ETV Bharat / bharat

ಹಾವು ಕಚ್ಚಿರುವುದನ್ನು ಮನೆಯಲ್ಲಿ ಹೇಳಲಿಲ್ಲ.. ಹುಟ್ಟುಹಬ್ಬದಂದೇ ಪ್ರಾಣಬಿಟ್ಟ 8 ವರ್ಷದ ಬಾಲಕಿ - ತೆಲಂಗಾಣ

ಹಾವು ಕಚ್ಚಿದ್ರೂ ಮನೆಯಲ್ಲಿ ಹೇಳದ ಕಾರಣ ಪುಟ್ಟ ಬಾಲಕಿಯೋರ್ವಳು ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

SNAKE BIT THE 8 YEAR GIRL
SNAKE BIT THE 8 YEAR GIRL
author img

By

Published : Jul 26, 2021, 4:11 PM IST

ಕೊಥಗುಡೆಮ್​(ತೆಲಂಗಾಣ): ಇತರೆ ಮಕ್ಕಳೊಂದಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ವಿಷಕಾರಿ ಹಾವು ಕಚ್ಚಿದೆ. ಇದರ ಬಗ್ಗೆ ಮನೆಯಲ್ಲಿ ಹೇಳದ ಕಾರಣ 8 ವರ್ಷದ ಬಾಲಕಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಕೊಥಗುಡೆಮ್​ ಪ್ರದೇಶದಲ್ಲಿ ನಡೆದಿದೆ.

ಮದುವೆಯಾಗಿ 15 ವರ್ಷವಾಗಿದ್ದರೂ ಬಾಸ್ಕರ್ ಹಾಗೂ ಭಾರತಿ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ತಮ್ಮ ಸಂಬಂಧಿಕರ ಹೆಣ್ಣು ಮಗುವನ್ನು ಅವರು ದತ್ತು ಪಡೆದುಕೊಂಡಿದ್ದರು. ಈ ಮಗುವಿಗೆ ಅಕಿಲಾ ಎಂದು ಹೆಸರಿಟ್ಟು ಅವರು ಸಾಕುತ್ತಿದ್ದರು. ನಿನ್ನೆ ಬಾಲಕಿಗೆ 8ನೇ ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ಶನಿವಾರವೇ ಕುರುಕುಂಡಾದಲ್ಲಿನ ಅಜ್ಜಿ ಮನೆಗೆ ತೆರಳಿದ್ದರು.

ಬಾಲಕಿ ಅಲ್ಲಿನ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿದೆ. ಈ ವೇಳೆ ಅಲ್ಲಿಂದ ಓಡಿ ಬಂದು ಮನೆಯಲ್ಲಿ ಕುಳಿತಿದ್ದಾಳೆ. ಆದರೆ ಮನೆಯವರು ಹೊಡೆಯುತ್ತಾರೆಂಬ ಭಯದಲ್ಲಿ ಯಾರಿಗೂ ಹಾವು ಕಚ್ಚಿರುವ ವಿಷಯ ಹೇಳಲಿಲ್ಲ. ಕೆಲವು ಸಮಯದ ನಂತರ ಆಕೆ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾಳೆ. ಈ ವೇಳೆ ಹಾವು ಕಚ್ಚಿರುವುದು ಮನೆಯವರಿಗೆ ಗೊತ್ತಾಗಿದೆ. ತಕ್ಷಣವೇ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ.

ಇದನ್ನೂ ಓದಿ: ಭಾರತೀಯರ ಕನಸುಗಳ ಭಾರವನ್ನು ಗೆಲುವಾಗಿ ಪರಿವರ್ತಿಸಿದ ಮೀರಾಬಾಯಿ ಚನು: ಕೊಹ್ಲಿ ಗುಣಗಾನ

ಸುಮಾರು 5-6 ಆಸ್ಪತ್ರೆ ಸುತ್ತಿದ್ರೂ ಬಾಲಕಿಗೆ ಸೂಕ್ತವಾದ ಚಿಕಿತ್ಸೆ ಸಿಕ್ಕಿಲ್ಲ. ಕೊನೆಯದಾಗಿ ಖಮ್ಮಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಮಗು ಪ್ರಾಣ ಬಿಟ್ಟಿದೆ. ಕುಟುಂಬಸ್ಥರು ಈಗಾಗಲೇ ಮಗುವಿನ ಅಂತ್ಯಕ್ರಿಯೆ ನಡೆಸಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.