್ಲಿ ಫೋಟೋ, ಸೆಲ್ಫಿ ತೆಗೆದು ಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ನಂತರ ಅವರ ಪೋಸ್ಟ್‌ಗಳಿಗೆ ಎಷ್ಟು ಲೈಕ್‌ಗಳು ಬರುತ್ತಿವೆ ಎಂಬುದರ ಕುರಿತು ಭಾವನಾತ್ಮಕ ಸಂಘರ್ಷವನ್ನು ಎದುರಿಸುತ್ತಿದ್ದಾರೆ. ಜೊತೆ ಜೊತೆಗೆ ಸಾಕಷ್ಟು ಇಂದಿನ ಮಕ್ಕಳು ರಾತ್ರಿ ವೇಳೆ ಅತಿ ಹೆಚ್ಚು ಫೋನ್​ ಉಪಯೋಗಿಸುವುದರಿಂದ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾರೆ. ಪೋಷಕರು ಮಕ್ಕಳೊಂದಿಗೆ ಸೌಮ್ಯವಾಗಿರಲು ಯೋಚಿಸುತ್ತೀರಾ. ಆದರೆ, ಕೆಲವು ವಿಷಯಗಳು ಕೈ ತಪ್ಪಿದಾಗ ಸ್ವಲ್ಪ ಕಠಿಣತೆತೋರಿಸಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಫೋನ್‌ನಲ್ಲೇ ಕಳೆದುಹೋಗಿರುವ ಮಕ್ಕಳು ನಿತ್ಯ ಅವರ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲುವ ಸಾಮಾನ್ಯ ಜ್ಞಾನವನ್ನು ಮರೆತು ಬಿಟ್ಟಿದ್ದಾರೆ. ಮಕ್ಕಳು ತನ್ನ ಅಧ್ಯಯನದ ಕಡೆಗೂ ಅಷ್ಟೇನು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಇನ್ನು ಸಮಯ ಮೀರಿಲ್ಲ ಮನೆಯಲ್ಲಿ ತಾಯಿಯಾದವರು ಮಕ್ಕಳ ಜವಬ್ದಾರಿಯನ್ನು ತೆಗೆದಯಕೊಂಡು, ಅವರು ನಿಜ ಜೀವನದಲ್ಲಿ ಯಾವೆಲ್ಲಾ ಮೌಲ್ಯಗಳನ್ನು ಕಳೆದುಕೊಳ್ಳತ್ತಿದ್ದಾರೆ ಎಂಬುದನ್ನು ಮಕ್ಕಳೊಂದಿಗೆ ಕುಳಿತು ಮಾತನಾಡುವ ಮೂಲಕ ತಿಳಿಸಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬರುವ ಲೈಕ್ಸ್​, ಗಿಫ್ಟ್​ ಬಂದಾಗ ಸಂತೋಷಪಡುತ್ತಾರೆ. ಇಂತಹ ವ್ಯವಸ್ಥೆಯಲ್ಲಿ ಇರುವ ಮಕ್ಕಳ ಫೋನ್​ ಕಸಿದುಕೊಂಡಾಗ ಮಕ್ಕಳ ಮೆದುಳು ನ್ಯೂರೋಟ್ರಾನ್ಸ್ಮಿಟರ್ ಡೋಪಮೈನ್ ಅನ್ನು ಬಿಡುಗಡೆ ಆಗುತ್ತದೆ. ಇದು ಹದಿಹರೆಯದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದ್ದು, ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ . ಆದ್ದರಿಂದ ಪ್ರತಿದಿನ ಹಂತ ಹಂತವಾಗಿ ಸ್ವಲ್ಪ ಸಮಯ ಫೋನ್​ ಬಳಕೆ ಮಾಡುವುದನ್ನು ನಿಯಂತ್ರಿಸೋಣ. ಮತ್ತು ಬಳಕೆಯನ್ನು ಕಡಿಮೆ ಮಾಡಿ ಆನ್​ ಲೈನ್​ ಪ್ರಭಾವದಿಂದ ಸಂಪೂರ್ಣವಾಗಿ ಹೊರಬರೋಣ.

ಇದನ್ನೂ ಓದಿ : ರಾಜ್ಯಪಾಲರು-ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು: ಬಿಜೆಪಿಯೇತರ ಸಿಎಂಗಳ ಸಭೆಗೆ ನಿರ್ಧಾರ

Last Updated : Apr 21, 2023, 2:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.