ETV Bharat / bharat

ಹಿಮಪಾತಕ್ಕೆ ಅಂಜದೆ ಶಾಲೆಗೆ ತೆರಳುತ್ತಿರುವ ಮಕ್ಕಳು.. ವಿದ್ಯಾರ್ಥಿನಿಯರ ಶಿಕ್ಷಣದ ಆಸ್ತೆಗೆ ನೆಟ್ಟಿಗರ ಸಲಾಂ - ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ

ಹಿಮಪಾತದ ನಡುವೆಯೂ ಶಾಲೆಗೆ ತೆರಳಿದ ವಿದ್ಯಾರ್ಥಿನಿಯರು - ಮಕ್ಕಳ ಶಿಕ್ಷಣದ ಆಸಕ್ತಿಗೆ ನೆಟ್ಟಿಗರ ಫುಲ್​ ಮಾರ್ಕ್​ - ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಂಚಿಕೊಂಡ ವಿಡಿಯೋಗೆ ಮೆಚ್ಚುಗೆ.

snowfall-in-lahaul-spiti-girl-students-reached-school
ವಿದ್ಯಾರ್ಥಿನಿಯ ಶಿಕ್ಷಣದ ಆಸ್ತೆಗೆ ನೆಟ್ಟಿಗರ ಸಲಾಂ
author img

By

Published : Jan 31, 2023, 4:20 PM IST

ವಿದ್ಯಾರ್ಥಿನಿಯ ಶಿಕ್ಷಣದ ಆಸ್ತೆಗೆ ನೆಟ್ಟಿಗರ ಸಲಾಂ

ಲಾಹೌಲ್/ಸ್ಪಿತಿ (ಹಿಮಾಚಲ ಪ್ರದೇಶ​): ಇಲ್ಲಿನ ಎರಡು ಜಿಲ್ಲೆಗಳಲ್ಲಿ ಕಳೆದ 2 ದಿನದಿಂದ ಹಿಮಾಪಾತ ಆಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮಪಾತಕ್ಕೆ ಜನರಿಗೆ ಹೊರಗೆ ಓಡಾಡಲು ಆಗ ಸ್ಥಿತಿ ನಿರ್ಮಾಣವಾಗಿದೆ. ಎರಡು ಅಡಿಗೂ ಹೆಚ್ಚು ಹಿಮಮಳೆ ಉಂಟಾಗುತ್ತಿರುವುದರಿಂದ ರಸ್ತೆ ಸಂಚಾರವೂ ಸಮಸ್ಯೆಯಾಗಿದೆ. ಈ ನಡುವೆ ಶಾಲಾ ವಿದ್ಯಾರ್ಥಿಗಳ ವಿಡಿಯೋ ಒಂದು ವೈರಲ್​ ಆಗುತ್ತಿದ್ದು, ಮಕ್ಕಳ ಶಿಕ್ಷಣದ ಆಸ್ತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಬಗ್ಗೆ ಜಿಲ್ಲೆಯ ಕಾಜಾ ಉಪವಿಭಾಗದ ಅಧಿಕಾರಿ ಮಾತನಾಡಿ, ಇಲ್ಲಿಯೂ 2 ಅಡಿಗೂ ಹೆಚ್ಚು ಹಿಮಪಾತವಾಗಿದೆ. ಇದರಿಂದಾಗಿ ಕಣಿವೆಯ ಜನಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಜನರು ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿರುವ ವಿಡಿಯೋ ವೈರಲ್​ ಆಗಿದ್ದು, ನಮ್ಮೆಲ್ಲರಿಗೂ ಇನ್ನಷ್ಟು ಕೆಲಸ ಮಾಡಲು ಉತ್ಸಾಹ ಹೆಚ್ಚಿಸಿದೆ. ವಿಡಿಯೋದಲ್ಲಿ ಕಾಜಾ ಶಾಲೆಯ ವಿದ್ಯಾರ್ಥಿನಿಯರು ಭಾರೀ ಹಿಮಪಾತದ ನಡುವೆಯೂ ಕಾಲ್ನಡಿಗೆಯಲ್ಲೇ ಶಾಲೆಗೆ ಹೊಗುತ್ತಿದ್ದಾರೆ. ಹಿಮಪಾತದಿಂದ ಬಹುತೇಕರು ಮನೆಯಲ್ಲೇ ಕುಳಿತಿರುವಾಗ ವಿದ್ಯಾರ್ಥಿನಿಯರಿಗೆ ಶಿಕ್ಷಣದ ಬಗ್ಗೆ ಇರುವ ಉತ್ಸಾಹ ಕಡಿಮೆ ಆಗದೇ, ಹಿಮಪಾತದ ನಡುವೆ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲಿ ಶಾಲೆ ತಲುಪಿದ್ದಾರೆ ಎಂದು ತಿಳಿಸಿದ್ದಾರೆ.

