ETV Bharat / bharat

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ.. ಸಂಚಾರಕ್ಕೆ ರಸ್ತೆ ಅಣಿಗೊಳಿಸುತ್ತಿದೆ ಸ್ಥಳೀಯಾಡಳಿತ

author img

By

Published : Nov 17, 2020, 12:47 PM IST

ಉತ್ತರ ಭಾಗದಲ್ಲಿ ತಾಪಮಾನ ಇಳಿಕೆಯಾಗಿದ್ದು, ಹಿಮಪಾತ ಸಂಭವಿಸುತ್ತಿದೆ. ಜಮ್ಮು ಕಾಶ್ಮೀರದ ಮೊಘಲ್ ರಸ್ತೆ ಹಿಮದಿಂದ ಆವೃತವಾಗಿದ್ದು, ಹಿಮ ತೆರವು ಕಾರ್ಯ ಮುಂದುವರಿದಿದೆ..

snow-clearing-operation-underway-on-j-ks-mughal-road
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ.

ರಜೌರಿ ( ಜಮ್ಮು ಮತ್ತು ಕಾಶ್ಮೀರ): ಉತ್ತರ ಭಾರತದ ಹಲವು ಭಾಗಗಳಲ್ಲಿ ಹಿಮಪಾತ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಮೊಘಲ್ ರಸ್ತೆಯಲ್ಲಿ ಹಿಮ ತೆರವು ಕಾರ್ಯ ಭರದಿಂದ ಸಾಗಿದೆ. ಇಲ್ಲಿನ ಸ್ಥಳೀಯ ಆಡಳಿತ ರಸ್ತೆ ಮೇಲಿನ ಹಿಮ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಶ್ರಮಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮಪಾತ

ದಕ್ಷಿಣ ಕಾಶ್ಮೀರದ ಶೋಪಿಯಾನ್​​​ ಜಿಲ್ಲೆಯ ರಜೌರಿ ಮತ್ತು ಪೂಂಚ್ ಜಿಲ್ಲೆಯೊಂದಿಗೆ ಸಂಪರ್ಕಿಸುವ ಮೊಘಲ್ ರಸ್ತೆಯಲ್ಲಿ ಹಿಮಪಾತವಾಗಿದ್ದು, ಜೆಸಿಬಿಯಂತಹ ದೈತ್ಯ ವಾಹನಗಳ ಸಹಕಾರದೊಂದಿಗೆ ಹಿಮ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ ಜಮ್ಮುವಿನಲ್ಲಿ ಸೋಮವಾರ ಅತೀ ಹೆಚ್ಚು ತಾಪಮಾನ 20.3 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ತಾಪಮಾನ 12.6 ಡಿಗ್ರಿಗೆ ಇಳಿದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಹಿಮಪಾತ ಇನ್ನಷ್ಟು ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.