ಅರಾರಿಯಾ (ಬಿಹಾರ) : ಜಿಲ್ಲೆಯ ಕವಾಯಾ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಆರು ಮಕ್ಕಳು ಮೃತಪಟ್ಟಿದ್ದಾರೆ.
ವರದಿಗಳ ಪ್ರಕಾರ, ಮಕ್ಕಳು ಗುಡಿಸಲಿನಲ್ಲಿ ಜೋಳ ಹುರಿಯುತ್ತಿದ್ದಾಗ ಬೆಂಕಿಯ ಕಿಡಿ ಹಾರಿ ಇಡೀ ಗುಡಿಸಲಿಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಗುಡಿಸಲಿನಲ್ಲಿದ್ದ ಮಕ್ಕಳು ಸುಟ್ಟು ಹೋಗಿದ್ದಾರೆ.
ಇದನ್ನೂ ಓದಿ: ರಸ್ತೆಗೆ ಬಿದ್ದ ಬಳಿಕ ಬೈಕ್‌ಗೆ ಹತ್ತಿಕೊಂಡ ಬೆಂಕಿ: ಸವಾರ ಸಜೀವ ದಹನ
ಅಶ್ರಫ್ (5), ಗುಲ್ನಾಜ್ (2.5), ದಿಲ್ಬಾರ್ (4), ತಬ್ರೆಜ್ (3), ಅಲಿ ಹಸನ್ (4) ಮತ್ತು ಹುಸ್ನಾರಾ (2.5) ಮೃತ ಮಕ್ಕಳು. ಈ ಘಟನೆ ನಡೆದ ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಮಕ್ಕಳನ್ನು ಉಳಿಸಲು ಸಾಧ್ಯವಾಗಿಲ್ಲ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿ ನಂದಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.