ETV Bharat / bharat

ಗ್ಲುಕೋಮಾವನ್ನು ಪತ್ತೆ ಹಚ್ಚಲು ಸ್ಮಾರ್ಟ್‌ಫೋನ್‌ಗಳು ಸಹಾಯಕಾರಿಯೇ?

ಗ್ಲಾಕೋಮಾ ನಿಮ್ಮಲ್ಲಿ ಅಂಧತ್ವವನ್ನೇ ಉಂಟು ಮಾಡಬಹುದಾದ ಕಾಯಿಲೆ ಎಂಬುದನ್ನು ನೆನಪಿಡಿ. ಒಂದೊಮ್ಮೆ ನಿಮಗೆ ಗ್ಲಾಕೋಮಾ ಕಾಯಿಲೆಯಿದೆ ಎಂದು ಪತ್ತೆಹಚ್ಚಲ್ಪಟ್ಟರೆ, ನೀವು ಜೀವನ ಪರ್ಯಂತ ಚಿಕಿತ್ಸೆ ಪಡೆಯಬೇಕಾಗಿರೋದು ಮುಖ್ಯವಾಗಿರುತ್ತದೆ. ನಿಯಮಿತ ಚಿಕಿತ್ಸೆಯು ಗ್ಲಾಕೋಮಾ ಕಾಯಿಲೆ ಉಲ್ಬಣಗೊಳ್ಳುವುದನ್ನು ತಡೆಹಿಡಿದು ಸಂಭವಿಸುವ ಹಾನಿಯನ್ನು ತಪ್ಪಿಸಿ..

Smartphones May Help Keep Glaucoma Blindness At Bay
ಗ್ಲುಕೋಮಾ
author img

By

Published : Feb 28, 2021, 7:03 PM IST

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರಕಾರ ಈ ಕಾಯಿಲೆಯು ಜನರಲ್ಲಿ ಅಂಧತ್ವ ಉಂಟು ಮಾಡುವಲ್ಲಿ ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಕಣ್ಣಿನ ಇತರ ಸಮಸ್ಯೆಗಳಿಗೆ ಆಗಾಗ್ಗೆ ದೂಷಿಸಲ್ಪಡುವ ಸ್ಮಾರ್ಟ್‌ಫೋನ್‌ಗಳೂ ಸಹ ನಿಮ್ಮ ಸಹಾಯಕ್ಕೆ ಬರಬಹುದು.

ಯಾಕೆಂದರೆ, ಗ್ಲುಕೋಮಾ ಬರುವ ಮುಂಚೆಯೇ ಅದನ್ನು ಪತ್ತೆ ಹಚ್ಚಲು ಮತ್ತು ಕಣ್ಣುಗಳನ್ನು ಸ್ಕ್ಯಾನ್ ಮಾಡಲು ಸ್ಮಾರ್ಟ್​ ಫೋನ್​ಗಳನ್ನು ಬಳಸಬಹುದು ಅನ್ನೋದನ್ನ ಸಂಶೋಧಕರು ಕಂಡು ಹಿಡಿದಿದ್ದಾರೆ. ಇದು ತೀವ್ರ ಆಕ್ಯುಲರ್ ಖಾಯಿಲೆಗಳು ಮತ್ತು ಕುರುಡುತನವನ್ನು ತಡೆಯಲು ಸಹಾಯ ಮಾಡುತ್ತದೆ.

ಗ್ಲುಕೋಮಾ ಎಂಬುದು ಆಪ್ಟಿಕ್ ನರಗಳ ಕಾಯಿಲೆಯಾಗಿದೆ. ಇದು ವಿಶ್ವಾದ್ಯಂತ 79.6 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಇದಕ್ಕೆ ಚಿಕಿತ್ಸೆ ನೀಡದಿದ್ದರೆ ಇದು ತುಂಬಾ ಹಾನಿಯನ್ನುಂಟು ಮಾಡಲಿದೆ. ಹೆಚ್ಚಿನ ಸಂದರ್ಭಗಳಲ್ಲಿ ಸೂಕ್ತ ನಿಯಂತ್ರಣ ಮತ್ತು ಚಿಕಿತ್ಸೆಯಿಂದ ಕುರುಡುತನ ತಡೆಯಬಹುದಾಗಿದೆ.

