ETV Bharat / bharat

ತಮಿಳುನಾಡು ಎಲೆಕ್ಷನ್​: ಸ್ಮೃತಿ ಇರಾನಿಯಿಂದ ನೃತ್ಯ.. ದೋಸೆ ಹೊಯ್ದು ಖುಷ್ಬೂ ಮತಬೇಟೆ - ಥೌಸಂಡ್​ ಲೈಟ್ಸ್​ ಕ್ಷೇತ್ರ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೊಯಮತ್ತೂರಿನಲ್ಲಿ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿ ಚುನಾವಣಾ ಪ್ರಚಾರ ನಡೆಸಿದ್ದರೆ, ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ಥೌಸಂಡ್​ ಲೈಟ್ಸ್​ ಕ್ಷೇತ್ರದಲ್ಲಿ ದೋಸೆ ಹೊಯ್ದು ಮತಯಾಚನೆ ಮಾಡಿದ್ದಾರೆ.

Smriti Irani performs Dandiya, Khushbu Sundar make dosa
ಸ್ಮೃತಿ ಇರಾನಿ, ಖುಷ್ಬೂ ಸುಂದರ್​ರ ವಿಭಿನ್ನ ಪ್ರಚಾರ
author img

By

Published : Mar 27, 2021, 2:49 PM IST

Updated : Mar 27, 2021, 3:27 PM IST

ಕೊಯಮತ್ತೂರು: ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ.

ಕೊಯಮತ್ತೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್ ಪರವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.

ಸ್ಮೃತಿ ಇರಾನಿ, ಖುಷ್ಬೂ ಸುಂದರ್​ರ ವಿಭಿನ್ನ ಪ್ರಚಾರ

ಇದನ್ನೂ ಓದಿ: 1 ಗಂಟೆಯವರೆಗೆ ಬಂಗಾಳದಲ್ಲಿ ಶೇ 40.73, ಅಸ್ಸೋಂನಲ್ಲಿ ಶೇ 37.06ರಷ್ಟು ಮತದಾನ

ಥೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ರಸ್ತೆ ಬದಿಯ ಹೋಟೆಲ್​ವೊಂದರಲ್ಲಿ ದೋಸೆ ಹೊಯ್ದು ಮತಯಾಚನೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಏಪ್ರಿಲ್​ 6ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ - ಕಾಂಗ್ರೆಸ್​ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ.

Last Updated : Mar 27, 2021, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.