ETV Bharat / bharat

ರಾಹುಲ್​ ಭೇಟಿ ಬೆನ್ನಲ್ಲೇ ಶಮನಗೊಂಡ ಭಿನ್ನಮತ... ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಧು ಮುಂದುವರಿಕೆ

ರಾಹುಲ್​ ಗಾಂಧಿ ಭೇಟಿ ಬೆನ್ನಲ್ಲೇ ಭಿನ್ನಮತ ಶಮನಗೊಂಡಿದ್ದು, ಪಂಜಾಬ್ ಕಾಂಗ್ರೆಸ್​ ಅಧ್ಯಕ್ಷರಾಗಿ ಮುಂದುವರೆಯುವುದಾಗಿ ನವಜೋತ್ ಸಿಂಗ್​​ ಸಿಧು ತಿಳಿಸಿದ್ದಾರೆ.

Navjot Singh Sidhu
Navjot Singh Sidhu
author img

By

Published : Oct 15, 2021, 10:50 PM IST

ನವದೆಹಲಿ: ದಿಢೀರ್​ ಬೆಳವಣಿಗೆಯೊಂದರಲ್ಲಿ ಪಂಜಾಬ್​ನ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್​ ಸಿಂಗ್ ಸಿಧು ಇದೀಗ ಅದನ್ನ ಹಿಂಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಪಂಜಾಬ್​ ಕಾಂಗ್ರೆಸ್​ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ಅಲ್ಪ ವಿರಾಮ ಬಿದ್ದಿದೆ.

ಪಂಜಾಬ್​ ಅಭಿವೃದ್ಧಿ ವಿಷಯದಲ್ಲಿ ನಾನು ಯಾವುದೇ ಕಾರಣಕ್ಕೂ ರಾಜಿಯಾಗಲ್ಲ ಎಂದು ಹೇಳಿದ್ದ ನವಜೋತ್​ ಸಿಂಗ್​ ಸಿಧು ಸೆಪ್ಟೆಂಬರ್​ 28 ರಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಂಜಾಬ್ ಸಿಎಂ ಚರಣ್​ಜಿತ್ ಸಿಂಗ್ ಚನ್ನಿ ಸೇರಿದಂತೆ ಅನೇಕ ಕಾಂಗ್ರೆಸ್​ ಮುಖಂಡರು ಅವರ ಮನವೊಲಿಕೆ ಕಸರತ್ತು ಮಾಡಿದ್ದರು. ಆದರೆ, ಈ ವೇಳೆ ಮಾತು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದರು.

  • I shared all my concerns with Rahul Gandhi. Everything has been sorted out: Navjot Singh Sidhu after meeting with Congress leader Rahul Gandhi in Delhi pic.twitter.com/cdd6g6de4W

    — ANI (@ANI) October 15, 2021 " class="align-text-top noRightClick twitterSection" data=" ">

ಹೈಕಮಾಂಡ್ ಮಾತಿಗೆ ಮಣೆದ ಸಿಧು

ನಿನ್ನೆ ನವಜೋತ್ ಸಿಂಗ್ ಸಿಧು ಜೊತೆ ಮಾತುಕತೆ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪಂಜಾಬ್​​​​ ಕಾಂಗ್ರೆಸ್​ ಉಸ್ತುವಾರಿ ಹರೀಶ್​ ರಾವತ್​, ಬರೋಬ್ಬರಿ 1 ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದರು. ಈ ವೇಳೆ, ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವಂತೆ ಮನವಿ ಮಾಡಿದ್ದರು. ಈ ವೇಳೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್​​ ಸಹ ಉಪಸ್ಥಿತರಿದ್ದರು. ಇವರ ಮಾತಿಗೆ ಒಪ್ಪಿಕೊಂಡಿದ್ದ ಸಿಧು, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುವುದಾಗಿ ತಿಳಿಸಿದ್ದರು.

ರಾಹುಲ್ ಭೇಟಿ ಮಾಡಿದ ಸಿಧು

ಇದರ ಬೆನ್ನಲ್ಲೇ ಇಂದು ರಾಹುಲ್ ಗಾಂಧಿ ಭೇಟಿ ಮಾಡಿ ಮಾತುಕತೆ ನಡೆಸಿರುವ ನವಜೋತ್​ ಸಿಂಗ್​ ಸಿಧು, ಪಂಜಾಬ್​ ಅಧ್ಯಕ್ಷನಾಗಿ ಮುಂದುವರೆಯುವುದಾಗಿ ತಿಳಿಸಿದ್ದು, ತಮ್ಮ ರಾಜೀನಾಮೆ ಹಿಂಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಪಂಜಾಬ್​ನಲ್ಲಿ ನಾಳೆಯಿಂದಲೇ ಕೆಲಸ ಆರಂಭ ಮಾಡುವುದಾಗಿ ತಿಳಿಸಿದ್ದಾರೆ.

ಇದರ ಜೊತೆಗೆ ಎಲ್ಲ ವಿಷಯಗಳ ಬಗ್ಗೆ ರಾಹುಲ್​ ಗಾಂಧಿ ಗಮನಕ್ಕೆ ತರಲಾಗಿದ್ದು, ಇದೀಗ ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದ್ದಾರೆ. ಜೊತೆಗೆ ರಾಜ್ಯದಲ್ಲಿರುವ ಕೆಲವೊಂದು ಸಮಸ್ಯೆ ಬಗೆಹರಿಸುವುದಾಗಿ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಹೀಗಾಗಿ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷನಾಗಿ ಮುಂದುವರೆಯಲಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.