ETV Bharat / bharat

SIM Dealers: ಸಿಮ್​ ಡೀಲರ್​ಗಳಿಗೆ ಪೊಲೀಸ್​ ವೆರಿಫಿಕೇಶನ್ ಕಡ್ಡಾಯ; ಬಲ್ಕ್​​ ಮಾರಾಟಕ್ಕೆ ನಿರ್ಬಂಧ - ಸಿಮ್ ವಿತರಕರ ಕಡ್ಡಾಯ ಪೊಲೀಸ್ ಪರಿಶೀಲನೆ

SIM Dealers: ಸಿಮ್​ ಕಾರ್ಡ್​​ ಡೀಲರ್​ಗಳ ಪೊಲೀಸ್​ ವೆರಿಫೀಕೇಶನ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.​

Centre makes police verification of SIM dealers

author img

By

Published : Aug 17, 2023, 7:04 PM IST

ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ಎರಡು ಮಹತ್ತರ ಸುಧಾರಣೆಗಳನ್ನು ಕೇಂದ್ರ ಸರ್ಕಾರ ಗುರುವಾರ ಜಾರಿಗೊಳಿಸಿದೆ. ಸಿಮ್ ವಿತರಕರ ಕಡ್ಡಾಯ ಪೊಲೀಸ್ ಪರಿಶೀಲನೆ ಮತ್ತು ದೊಡ್ಡ ಪ್ರಮಾಣದಲ್ಲಿ ಒಬ್ಬರಿಗೇ ಸಿಮ್ ಸಂಪರ್ಕ ನೀಡುವುದನ್ನು ಸ್ಥಗಿತಗೊಳಿಸಿರುವುದು ಕೇಂದ್ರ ಸರ್ಕಾರ ಕೈಗೊಂಡ ಹೊಸ ಕ್ರಮಗಳಾಗಿವೆ. ಡಿಜಿಟಲ್ ಆರ್ಥಿಕತೆಯ ಈ ಸಮಯದಲ್ಲಿ ಮೊಬೈಲ್ ಚಂದಾದಾರರನ್ನು ವಂಚನೆಯಿಂದ ರಕ್ಷಿಸುವ ಸಲುವಾಗಿ ಸರ್ಕಾರ ಈ ಕ್ರಮಗಳಿಗೆ ಮುಂದಾಗಿದೆ.

"ನಾವು ಬಳಕೆದಾರರ ರಕ್ಷಣೆಯ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ" ಎಂದು ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. "ಈ ಸುಧಾರಣೆಗಳು ಸಂಪೂರ್ಣವಾಗಿ ಬಳಕೆದಾರರ ರಕ್ಷಣೆಯ ಮೇಲೆ ಕೇಂದ್ರೀಕರಿಸಿವೆ ಮತ್ತು ಸೈಬರ್ ವಂಚನೆಗಳನ್ನು ಕಡಿಮೆ ಮಾಡುವತ್ತ ಪ್ರಮುಖ ಹೆಜ್ಜೆಯಾಗಿವೆ" ಎಂದು ಅವರು ಹೇಳಿದರು.

ಮೇ ತಿಂಗಳಲ್ಲಿ ಸಂಚಾರ್ ಸಾಥಿ ಪೋರ್ಟಲ್ ಅನ್ನು ಪ್ರಾರಂಭಿಸಿದ ನಂತರ, ನಕಲಿ ದಾಖಲೆಗಳನ್ನು ಬಳಸಿಕೊಂಡು ಪಡೆಯಲಾದ 52 ಲಕ್ಷ ಸಂಪರ್ಕಗಳನ್ನು ದೂರಸಂಪರ್ಕ ಇಲಾಖೆ ಪತ್ತೆ ಹಚ್ಚಿದೆ ಮತ್ತು ನಿಷ್ಕ್ರಿಯಗೊಳಿಸಿದೆ. 67,000 ಸಿಮ್ ವಿತರಕರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಮತ್ತು 300 ಎಫ್ಐಆರ್​ಗಳನ್ನು ದಾಖಲಿಸಲಾಗಿದೆ. ಇದಲ್ಲದೆ, ಕಳ್ಳತನವಾಗಿದೆ ಎಂದು ವರದಿಯಾದ ಅಥವಾ ಮೋಸದಿಂದ ಪಡೆದ 17,000 ಹ್ಯಾಂಡ್​ಸೆಟ್​​ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಅವರು ಹೇಳಿದರು.

