ETV Bharat / bharat

ತೆಲಂಗಾಣದಲ್ಲಿ ಒಂದೇ ಕುಟುಂಬದ ಮೂವರಿಗೆ ಕಚ್ಚಿದ ಹಾವು: 3 ತಿಂಗಳ ಕೂಸು ಸಾವು - ಮಹಬೂಬಾಬಾದ್ ಲೇಟೆಸ್ಟ್​ ನ್ಯೂಸ್

ಹಾವು ಕಚ್ಚಿ ಮೂರು ತಿಂಗಳ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ. ಮಗುವಿನ ತಂದೆ, ತಾಯಿಗೂ ಹಾವು ಕಚ್ಚಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

snake  bites three people in the same Family 3 months baby died
ಹಾವು ಕಚ್ಚಿ ಮಗು ಸಾವು
author img

By

Published : Nov 7, 2021, 4:52 PM IST

ತೆಲಂಗಾಣ: ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿದೆ. ಪರಿಣಾಮ, 3 ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರಾಂತಿ ಮತ್ತು ಮಮತಾ ದಂಪತಿಯ ಹೆಣ್ಣು ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿಸಿಕೊಂಡು ದಂಪತಿ ಮನೆಗೆ ಮರಳಿದ್ದರು. ಮಧ್ಯರಾತ್ರಿ ಮಗುವಿನ ಬಾಯಿಂದ ನೊರೆ ಬರುತ್ತಿರುವುದನ್ನು ಕಂಡ ಪೋಷಕರು ಆತಂಕಕ್ಕೊಳಗಾಗಿದ್ದಾರೆ.

ಮರುಘಳಿಗೆಯೇ ಮಗುವಿನ ಮೇಲೆ ಹೊದಿಸಿದ್ದ ಹೊದಿಕೆಯಿಂದ ಹಾವು ಬಿದ್ದಿದೆ. ಅದೇ ಹಾವು ಕ್ರಾಂತಿ ಮತ್ತು ಮಮತಾಗೂ ಕಚ್ಚಿದೆ. ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿಮಧ್ಯೆ ಮಗು ಸಾವನ್ನಪ್ಪಿದೆ. ಕ್ರಾಂತಿ ಮತ್ತು ಮಮತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಎಲ್​​ಕೆಜಿ, ಯುಕೆಜಿ ಆರಂಭ: ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿ ಹೀಗಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.