ಗ್ಲುಕೋಮಾವು ಉನ್ನತ ಮಟ್ಟದ ಇಂಟ್ರಾಕ್ಯುಲರ್ ಒತ್ತಡದೊಂದಿಗೆ (ಐಒಪಿ) ಸಂಬಂಧಿಸಿದೆ ಮತ್ತು ವ್ಯಕ್ತಿಯ ಐಒಪಿಯನ್ನು ವಿಸ್ತೃತ ಅವಧಿಯಲ್ಲಿ ಮೇಲ್ವಿಚಾರಣೆ ಮಾಡುವ ನಿಖರವಾದ, ಆಕ್ರಮಣಶೀಲವಲ್ಲದ ಮಾರ್ಗವು ಅವರ ದೃಷ್ಟಿಯನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೊಬೈಲ್ ಮಾಪನ ವಿಧಾನವಾಗಿ ಬಳಸಲಾಗುವ ಧ್ವನಿ ತರಂಗಗಳು, ಐಒಪಿಳಗಳು ಇದನ್ನು ಪತ್ತೆ ಮಾಡುತ್ತವೆ. ಎಂಜಿನಿಯರಿಂಗ್ ವರದಿಗಳ ಜರ್ನಲ್​​ನಲ್ಲಿ ಪ್ರಕಟವಾದ ಅಧ್ಯಯನವು ಬ್ರಿಟನ್‌ನ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸೌಂಡ್‌ವೇವ್ ಮತ್ತು ಕಣ್ಣಿನ ಮಾದರಿ ಬಳಸಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆಂದು ತೋರಿಸಿದೆ.

"ವಸ್ತುವಿನ ಆಂತರಿಕ ಒತ್ತಡ ಮತ್ತು ಅದರ ಅಕೌಸ್ಟಿಕ್ ಪ್ರತಿಫಲನ ಗುಣಾಂಕದ ನಡುವಿನ ಸಂಬಂಧವನ್ನು ನಾವು ಕಂಡುಹಿಡಿದಿದ್ದೇವೆ" ಎಂದು ಖಾಮಿಸ್ ಎಸ್ಸಾ, ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸುಧಾರಿತ ಉತ್ಪಾದನಾ ಗುಂಪಿನ ನಿರ್ದೇಶಕ ಹೇಳಿದ್ದಾರೆ.

"ಕಣ್ಣಿನ ರೇಖಾಗಣಿತದ ಕುರಿತು ಹೆಚ್ಚಿನ ತನಿಖೆ ಮತ್ತು ಇದು ಸೌಂಡ್‌ವೇವ್‌ಗಳೊಂದಿಗಿನ ಪರಸ್ಪರ ಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬಳಕೆದಾರರಿಗೆ ಇರುವ ಸೌಕರ್ಯದಿಂದ ಐಒಪಿಯನ್ನು ನಿಖರವಾಗಿ ಅಳೆಯಲು ಸ್ಮಾರ್ಟ್‌ಫೋನ್​ನಿಂದ ಸಾಧ್ಯವಿದೆ."

ಇತರ ಕಣ್ಣಿನ ಕಾಯಿಲೆಗಳಿಗೆ ಅಪಾಯಕಾರಿ ಅಂಶಗಳನ್ನು ನಿರ್ಣಯಿಸುವುದು ಸುಲಭ, ಉದಾಹರಣೆಗೆ ಮಧುಮೇಹ ರೆಟಿನೋಪತಿಯ ಸಂದರ್ಭದಲ್ಲಿ, ಮಧುಮೇಹ ಹೊಂದಿರುವ ವ್ಯಕ್ತಿಗಳು ನಿರ್ದಿಷ್ಟ ಅಪಾಯದಲ್ಲಿರುತ್ತಾರೆ ಮತ್ತು ಕಣ್ಣಿನ ರಕ್ತನಾಳಗಳಲ್ಲಿ ಬೆಳವಣಿಗೆಯಾಗುವ ಸಣ್ಣ ಉಬ್ಬುಗಳನ್ನು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತದೆ.

ಗ್ಲಾಕೋಮಾ ನಿಮ್ಮಲ್ಲಿ ಅಂಧತ್ವವನ್ನೇ ಉಂಟು ಮಾಡಬಹುದಾದ ಕಾಯಿಲೆ ಎಂಬುದನ್ನು ನೆನಪಿಡಿ. ಒಂದೊಮ್ಮೆ ನಿಮಗೆ ಗ್ಲಾಕೋಮಾ ಕಾಯಿಲೆಯಿದೆ ಎಂದು ಪತ್ತೆಹಚ್ಚಲ್ಪಟ್ಟರೆ, ನೀವು ಜೀವನ ಪರ್ಯಂತ ಚಿಕಿತ್ಸೆ ಪಡೆಯಬೇಕಾಗಿರೋದು ಮುಖ್ಯವಾಗಿರುತ್ತದೆ. ನಿಯಮಿತ ಚಿಕಿತ್ಸೆಯು ಗ್ಲಾಕೋಮಾ ಕಾಯಿಲೆ ಉಲ್ಬಣಗೊಳ್ಳುವುದನ್ನು ತಡೆಹಿಡಿದು ಸಂಭವಿಸುವ ಹಾನಿಯನ್ನು ತಪ್ಪಿಸಿ ನಿಮ್ಮ ದೃಷ್ಟಿಯನ್ನು ರಕ್ಷಿಸಿಕೊಳ್ಳಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.