ಸಾಮೂಹಿಕ ಸ್ಪ್ಯಾಮಿಂಗ್ ಘಟನೆಗಳ ನಂತರ 66,000 ವಾಟ್ಸ್‌ಆ್ಯಪ್​ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ವಂಚನೆಯ ಪಾವತಿ ವಹಿವಾಟುಗಳಿಗೆ ಬಳಸಲಾಗುತ್ತಿದ್ದ 8 ಲಕ್ಷ ಪೇಮೆಂಟ್​​ ವ್ಯಾಲೆಟ್ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಸಂಚಾರ್ ಸಾಥಿ ಪೋರ್ಟಲ್ ಸಹಾಯದಿಂದ 3 ಲಕ್ಷ ಹ್ಯಾಂಡ್​ಸೆಟ್​ಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಅವನ್ನು ಆಯಾ ಮಾಲೀಕರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸರ್ಕಾರ ಕೈಗೊಳ್ಳುತ್ತಿರುವ ಈ ಪೂರ್ವಭಾವಿ ಕ್ರಮಗಳ ನಂತರ ಒಂದು ವರ್ಷದೊಳಗೆ ಸೈಬರ್ ವಂಚನೆಯ ಘಟನೆಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಲಿದೆ ಎಂದು ಅವರು ಹೇಳಿದರು.

"ದೇಶದ ನಿರ್ದಿಷ್ಟ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಚಕರಿಗೆ ಈಗ ಬಿಸಿ ತಟ್ಟಲಾರಂಭಿಸಿದೆ. ನಾವು ಗುಪ್ತಚರ ಮತ್ತು ಪೊಲೀಸ್ ಅಧಿಕಾರಿಗಳಿಂದ ಈ ಬಗ್ಗೆ ವರದಿಗಳನ್ನು ಪಡೆಯುತ್ತಿದ್ದೇವೆ" ಎಂದು ಅವರು ಹೇಳಿದರು.

ಬ್ಯಾಂಕುಗಳು, ಪೇಟಿಎಂ, ಫೋನ್​ಪೆ ನಂಥ ಹಣಕಾಸು ಸಂಸ್ಥೆಗಳು ಸೇರಿದಂತೆ ಮೋಸದ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾದ 7,00,000 ಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಖಾತೆಗಳು ವಿವಿಧ ಸೈಬರ್ ಅಪರಾಧಗಳಿಂದ ಆದಾಯವನ್ನು ಪಡೆಯುವಲ್ಲಿ ಭಾಗಿಯಾಗಿವೆ" ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಬಲ್ಕ್​ ಅಥವಾ ದೊಡ್ಡ ಸಂಖ್ಯೆಯಲ್ಲಿ ಒಬ್ಬರಿಗೇ ಸಿಮ್ ಮಾರಾಟ ತಡೆಗಟ್ಟುವುದು ಸರ್ಕಾರದ ಎರಡನೇ ಸುಧಾರಣೆಯಾಗಿದೆ. ವಾಸ್ತವಿಕ ಅಂಶಗಳ ಅಧ್ಯಯನದ ಜೊತೆಗೆ ಬಲ್ಕ್​​ ಸಂಪರ್ಕಗಳ ವಿಶ್ಲೇಷಣೆಯ ನಂತರ ನಾವು ಸಿಮ್​ ಕಾರ್ಡ್​ಗಳ ಬಲ್ಕ್​​ ಮಾರಾಟವನ್ನು ನಿಲ್ಲಿಸಲು ತೀರ್ಮಾನಿಸಿದ್ದೇವೆ. ಬಲ್ಕ್​​ ಸಂಪರ್ಕ ವ್ಯವಸ್ಥೆಯನ್ನು 'ಬಿಸಿನೆಸ್​ ಕನೆಕ್ಷನ್​' ಪರಿಕಲ್ಪನೆಯೊಂದಿಗೆ ಬದಲಾಯಿಸಲಾಗುವುದು ಎಂದು ವೈಷ್ಣವ್ ಹೇಳಿದರು.

ಇದನ್ನೂ ಓದಿ : Stock Market: ನಿಫ್ಟಿ 100 & ಸೆನ್ಸೆಕ್ಸ್ 388 ಅಂಕ ಇಳಿಕೆ; ರೂಪಾಯಿ ಕುಸಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.