ಹಿಮಪಾತ ಮೀರಿಸಿದ ವಿದ್ಯಾರ್ಥಿನಿಯರ ಆಸ್ತೆ: ಕಾಜಾ ಶಾಲೆಯ ವಿದ್ಯಾರ್ಥಿನಿಯರು ಹಿಮದ ನಡುವೆ ಶಾಲೆಗೆ ಹೊಗುತ್ತಿರುವ ವಿಡಿಯೋವನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರೊಪೈಲ್​ನಲ್ಲಿ ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ್ ಬನ್ಯಾಲ್ ಎಂಬುವವರು ಪೋಸ್ಟ್​​ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ಹಿಮಪಾತದ ನಡುವೆಯೂ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ತೆರಳುತ್ತಿದ್ದಾರೆ. ಕಾಜಾ ಉಪವಿಭಾಗದಲ್ಲಿ ಬಾಲಕಿಯರ ಏಕೈಕ ಸರ್ಕಾರಿ ಹಾಸ್ಟೆಲ್​ನಿಂದ ವಿದ್ಯಾರ್ಥಿನಿಯರು ಶಾಲೆಗೆ ತೆರಳುತ್ತಿರುವ ವಿಡೀಯೋ ಇದಾಗಿದೆ. ಕಾಜಾ ಉಪವಿಭಾಗದ ವಿವಿಧ ಪ್ರದೇಶಗಳ 60 ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಶಾಲೆಗೆ ಸಾಲಾಗಿ ತೆರಳುತ್ತಿರುವ ವಿಡಿಯೋ ಈಗ ವೈರಲ್​ ಆಗಿದೆ. ಹಿಮಪಾತವಾದರೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಉತ್ಸಾಹ ಕಡಿಮೆಯಾಗಿಲ್ಲ ಎಂದು ಹೆಚ್ಚಿನವರು ಕಮೆಂಟ್​ ಮಾಡುತ್ತಿದ್ದಾರೆ.

ಹಿಮಪಾತದಿಂದ ಹೆಚ್ಚಿದ ಸಮಸ್ಯೆ: ಕಳೆದೆರಡು ದಿನದ ಹಿಮಪಾತದಿಂದಾಗಿ ಕಣಿವೆಯ ಎಲ್ಲಾ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಆಗಿತ್ತು. ಹಲವು ಪ್ರದೇಶಗಳಲ್ಲಿ ವಿದ್ಯುತ್ ಇರಲಿಲ್ಲ. ಭಾರೀ ಹಿಮಪಾತದಿಂದ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯ ಮೇಲಿನ ಹಿಮ ತೆರವು ಕಾರ್ಯ ಇಂದಿನಿಂದ ಆರಂಭವಾಗಿದೆ.

ಜಿಲ್ಲಾಧಿಕಾರಿ ಸುಮಿತ್ ಖಿಮ್ತಾ ಮಾಧ್ಯಮಗಳಿಗೆ ನೀಡಿರುವ ಮಾಹಿತಿಯಂತೆ, ಎರಡು ದಿನದಿಂದ ಸತತ ಹಿಮಪಾತ ಆಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿದೆ. ವಿದ್ಯುತ್​ ಸಂಪರ್ಕವನ್ನು ಆದಷ್ಟು ಬೇಗ ಕಲ್ಪಿಸಲಾಗುವುದು. ಇಂದಿನಿಂದ ರಸ್ತೆಯ ಮೇಲಿನ ಹಿಮ ತೆರವು ಕಾರ್ಯ ಆರಂಭವಾಗಿದೆ. ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗುವುದು ಎಂದಿದ್ದಾರೆ.

ಹವಾಮಾನ ವರದಿ: ಶಿಮ್ಲಾದ ಹವಾಮಾನ ಕೇಂದ್ರದ ಪ್ರಕಾರ, ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿ ಹವಾಮಾನವು ತಿಳಿಯಾಗಲಿದೆ. ಫೆಬ್ರವರಿ 1 ಮತ್ತು 2 ರಂದು ಕಣಿವೆ ಪ್ರದೇಶಗಳಲ್ಲಿ ಮತ್ತು ಬಯಲು ಸೀಮೆಯ ಅನೇಕ ಭಾಗಗಳಲ್ಲಿ, ಬೆಳಗ್ಗೆ ಮತ್ತು ಸಂಜೆ ಮಂಜು ಮತ್ತು ಶೀತ ಗಾಳಿಯ ಸಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಫೆಬ್ರವರಿ 4 ರವರೆಗೆ ಇಡೀ ರಾಜ್ಯದಲ್ಲಿ ಹವಾಮಾನ ತಿಳಿಯಾಗಿರಲಿದೆ. ಆದಾಗ್ಯೂ, ಫೆಬ್ರವರಿ 1 ರಂದು ಕೆಲ ಸ್ಥಳಗಳಲ್ಲಿ ಮಳೆ ಅಥವಾ ಹಿಮಪಾತವಾಗಬಹುದು ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಭಾರಿ ಹಿಮಪಾತದ ನಡುವೆಯೂ ಗರ್ಭಿಣಿಯನ್ನ ಆಸ್ಪತ್ರೆಗೆ ದಾಖಲಿಸಿದ ಭಾರತೀಯ ಸೇನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.