ETV Bharat / bharat

ಬಿಯಾಂತ್ ಸಿಂಗ್ ಪ್ರತಿಮೆ ಮೇಲೆ ಖಲಿಸ್ತಾನ್ ಜಿಂದಾಬಾದ್ ಬರಹ.. ಪೊಲೀಸರಿಂದ ತನಿಖೆ ಚುರುಕು

author img

By

Published : Aug 28, 2022, 6:46 PM IST

ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಪ್ರತಿಮೆಯ ಮೇಲೆ ಅಪರಿಚಿತರು ಖಲಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದೆ.

ಬಿಯಾಂತ್ ಸಿಂಗ್ ಪ್ರತಿಮೆ ಮೇಲೆ ಖಲಿಸ್ತಾನ್ ಜಿಂದಾಬಾದ್

ಜಲಂಧರ್: ಇಂದು ಜಲಂಧರ್ ಬಿಎಂಸಿ ಚೌಕದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಪ್ರತಿಮೆಯ ಮೇಲೆ ಅಪರಿಚಿತರು ಖಲಿಸ್ತಾನ್ ಜಿಂದಾಬಾದ್ ಮತ್ತು ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆಗಳನ್ನು ಬರೆದಿದ್ದಾರೆ.

ಇದರ ಸಮೀಪದಲ್ಲಿದ್ದ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಬ್ಯಾನರ್ ನಲ್ಲೂ ಈ ಘೋಷಣೆಗಳನ್ನು ಬರೆಯಲಾಗಿತ್ತು. ಮತ್ತೊಂದೆಡೆ ಸಿಖ್​ ಫಾರ್​ ಜಸ್ಟೀಸ್​ ಸಂಘಟನೆಯ ಮುಖ್ಯಸ್ಥ ಗುರ್ಪತ್‌ವಂತ್ ಸಿಂಗ್ ಪನ್ನು ಅವರು ಪಂಜಾಬ್ ಡಿಜಿಪಿ ಗೌರವ್ ಯಾದವ್ ಸೇರಿದಂತೆ ಹಲವರಿಗೆ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.

ಕೆಲವು ದಿನಗಳ ಹಿಂದೆ ಈ ವಿಷಯದ ಸಂಬಂಧ ಜಲಂಧರ್ ಆಡಳಿತವು ನಗರದ ಹಲವೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಮಾತನಾಡಿತ್ತು. ಆದರೆ, ಇಂದು ಈ ಕೃತ್ಯ ಎಸಗಲಾಗಿದೆ. ಈ ಘೋಷಣೆಗಳೊಂದಿಗೆ ಪೊಲೀಸ್ ಆಡಳಿತದ ಕಾರ್ಯ ವ್ಯವಸ್ಥೆಯನ್ನು ಮತ್ತೊಮ್ಮೆ ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಹೈಟೆಕ್​ ಆಸ್ಪತ್ರೆ ನಿರ್ಮಿಸುವುದು ಸಿಧು ಮುಸೇವಾಲಾ ಕನಸಾಗಿತ್ತು: ತಂದೆ ಬಲ್ಕೌರ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.