ಚಂಡೀಗಢ : ಕೋಟಕಪುರ ಗುಂಡಿನ ದಾಳಿ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದೆ. ಈ ಪ್ರಕರಣವನ್ನು ಎಡಿಜಿಪಿ ಎಲ್‌ಕೆ ಯಾದವ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್ಐಟಿ)ವು ತನಿಖೆ ನಡೆಸಿದ್ದು, ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ಎಸ್ಐಟಿ ತಂಡವು ವಾಟ್ಸಾಪ್ ಸಂಖ್ಯೆ ಮತ್ತು ಇಮೇಲ್ನ್ನು ಬಿಡುಗಡೆ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಇರುವ ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಇಲ್ಲಿನ ಪೊಲೀಸ್ ಪ್ರಧಾನ ಕಚೇರಿ, ಸೆಕ್ಟರ್ 9-ಸಿ, 6 ನೇ ಮಹಡಿಯಲ್ಲಿ ಬಂದು ಮಾಹಿತಿ ನೀಡಬಹುದು. ಮಾರ್ಚ್ 16, ಮಾರ್ಚ್ 23 ಮತ್ತು ಮಾರ್ಚ್ 30ರ ಮೂರು ದಿನಗಳ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1 ರ ವರೆಗೆ ಬಂದು ಮಾಹಿತಿ ನೀಡಬಹುದು ಎಂದು ತಿಳಿಸಲಾಗಿದೆ.
ಕೋಟಕಪುರ ಗುಂಡಿನ ದಾಳಿ ಪ್ರಕರಣವು 2015ರ ಅಕ್ಟೋಬರ್ 14ರಂದು ಬೆಹಬಲ್ ಕಲಾನ್ ಎಂಬಲ್ಲಿ ನಡೆದಿತ್ತು. ಈ ಪ್ರಕರಣದ ತನಿಖೆಯನ್ನು ಎಡಿಜಿಪಿ ಎಲ್‌ಕೆ ಯಾದವ್ ನೇತೃತ್ವದ ವಿಶೇಷ ತನಿಖಾ ತಂಡವು ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಾದರು ಯಾವುದೇ ಸೂಕ್ತ ಮಾಹಿತಿಯನ್ನು ಹೊಂದಿದ್ದರೆ ನಮ್ಮನ್ನು ಭೇಟಿ ಮಾಡಿ ಮಾಹಿತಿ ನೀಡಬಹುದು. ಇದು ಪ್ರಕರಣದ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.
ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಬಿಡುಗಡೆ : ಎಡಿಜಿಪಿ ಎಲ್.ಕೆ.ಯಾದವ್ ನೇತೃತ್ವದ ವಿಶೇಷ ತನಿಖಾ ತಂಡವು '9875983237' ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಅಥವಾ 'newsit2021kotkapuracase@gmail.com' ಇಮೇಲ್ ಮಾಡುವ ಮೂಲಕ ಪ್ರಕರಣ ಸಂಬಂಧ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ತಿಳಿಸಿದೆ. ಈ ಹಂತದಲ್ಲಿ ಯಾವುದೇ ಜವಾಬ್ದಾರಿಯುತ ವ್ಯಕ್ತಿ ನೀಡಿದ ಯಾವುದೇ ಮಾಹಿತಿಯು ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತನಿಖಾ ತಂಡಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಜನರಿಗೆ ಅಭಿನಂದನೆ ಸಲ್ಲಿಸಿದ ಎಸ್ಐಟಿ : ಪ್ರಕರಣ ಸಂಬಂಧ ಸಹಕರಿಸಿದ ಪಂಜಾಬ್ ಜನರಿಗೆ ವಿಶೇಷ ತನಿಖಾ ತಂಡದಿಂದ ಎಡಿಜಿಪಿ ಕೃತಜ್ಞತೆ ಸಲ್ಲಿಸಿದರು. ಕೋಟಕ್‌ಪುರ ಗುಂಡಿನ ದಾಳಿ ಪ್ರಕರಣದ ತನಿಖೆಯ ಕಾನೂನು ಪ್ರಕ್ರಿಯೆಯಲ್ಲಿ ಪಂಜಾಬ್‌ನ ಜನರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಹಿರಿಯ ಅಧಿಕಾರಿಗಳನ್ನು ಒಳಗೊಂಡಿದ್ದ ತನಿಖಾ ತಂಡ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ಎಡಿಜಿಪಿ ಅವರನ್ನು ಪ್ರಕರಣದ ತನಿಖೆಗೆ ನೇಮಿಸಿತ್ತು. ಪ್ರಕರಣದ ತನಿಖಾ ತಂಡದಲ್ಲಿ ಎಲ್.ಕೆ.ಯಾದವ್, ಐ.ಜಿ. ರಾಕೇಶ್ ಅಗರ್ವಾಲ್ ಮತ್ತು ಎಸ್‌ಎಸ್‌ಪಿ ಮೊಗಾ, ಗುಲ್ನೀತ್ ಸಿಂಗ್ ಖುರಾನಾ ಸೇರಿದಂತೆ ಹಿರಿಯ ಅಧಿಕಾರಿಗಳಿದ್ದರು. ಈ ತನಿಖಾ ತಂಡವು 2023ರ ಫೆಬ್ರವರಿ 24 ರಂದು ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ಮೊದಲ ವರದಿ ಸಲ್ಲಿಸಿತ್ತು.
ಇದನ್ನೂ ಓದಿ : ಹಿಮದಲ್ಲಿ ಸಿಲುಕಿದ್ದ 100 ವಾಹನಗಳು: 50 ಮಕ್ಕಳು ಸೇರಿ 370 ಪ್ರವಾಸಿಗರ ರಕ್ಷಿಸಿದ ಭಾರತೀಯ ಸೇನೆ